ಮಡಿಕೇರಿ, ಅ. ೩೧: ಕೊಡಗು ಜಿಲ್ಲೆಯಲ್ಲಿ ಅಹಿಂದ ಸಮುದಾಯದ ಸಂಘಟನೆ ಮತ್ತು ಬಲವರ್ಧನೆಯ ಉದ್ದೇಶದಿಂದ ರಚನೆಗೊಂಡಿರುವ ಅಹಿಂದ ಬಳಗ ಕೊಡಗು ಜಿಲ್ಲೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಉಪಾಧ್ಯಕ್ಷರುಗಳಾಗಿ ಹೆಚ್.ಎಂ. ನಂದಕುಮಾರ್, ಬಿ.ಇ. ಜಯೇಂದ್ರ, ಬಾಪು ಮಾಯಾಮುಡಿ, ರಾಜೇಶ್ ವೀರಾಜಪೇಟೆ, ಅರುಣ್‌ರಾವ್ ಹಾಗೂ ವಿಕ್ಟರ್ ಜಾನ್ಸನ್ ಆಯ್ಕೆಯಾಗಿದ್ದಾರೆ.

ಹಿರಿಯ ಸಲಹೆಗಾರರಾಗಿ ಕೆ.ಕೆ.ಮಂಜುನಾಥ್ ಕುಮಾರ್, ಕೆ.ಎ.ಯಾಕುಬ್, ಆದಮ್ ಸೋಮವಾರಪೇಟೆ, ಕೋಯ ಹೊಸತೋಟ, ವೈ.ಟಿ. ಪರಮೇಶ್ ಹಾಗೂ ರಾಜಪ್ಪ ಮೆಣಸ ಬೆಟ್ಟ, ಸಂಘಟನಾ ಕಾರ್ಯದರ್ಶಿಗಳಾಗಿ ರವಿ ಅಜ್ಜಳ್ಳಿ, ಅಬ್ಬಾಸ್ ಶನಿವಾರಸಂತೆ, ಮುದ್ದು ರಾಜ್ ಮಡಿಕೇರಿ, ನಿತೀಶ್ ಗೋಣಿಕೊಪ್ಪ, ರಜನಿಕಾಂತ್ ವೀರಾಜಪೇಟೆ ಹಾಗೂ ಅಶೋಕ ಗೋಪಾಲಪುರ ಅವರುಗಳನ್ನು ಆಯ್ಕೆ ಮಾಡಲಾಗಿದೆ.

ಕಾರ್ಯದರ್ಶಿಗಳಾಗಿ ಕೆ.ಎಂ.ಸೈಯದ್ ಬಾವ ಹಾಗೂ ಅಶ್ರಫ್ ಕುಶಾಲನಗರ, ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಪ್ರೀತಮ್ ಪೊನ್ನಪ್ಪ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಸುಪ್ರೀತಾ ನೀರುಗುಂದ, ಸಮಿತಿ ಸದಸ್ಯರುಗಳಾಗಿ ಮಂಜು ಕೂಡಿಗೆ, ವಿಜಿ ಅಳುವಾರ, ಮೋಹನ್ ರಾಜ್ ತಣ್ಣೀರ್ ಹಳ್ಳ, ಯೇಸು ಬಸವನಹಳ್ಳಿ, ರಾಜಶೇಖರ ಶನಿವಾರಸಂತೆ, ಜಗದೀಶ ಕೊಡ್ಲಿಪೇಟೆ, ಜೆ.ಆರ್.ಪಾಲಾಕ್ಷ, ಯೋಗೇಶ ಚೆನ್ನಯ್ಯನಕೋಟೆ, ದಾಮೋದರ ಮಾದಾಪಟ್ಟಣ, ಹೊನ್ನಪ್ಪ ಚೌಡ್ಲು, ಚಂದ್ರು ಸಬ್ಬನ್ ಕೊಪ್ಪ, ದಾಮೋದರ ಬೆಳಕಿಕೊಪ್ಪ ಹಾಗೂ ರತನ್ ಹಾನಗಲ್ ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ಅಹಿಂದ ಬಳಗದ ಕೊಡಗು ಜಿಲ್ಲಾಧ್ಯಕ್ಷ ನಾಪಂಡ ಮುತ್ತಪ್ಪ ತಿಳಿಸಿದ್ದಾರೆ. ಮುಂದಿನ ಹಂತದಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿಯೂ ಸಮಿತಿಗಳನ್ನು ರಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.