ಮಡಿಕೇರಿ, ಅ.೩೧: ಬ್ರಿಟಿಷರ ಆಡಳಿತದಲ್ಲಿದ್ದ ಭಾರತದ ಸ್ವಾತಂತ್ರö್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು ಕೊಡಗು ಜಿಲ್ಲೆಗೆ ಮಾತ್ರವಲ್ಲ ಅವರು ಈ ದೇಶದ ಆಸ್ತಿ ಎಂದು ಜಿಲ್ಲೆಯ ಶಾಸಕರುಗಳಾದ ಡಾ. ಮಂತರ್ ಗೌಡ ಹಾಗೂ ಎ.ಎಸ್. ಪೊನ್ನಣ್ಣ ಅವರುಗಳು ಅಭಿಮತ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರö್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರುಗಳು ಮಾತನಾಡಿದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ; ಈ ನಾಡಿನ ಸ್ವಾತಂತ್ರö್ಯಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ ಗುಡ್ಡೆಮನೆ ಅಪ್ಪಯ್ಯ ಗೌಡ ಅವರನ್ನು ಒಂದು ದಿವಸ ಮಾತ್ರ ಗೌರವಿಸುವ ಕೆಲಸವಾಗಬಾರದು, ಅವರನ್ನು ವರ್ಷದ ೩೬೫ ದಿನಗಳು ಕೂಡ ನೆನಪಿಸಿಕೊಳ್ಳುವಂತಾಗಬೇಕೆAದು ಹೇಳಿದರು. ಸ್ವಾತಂತ್ರö್ಯ ಸಂಗ್ರಾಮದ ಕಾಲದಲ್ಲಿ ಅವರ ಹೋರಾಟ ಸಾಧಾರಣ ಸಾಧನೆಯಲ್ಲ, ಕೊಡಗು, ದ.ಕ ಜಿಲ್ಲೆಯಲ್ಲಿ ಹೋರಾಟಗಾರರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಅವರು ಕೇವಲ ಗೌಡ ಜನಾಂಗದ ನಾಯಕರು ಮಾತ್ರವಲ್ಲ, ಈ ದೇಶದ ಆಸ್ತಿ, ಅವರ ಸಾಧನೆ, ತ್ಯಾಗವನ್ನು ಎಲ್ಲರೂ ನಿರಂತರ ಗೌರವಿಸುವಂತಾಗಬೇಕೆAದು ಹೇಳಿದರು. ಗೌಡ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಲಾಗಿದ್ದು, ಇನ್ನಷ್ಟು ಬೇಡಿಕೆಗಳು ಬಂದಿವೆ, ಈ ಕಾರ್ಯಗಳಿಗೆ ಸಹಕಾರ ನೀಡುವದಾಗಿ ಇದೇ ಸಂದರ್ಭ ಭರವಸೆ ನೀಡಿದರು.

ಧೀಮಂತ ವ್ಯಕ್ತಿ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ವೀರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಎ.ಎಸ್. ಪೊನ್ನಣ್ಣ ಅವರು ಮಾತನಾಡಿ; ಅಪ್ಪಯ್ಯ ಗೌಡರು ಒಂದು ಸಮುದಾಯಕ್ಕೆ ಸೇರಿದವರಲ್ಲ,೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ನಮ್ಮ ದೇಶದ ಸ್ವಾತಂತ್ರö್ಯಕ್ಕಾಗಿ ಬ್ರಿಟಿಷರೊಂದಿಗೆ ಹೋರಾಡಿದ ಧೀಮಂತ ವ್ಯಕ್ತಿಯಾಗಿದ್ದಾರೆ. ಅವರ ಹೋರಾಟ, ಕೊಡುಗೆಯನ್ನು ಸ್ಮರಿಸುವ ಕಾರ್ಯ ಒಂದು ದಿವಸಕ್ಕೆ ಸೀಮಿತವಾಗದೆ ಪ್ರತಿನಿತ್ಯ ಗೌರವ ಸಲ್ಲಿಸುವಂತಾಗಬೇಕೆAದು ಹೇಳಿದರು. ದೇಶಕ್ಕಾಗಿ ಅವರು ನೀಡಿದ ಕೊಡುಗೆ, ತ್ಯಾಗವನ್ನು ಪ್ರತಿಯೋರ್ವ ನಾಗರಿಕರು ಸ್ಮರಿಸಿಕೊಳ್ಳಬೇಕು, ಬ್ರಿಟಿಷರ ವಿರುದ್ಧದ ಸ್ವಾತಂತ್ರö್ಯ ಹೋರಾಟದಲ್ಲಿ ಅವರು ಅನುಭವಿಸಿದ ನೋವು, ಅಂತ್ಯ, ಅರ್ಪಣೆ, ಬಲಿದಾನ ಎಲ್ಲರಿಗೂ ಮಾದರಿಯಾಗಿದೆ. ಹಾಗಾಗಿ ಇಂತಹ ಕಾರ್ಯಕ್ರಮಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಆಚರಣೆ ಮಾಡಬೇಕು ಎಂದರು. ಇದೇ ಸಂದರ್ಭ ಶಾಕರುಗಳಾದಿಯಾಗಿ ವಿವಿಧ ಗೌಡ ಸಮಾಜಗಳ ಸಂಘಟನೆಗಳ ಪ್ರಮುಖರು ಅಪ್ಪಯ್ಯ ಗೌಡರ ಪ್ರತಿಮಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಗೀತ ನಮನ

ಕಾರ್ಯಕ್ರಮದಲ್ಲಿ ವಿವಿಧ ಗೌಡ ಸಮಾಜಗಳ ಮಹಿಳಾ ಒಕ್ಕೂಟಗಳು, ಶಾಲಾ ವಿದ್ಯಾರ್ಥಿಗಳಿಂದ ಅಪ್ಪಯ್ಯ ಗೌಡರ ಕುರಿತಾದ ಹಾಡುಗಳನ್ನು ಹಾಡುವದರ ಮೂಲಕ ಗೀತ ನಮನ ಸಲ್ಲಿಸಲಾಯಿತು.

ಸಾಂಪ್ರದಾಯಿಕ ಮೆರವಣಿಗೆ

ಕಾರ್ಯಕ್ರಮದ ಬಳಿಕ ಸಾಂಪ್ರದಾಯಿಕ ಉಡುಪಿನಲ್ಲಿದ್ದ ಗೌಡ ಸಮುದಾಯ ಬಾಂಧವರು, ಸಾರ್ವಜನಿಕರು, ದೇಶ ಭಕ್ತರು, ಅಪ್ಪಯ್ಯ ಗೌಡರ ಪ್ರತಿಮೆ ಬಳಿಯಿಂದ ಮೆರವಣಿಗೆಯೊಂದಿಗೆ ನಗರದ ಕೋಟೆ ಆವರಣದಲ್ಲಿರುವ ಅಪ್ಪಯ್ಯ ಗೌಡರನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುವ ಸ್ಮಾರಕದವರೆಗೆ ತೆರಳಿ ಅಲ್ಲಿ ಸಮಾವೇಶಗೊಂಡರು.

ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮಂಗಳೂರು ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನೆ ಸಮಿತಿ ಅಧ್ಯಕ್ಷ ಹಾಗೂ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಅಕಾಡೆಮಿ ಮಾಜಿ ಅಧ್ಯಕ್ಷರುಗಳಾದ ಲಕ್ಷಿö್ಮನಾರಾಯಣ ಕಜೆಗದ್ದೆ, ಕೊಲ್ಯದ ಗಿರೀಶ್, ಅಪ್ಪಯ್ಯ ಗೌಡ ಸ್ಮಾರಕ ಸಮಿತಿ ಸ್ಥಾಪಕ ಅಧ್ಯಕ್ಷ ಟಿ.ಪಿ. ರಮೇಶ್, ಸ್ಮಾರಕ ನಿರ್ವಹಣಾ ಸಮಿತಿ ಅಧ್ಯಕ್ಷ ತುಂತಜೆ ಗಣೇಶ್, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ, ಗೌಡ ಒಕ್ಕೂಟದ ಮಾಜಿ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಮಡಿಕೇರಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಂದ್ರಿರ ಮೋಹನ್ ದಾಸ್, ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್, ಕೊಡಗು ದಕ್ಷಿಣ ಕನ್ನಡ ಒಕ್ಕಲಿಗ ಸಮಾಜಗಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಗುಡ್ಡೆಮನೆ ಕುಟುಂಬಸ್ಥರಾದ ಚಿನ್ನಯ್ಯ, ರಮೇಶ್, ವಿಶ್ವಕುಮಾರ್, ಅಪರ ಜಿಲ್ಲಾಧಿಕಾರಿ ಜಯಲಕ್ಷಿö್ಮ, ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಸೇರಿದಂತೆ ವಿವಿಧ ಸಮಾಜಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸಮುದಾಯ ಬಾಂಧವರು ಪಾಲ್ಗೊಂಡಿದ್ದರು.