ಮಡಿಕೇರಿ, ಅ. ೩೦: ಕರ್ನಾಟಕ ಸರಕಾರದಿಂದ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಇಬ್ಬರು ಆಯ್ಕೆಯಾಗಿದ್ದಾರೆ.

ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರತಿ ವರ್ಷ ನೀಡಲಾಗುವ ಪ್ರಶಸ್ತಿಗೆ ಅರ್ಜುನ ಪ್ರಶಸ್ತಿ ಪುರಸ್ಕೃತ, ಹಾಕಿ ಒಲಿಂಪಿಯನ್ ಡಾ. ಅಂಜಪರವAಡ ಬಿ. ಸುಬ್ಬಯ್ಯ ಹಾಗೂ ಸಂಕೀರ್ಣ ಕ್ಷೇತ್ರದಲ್ಲಿ ಫ್ಯಾಷನ್ ಗುರು ಎಂದೇ ಖ್ಯಾತಿ ಗಳಿಸಿರುವ ನಡಿಕೇರಿಯಂಡ ಪ್ರಸಾದ್ ಬಿದ್ದಪ್ಪ ಆಯ್ಕೆಗೊಂಡಿದ್ದಾರೆ.

ವಿವಿಧ ಕ್ಷೇತ್ರಗಳ ಒಟ್ಟು ೭೧ ಸಾಧಕರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.