ವೀರಾಜಪೇಟೆ, ಅ. ೩೦: ವೀರಾಜಪೇಟೆಯ ಶ್ರೀ ಕಾವೇರಿ ಆಶ್ರಮದ ಆವರಣದಲ್ಲಿ ೩೭ನೇ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವವು ನೆರವೇರಿತು. ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಸತ್ಯನಾರಾಯಣ ಸ್ವಾಮಿಗೆ ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ನಡೆಯಿತು, ತೀರ್ಥ ಪ್ರಸಾದ ಹಾಗೂ ಮಹಾಪ್ರಸಾದ ವಿತರಿಸಲಾಯಿತು.