ಮಡಿಕೇರಿ, ಅ. ೩೦; ನಗರದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ಖಾಲಿ ಉಳಿದಿರುವ ಬಿ.ಎಸ್ಸಿ ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್ಗಳ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅನುಮೋದನೆ ದೊರೆತಿದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ನೇರ ಪ್ರವೇಶಾತಿ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ತಾ. ೩೧ ರ (ಇಂದು) ಮಧ್ಯಾಹ್ನ ೧ ಗಂಟೆಯ ಒಳಗಾಗಿ ವಿದ್ಯಾರ್ಥಿಗಳು ನಿಗದಿತ ಸಮಯದೊಳಗೆ ಅಗತ್ಯ ದಾಖಲೆಗಳೊಂದಿಗೆ ಕಾಲೇಜಿನ ಆಡಳಿತ ಕಚೇರಿಗೆ ನೇರವಾಗಿ ಹಾಜರಾಗಬೇಕು.

ರೆಸ್ಪಿರೇಟರಿ ಕೇರ್ ಟೆಕ್ನಾಲಜಿ ೪ ಸೀಟ್, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ ೧೧, ಆಪ್ಟೋಮೆಟ್ರಿ ಟೆಕ್ನಾಲಜಿ ೧೦, ಅನಸ್ಥೇಷಿಯಾ ಮತ್ತು ಆಪರೇಷನ್ ಥಿಯೇಟರ್ ಟೆಕ್ನಾಲಜಿ ೪, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ, ೨ ಸೀಟ್ ಸೇರಿ ಒಟ್ಟು ೨೧ ಸೀಟ್‌ಗಳು ಭರ್ತಿಗೆ ಅವಕಾಶವಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆರಿಫಿಕೇಶನ್ ಸ್ಲಿಪ್ ಸಹಿತ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ೬೩೬೬೦೬೦೭೨೮ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.