ಮಡಿಕೇರಿ, ಅ. ೩೧: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಕೊಡಗಿನವರಾದ ಅಯ್ಯುಡ ರಾಬಿನ್ ಉತ್ತಪ್ಪ ಇದೀಗ ಮುಂಬರಲಿರುವ ಐ.ಪಿ.ಎಲ್. ಕ್ರಿಕೆಟ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನಿಯುಕ್ತಿಗೊಂಡಿದ್ದಾರೆ.
ಸುAಟಿಕೊಪ್ಪ ಕಂಬಿಬಾಣೆಯವರಾದ ರಾಬಿನ್ ಉತ್ತಪ್ಪ ೨೦೦೭ ರಲ್ಲಿ ಭಾರತ ಟಿ-೨೦ ವಿಶ್ವಕಪ್ ಗೆದ್ದ ಸಂದರ್ಭ ಭಾರತದ ಆಟಗಾರರಾಗಿದ್ದಾರೆ. ನಂತರದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಇವರು ಐ.ಪಿ.ಎಲ್.ನಲ್ಲಿ ೨೦೦೮ ರಲ್ಲಿ ಮುಂಬೈ ಇಂಡಿಯನ್ಸ್, ನಂತರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಆರ್.ಸಿ.ಬಿ., ಪುಣೆ ವಾರಿಯರ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೆöÊ ಸೂಪರ್ ಕಿಂಗ್ಸ್ ಪರ ಆಡಿದ್ದರು. ೨೦೧೪ ರಲ್ಲಿ ಕೆ.ಕೆ.ಆರ್. ಪರ ಆಗಿನ ಆವೃತ್ತಿ ಅತ್ಯಧಿಕ ರನ್ ಬಾರಿಸಿದ್ದರು.