ಮಡಿಕೇರಿ ಅ.೩೦ : ಕೂರ್ಗ್ ಹಾಕ್ಸ್ ಕ್ಲಬ್ ಹಾಗೂ ಕೇರಳದ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ (ಯುಟಿಎಸ್ಸಿ) ಸಹಭಾಗಿತ್ವದಲ್ಲಿ ಹಾಕಿ ಕೂರ್ಗ್ ಅಧೀನದಲ್ಲಿ ನಗರದ ಸಾಯಿ ಕ್ರೀಡಾ ತರಬೇತಿ ಕೇಂದ್ರದ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ೩ ದಿನಗಳ ಕಾಲ ಆಯೋಜಿತ ೨ನೇ ಆವೃತ್ತಿಯ ‘ಫ್ಯಾಪ್ ಕಪ್ ಹಾಕಿ’ ಪಂದ್ಯಾವಳಿಗೆ ಇಂದು ಚಾಲನೆ ನೀಡಲಾಯಿತು.
ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಅವರು ಹಾಕಿ ಸ್ಟಿಕ್ನಿಂದ ಚೆಂಡನ್ನು ತಳ್ಳುವ ಮೂಲಕ ಹಾಕಿ ಪಂದ್ಯಾಳಿಯನ್ನು ಉದ್ಘಾಟಿಸಿ ಶುಭ ಕೋರಿದರು. ಇದಕ್ಕೂ ಮುನ್ನ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆಯಿಂದ ಬರಗಾಲ ಎದುರಾಗಿದ್ದರೂ ಕ್ರೀಡೆಗಳಿಗೆ ಕೊಡಗಿನಲ್ಲಿ ಯಾವುದೇ ಬರವಿಲ್ಲ. ಪಾಂಡAಡ ಕುಟ್ಟಪ್ಪ ಅವರು ಕೊಡವ ಕೌಟುಂಬಿಕ ಹಾಕಿ ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ವಿವಿಧ ಕ್ರೀಡೆಗಳು ಜಿಲ್ಲೆಯಲ್ಲಿ ತಳವೂರಲು ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಕ್ರೀಡೆಯನ್ನು ಚಿರಾಯುವಾಗಿಸುವ ಅವರ ಪ್ರಯತ್ನ ಸಫಲವಾಗಿದೆ. ಕೊಡಗು ಜಿಲ್ಲೆ ಕ್ರೀಡೆಯ ತಪೋ ಭೂಮಿ ಎಂಬುವುದನ್ನು ಶೇ.೧೦೦ರಷ್ಟು ಕೊಡಗಿನ ಪ್ರಸ್ತುತದ ಕ್ರೀಡಾಕಲರವಗಳು ಸಾಬೀತುಪಡಿಸಿದೆ ಎಂದು ಅಭಿಪ್ರಾಯಪಟ್ಟರು.
ಕ್ರೀಡಾಪಟುಗಳು ತಯಾರಾಗಲಿ
ಕೊಡಗು ಜಿಲ್ಲೆ ಹಾಕಿ ಕ್ರೀಡೆಗೆ ಬಹುದೊಡ್ಡ ಕೊಡುಗೆ ನೀಡಿದ್ದು, ಕೌಟುಂಬಿಕ ಹಾಕಿ ಪಂದ್ಯಾಟಗಳು ಗಿನ್ನಿಸ್ ದಾಖಲೆ ನಿರ್ಮಿಸಿವೆ. ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಇದೇ ಸಂದರ್ಭದಲ್ಲಿ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ಕೆಲಸವೂ ಜೊತೆಯಲ್ಲಿಯೇ ಸಾಗಬೇಕು. ಹಾಕಿ ಕೂರ್ಗ್, ಹಾಕಿ ಅಕಾಡೆಮಿ ಹಾಗೂ ಹಾಕಿ ಪಂದ್ಯಾಟ ಆಯೋಜಿಸುವ ಸಂಸ್ಥೆಗಳು ಜಿಲ್ಲೆಯಲ್ಲಿ ಹಾಕಿ ಕ್ರೀಡಾ ತರಬೇತಿ ಸಂಸ್ಥೆಯನ್ನು ತೆರೆಯಲು ಪ್ರಯತ್ನಿಸಬೇಕು. ಕೂಡಿಗೆ ಕ್ರೀಡಾ ಶಾಲೆಯನ್ನು ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಗುಣಮಟ್ಟಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಬೇಕಿದೆ. ಕೂಡಿಗೆ ಕ್ರೀಡಾ ಶಾಲೆಯನ್ನು ರಾಷ್ಟಿçÃಯ ಮಟ್ಟದ ಸಂಸ್ಥೆಯನ್ನಾಗಿ ಬೆಳೆಸಬೇಕಿದೆ. ಇದಕ್ಕಾಗಿ ಮಾಜಿ ಕ್ರೀಡಾಪಟುಗಳು ಸರಕಾರದ ಜೊತೆಯಲ್ಲಿ ವ್ಯವಹರಿಸಬೇಕು ಎಂದು ಸಲಹೆ ನೀಡಿದರು. ಅಜ್ಜಿಕುಟ್ಟಿರ ಕುಟುಂಬದ ಹಾಕಿ ಪಂದ್ಯಾವಳಿಗೆ ಸಿದ್ಧತೆಗಳು ಭರದಿಂದ ಸಾಗಿದ್ದು ಅವರಿಗೂ ಶುಭ ಕೋರುವುದಾಗಿ ತಿಳಿಸಿದ ಅವರು ಕ್ರೀಡಾ ಅಕಾಡೆಮಿಗಳ ಸ್ಥಾಪನೆ ಬಗ್ಗೆ ಒತ್ತಿ ಹೇಳಿದರು.
ಮನಸ್ಸುಗಳನ್ನು ಬೆಸೆಯುತ್ತಿದೆ
ಪ್ರಸ್ತುತದ ಕೂರ್ಗ್ ಹಾಕ್ಸ್ ಕ್ಲಬ್ ಹಾಗೂ ದೂರದ ಕೇರಳದ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಜಿಲ್ಲೆಯಲ್ಲಿ ಹಾಕಿ ಪಂದ್ಯಾವಳಿ ಆಯೋಜಿಸುವ ಮೂಲಕ ಹಾಕಿ ಕ್ರೀಡೆಯನ್ನು ಜೀವಂತವಾಗಿಡುವ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ. ಜೊತೆಯಲ್ಲಿಯೇ ಎರಡೂ ರಾಜ್ಯಗಳ ಮನಸ್ಸುಗಳನ್ನು ಬೆಸೆಯುವ ಕೆಲಸವೂ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಜಿ.ಚಿದ್ವಿಲಾಸ್ ಹೇಳಿದರು.
ಹಾಕಿ ಕೂರ್ಗ್ ಸಂಸ್ಥೆಯ ಸ್ಥಾಪಕ ಸದಸ್ಯ ಪಾರ್ಥ ಚಂಗಪ್ಪ ಅವರು ಮಾತನಾಡಿ ಹಾಕಿ ಕ್ರೀಡಾ ಪ್ರೇಮಿ ಬೆಲ್ಲು ಕುಟ್ಟಪ್ಪ ಅವರು ಕೂರ್ಗ್ ಹಾಕ್ಸ್ ಕ್ಲಬ್ ಸ್ಥಾಪಿಸಿ ಹಾಕಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಜಿಲ್ಲೆ, ರಾಜ್ಯ, ದೇಶ ಮಾತ್ರವಲ್ಲದೇ ವಿದೇಶಿ ನೆಲದ ಮಸ್ಕತ್ನಲ್ಲೂ ಹಾಕಿ ಕ್ರೀಡೆ ಆಯೋಜಿಸುವ ಮೂಲಕ ಹಾಕಿಯನ್ನು ಜೀವಂತ ಇಡುವ ಕೆಲಸ ಕೂರ್ಗ್ ಹಾಕ್ಸ್ನ ಮೇಕೇರಿರ ಬೆಲ್ಲು ಕುಟ್ಟಪ್ಪ ಅವರಿಂದ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದು ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದೆ. ಯುವ ಕ್ರೀಡಾಪಟುಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಾಕಿ ಕೂರ್ಗ್ ಸಂಸ್ಥೆಯ ಅಧ್ಯಕ್ಷ ಲವ ಕುಮಾರ್ ಅವರು ಮಾತನಾಡಿ ಟರ್ಫ್ ಮೈದಾನದಲ್ಲಿ ಮಕ್ಕಳು, ಹಿರಿಯರು, ಯುವತಿಯರು ಹಾಗೂ ಮಹಿಳೆಯರಿಗೆ ಹಾಕಿ ಪಂದ್ಯಾಟ ಆಯೋಜಿಸುವುದು ತೀರಾ ಅಪರೂಪವಾಗಿದೆ. ಈ ಕಾರ್ಯವನ್ನು ಮಾಡುತ್ತಿರುವ ಕೂರ್ಗ್ ಹಾಕ್ಸ್ ಕ್ಲಬ್ ಹಾಗೂ ಕೇರಳದ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಅಭಿನಂದನಾರ್ಹರು ಎಂದು ಹೇಳಿದರು. ಅಜ್ಜಿಕುಟ್ಟಿರ ಹಾಕಿ ಪಂದ್ಯಾವಳಿಯಲ್ಲಿ ಪ್ರೀ ಕ್ವಾಟರ್ ಪಂದ್ಯಾವಳಿಯ ಬಳಿಕ ಎಲ್ಲಾ ಪಂದ್ಯಾಟವನ್ನು ಟರ್ಫ್ ಮೈದಾನದಲ್ಲಿ ಆಯೋಜಿಸಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಕೂರ್ಗ್ ಹಾಕ್ಸ್ ಕ್ಲಬ್ ಸ್ಥಾಪಕ ಮೇಕೇರಿರ ಬೆಲ್ಲು ಕುಟ್ಟಪ್ಪ, ಪಂದ್ಯಾವಳಿ ನಿರ್ದೇಶಕ ಕರವಂಡ ಅಪ್ಪಣ್ಣ, ಹಿರಿಯ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ, ವಾಂಡರರ್ಸ್ ಕ್ಲಬ್ ಪ್ರಮುಖರಾದ ಬಾಬು ಸೋಮಯ್ಯ, ಕೋಟೆರ ನಾಣಯ್ಯ, ಬೊಪ್ಪಂಡ ಶ್ಯಾಮ್ ಪೂಣಚ್ಚ, ಹಾಕಿ ಕೂರ್ಗ್ ಉಪಾಧ್ಯಕ್ಷೆ ಯಮುನಾ ಚಂಗಪ್ಪ, ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಪ್ರಮುಖರಾದ ಮೂಸಾ, ಜಾವಿದ್, ರಾಜಶೇಖರ್, ಪತ್ರಕರ್ತ ಕಾಯಪಂಡ ಶಶಿ ಸೋಮಯ್ಯ, ಸಾಯಿ ಕ್ರೀಡಾ ಶಾಲೆ ನಿರ್ದೇಶಕ ಮಿನ್ನಿ ಉಣ್ಣಿರಾಜ್ ಮತ್ತಿತರರು ಉಪಸ್ಥಿತರಿದ್ದರು.
ಹಾಕಿಗೆ ಪ್ರೋತ್ಸಾಹ
ಹಾಕಿ ಕ್ರೀಡೆಯ ಬೆಳವಣಿಗೆ ಮತ್ತು ಹಿರಿಯ ಹಾಗೂ ಕಿರಿಯ ಆಟಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಡಿಕೇರಿಯ ಸಾಯಿ ಕ್ರೀಡಾ ತರಬೇತಿ ಕೇಂದ್ರದ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಎರಡನೇ ವರ್ಷದ ‘ಫ್ಯಾಪ್ ಕಪ್ ಹಾಕಿ’ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ೪೦ ವರ್ಷ ಮೇಲ್ಪಟ್ಟ ಪುರುಷರು, ೩೫ ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ ೧೬ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ತಂಡಗಳು ಪಾಲ್ಗೊಳ್ಳುತ್ತಿವೆ.
ಹಿರಿಯರಲ್ಲಿ ಹಾಕಿ ಕ್ರೀಡೆಯ ಆಸಕ್ತಿಯನ್ನು ಜೀವಂತವಾಗಿರಿಸುವುದರೊAದಿಗೆ ಕಿರಿಯ ಆಟಗಾರರಿಗೆ ಉತ್ತಮ ವೇದಿಕೆ ಕಲ್ಪಿಸುವುದು ಪಂದ್ಯಾವಳಿಯ ಪ್ರಮುಖ ಉದ್ದೇಶವಾಗಿದೆ. ಹಿರಿಯರು ಮತ್ತು ಕಿರಿಯರಿಗೆ ಒಂದೇ ಮೈದಾನದಲ್ಲಿ ಪ್ರತ್ಯೇಕ ವಿಭಾಗಗಳಲ್ಲಿ ಪಂದ್ಯಗಳನ್ನು ಆಯೋಜಿಸಿರುವುದು ಈ ಕ್ರೀಡಾಕೂಟದ ವಿಶೇಷತೆಯಾಗಿದೆ.
ತಂಡಗಳ ವಿವರ
ಪುರುಷರ ಮಾಸ್ಟರ್ಸ್ ವಿಭಾಗದಲ್ಲಿ ಕೇರಳ ಹಾಕಿ ಮಾಸ್ಟರ್ಸ್, ಕೊಡವ ಹಾಕಿ ಅಕಾಡೆಮಿ, ಟೈಗರ್ಸ್ ಬಾಳೆಲೆ, ಯಂಗ್ ಮಾಸ್ಟರ್ಸ್ ಬೆಂಗಳೂರು, ಕೂರ್ಗ್ ಡೈನಾಮಿಕ್ಸ್ ಹಾಗೂ ಭಗವತಿ ಇಲವೆನ್ ತಂಡಗಳು ಭಾಗವಹಿಸಿವೆ. ಮಹಿಳೆಯರ ಮಾಸ್ಟರ್ಸ್ ವಿಭಾಗದಲ್ಲಿ ಮಾಸ್ಟರ್ಸ್ ವಿಮೆನ್ಸ್ ಟೀಮ್, ಕೇರಳ ಸ್ಪೆöÊಸ್ ಗರ್ಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೂರ್ಗ್ ವಂಡರ್ ವಿಮೆನ್ ತಂಡಗಳು ಸೆಣಸಲಿವೆ.
ಅಂಡರ್-೧೬ ಬಾಲಕಿಯರ ವಿಭಾಗದಲ್ಲಿ ಸ್ಪೋರ್ಟ್ಸ್ ಸ್ಕೂಲ್ ಪೊನ್ನಂಪೇಟೆ, ಸ್ಪೋರ್ಟ್ಸ್ ಸ್ಕೂಲ್ ಕೂಡಿಗೆ, ಸಾಯಿ ಮಡಿಕೇರಿ, ಸ್ಪೋರ್ಟ್ಸ್ ಸ್ಕೂಲ್ ಹಾಸನ ಹಾಗೂ ಕೊಡಗು ವಿದ್ಯಾಲಯ ಮಡಿಕೇರಿ ತಂಡಗಳು ಪಾಲ್ಗೊಳ್ಳಲಿವೆ.
ಬಾಲಕರ ವಿಭಾಗದಲ್ಲಿ ಸೋಮವಾರಪೇಟೆಯ ಡಾಲ್ಫಿನ್ಸ್ ಯಂಗ್, ಅಪ್ಪಚ್ಚಕವಿ ವಿದ್ಯಾಲಯ ಪೊನ್ನಂಪೇಟೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಶಾಲೆ ಅಕಾಡೆಮಿ ವೀರಾಜಪೇಟೆ, ರಾಮಟ್ರಸ್ಟ್ ನಾಪೋಕ್ಲು, ಸ್ಪೋರ್ಟ್ಸ್ ಸ್ಕೂಲ್ ಕೂಡಿಗೆ, ಸ್ಪೋರ್ಟ್ಸ್ ಸ್ಕೂಲ್ ಹಾಸನ, ರಿಪಬ್ಲಿಕನ್ಸ್ ಸ್ಪೋರ್ಟ್ಸ್ ಕ್ಲಬ್ ಮುಂಬೈ, ಮೂರ್ನಾಡು ರೂರಲ್ ಫ್ರೆಂಡ್ಸ್, ಯು.ಟಿ.ಎಸ್.ಸಿ. ಕೇರಳ, ಕೊಡಗು ವಿದ್ಯಾಲಯ ಮಡಿಕೇರಿ, ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ (ಬಿ), ಕೊಡವ ಸಮಾಜ ವೀರಾಜಪೇಟೆ ಹಾಗೂ ಲಯನ್ಸ್ ಶಾಲೆ ಗೋಣಿಕೊಪ್ಪ ತಂಡಗಳು ಭಾಗವಹಿಸುತ್ತಿವೆ.
ನಗದು ಬಹುಮಾನ
ಪುರುಷರ ಮತ್ತು ಮಹಿಳೆಯರ ಮಾಸ್ಟರ್ಸ್ ವಿಭಾಗದಲ್ಲಿ ವಿಜೇತ ತಂಡಗಳಿಗೆ ತಲಾ ೧೦ ಸಾವಿರ ರೂ. ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡಗಳಿಗೆ ೫ ಸಾವಿರ ರೂ. ನಗದು ಹಾಗೂ ಟ್ರೋಫಿ ಬಹುಮಾನ ನೀಡಲಾಗುತ್ತದೆ.
ಅಂಡರ್-೧೬ ಬಾಲಕರ ವಿಭಾಗದಲ್ಲಿ ವಿಜೇತರಿಗೆ ೨೫ ಸಾವಿರ ರೂ. ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ ೧೫ ಸಾವಿರ ರೂ. ಹಾಗೂ ಟ್ರೋಫಿ ಬಹುಮಾನವಿದೆ. ಬಾಲಕಿಯರ ವಿಭಾಗದಲ್ಲಿ ವಿಜೇತ ತಂಡಕ್ಕೆ ೧೫ ಸಾವಿರ ರೂ. ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ ೧೦ ಸಾವಿರ ರೂ. ಹಾಗೂ ಟ್ರೋಫಿ ಬಹುಮಾನ ನೀಡಲಾಗುತ್ತದೆ.
ಕಳೆದ ವರ್ಷ ಮೊದಲ ಆವೃತ್ತಿಯ ಪಂದ್ಯಾವಳಿ ಪೊನ್ನಂಪೇಟೆಯಲ್ಲಿ ನಡೆದಿದ್ದು, ಇದೀಗ ಎರಡನೇ ಆವೃತ್ತಿಯನ್ನು ಮಡಿಕೇರಿಯಲ್ಲಿ ಆಯೋಜಿಸಲಾಗಿದೆ. ಮೂಲತಃ ಹಾಲುಗುಂದದವರಾದ ಮೇಕೇರಿರ ಬೆಲ್ಲು ಕುಟ್ಟಪ್ಪ ಅವರ ಆಸಕ್ತಿ ಹಾಗೂ ಹಾಕಿ ಕ್ರೀಡೆಯ ಮೇಲಿನ ಅಭಿಮಾನದಿಂದ ಈ ಪಂದ್ಯಾವಳಿ ಆಯೋಜನೆಗೊಂಡಿದೆ. ಇವರು ಕೊಡಗು ಮಾತ್ರವಲ್ಲದೆ ಬೆಂಗಳೂರು ಮತ್ತು ಮಸ್ಕತ್ನಲ್ಲಿಯೂ ವಿವಿಧ ಮಾದರಿಯ ಹಾಕಿ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಕ್ರೀಡೆಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.
ಮೊದಲ ದಿನದ ಫಲಿತಾಂಶ
ಕೂರ್ಗ್ ಹಾಕ್ಸ್ ಕ್ಲಬ್ ಹಾಗೂ ಕೇರಳದ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಹಾಕಿ ಕೂರ್ಗ್ ಅಧೀನದಲ್ಲಿ ನಗರದ ಸಾಯಿ ಕ್ರೀಡಾ ತರಬೇತಿ ಕೇಂದ್ರದ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ೨ನೇ ಆವೃತ್ತಿಯ ‘ಫ್ಯಾಪ್ ಕಪ್ ಹಾಕಿ’ ಪಂದ್ಯಾವಳಿಯ ಮೊದಲ ದಿನದ ಫಲಿತಾಂಶ.
ರಿಪಬ್ಲಿಕ್ ಮುಂಬೈ ಮತ್ತು ಕೂಡಿಗೆ ಕ್ರೀಡಾ ಶಾಲೆ ನಡುವಿನ ಪಂದ್ಯದಲ್ಲಿ ರಿಪಬ್ಲಿಕ್ ಮುಂಬೈ ೧-೦ ಗೋಲಿನ ಅಂತರದಲ್ಲಿ ಮುನ್ನಡೆ ಸಾಧಿಸಿತು. ಕೂಡಿಗೆ ಕ್ರೀಡಾ ಶಾಲೆ ಶೂನ್ಯ ಸಾಧನೆ ಮಾಡಿತು. ರಿಪಬ್ಲಿಕ್ ಮುಂಬೈ ಪರ ದೀಪಕ್ ಯಾದವ್ ಗೋಲು ಬಾರಿಸಿದರು.
ಬಾಲಕಿಯರ ವಿಭಾಗದಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯ ಮತ್ತು ಕೂಡಿಗೆ ಕ್ರೀಡಾ ಶಾಲೆ ನಡುವಿನ ಪಂದ್ಯ ಗೋಲು ದಾಖಲಾಗದೆ ‘ಡ್ರಾ’ ಗೊಂಡಿತು.
ಡಾಲ್ಫಿನ್ಸ್ ಸೋಮವಾರಪೇಟೆ ಮತ್ತು ಫೀ.ಮಾ.ಕೆ.ಎಂ.ಕಾರ್ಯಪ್ಪ ಶಾಲೆ ವೀರಾಜಪೇಟೆ ನಡುವಿನ ಪಂದ್ಯದಲ್ಲಿ ೧-೦ ಗೋಲಿನ ಅಂತರದಲ್ಲಿ ಡಾಲ್ಫಿನ್ಸ್ ಸೋಮವಾರಪೇಟೆ ಮುನ್ನಡೆ ಸಾಧಿಸಿತು. ಡಾಲ್ಫಿನ್ಸ್ ಪರ ರಜತ್ ಗೋಲು ದಾಖಲಿಸಿದರು.
ಲಯನ್ಸ್ ಗೋಣಿಕೊಪ್ಪ ಮತ್ತು ಮೂರ್ನಾಡು ರೂರಲ್ ಫ್ರೆಂಡ್ಸ್ ನಡುವಿನ ಪಂದ್ಯದಲ್ಲಿ ಮೂರ್ನಾಡು ರೂರಲ್ ಫ್ರೆಂಡ್ಸ್ ೬-೦ ಗೋಲುಗಳ ಅಂತರದಲ್ಲಿ ಮುನ್ನಡೆ ಸಾಧಿಸಿತು.
ಬಾಲಕಿಯರ ವಿಭಾಗದಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯ ಮತ್ತು ಪೊನ್ನಂಪೇಟೆ ಕ್ರೀಡಾ ಶಾಲೆಯ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಪೊನ್ನಂಪೇಟೆ ಕ್ರೀಡಾ ಶಾಲೆ ಮುನ್ನಡೆ ಸಾಧಿಸಿತು. ಗ್ರೀಷ್ಮ ೨ ಗೋಲುಗಳನ್ನು ದಾಖಲಿಸಿದರು.
ಯುಟಿಎಸ್ಸಿ ಮತ್ತು ಶ್ರೀರಾಮ ಟ್ರಸ್ಟ್ ನಾಪೋಕ್ಲು ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಯುಟಿಎಸ್ಸಿ ಮುನ್ನಡೆ ಸಾಧಿಸಿತು. ಶ್ರೇಯಸ್ ೨ ಹಾಗೂ ಶಾಹಿಲ್ ೧ ಗೋಲು ದಾಖಲಿಸಿದರು.
ಪತ್ರಿಯಾದ್ ಮತ್ತು ಕೊಡಗು ವಿದ್ಯಾಲಯ ನಡುವಿನ ಪಂದ್ಯದಲ್ಲಿ ೧-೦ ಗೋಲಿನ ಅಂತರದಲ್ಲಿ ಪತ್ರಿಯಾದ್ ಮುನ್ನಡೆ ಸಾಧಿಸಿತು. ಆದಿತ್ ಗೋಲು ದಾಖಲಿಸಿದರು.
ಬಾಲಕಿಯರ ವಿಭಾಗದಲ್ಲಿ ಕೂಡಿಗೆ ಕ್ರೀಡಾ ಶಾಲೆ ಮತ್ತು ಪೊನ್ನಂಪೇಟೆ ಕ್ರೀಡಾ ಶಾಲೆ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಕೂಡಿಗೆ ಕ್ರೀಡಾ ಶಾಲೆ ಮುನ್ನಡೆ ಸಾಧಿಸಿತು. ಕೂಡಿಗೆ ಕ್ರೀಡಾ ಶಾಲೆ ಪರ ವೇದ ಹಾಗೂ ಯಾಶಿಕ ತಲಾ ಒಂದು ಗೋಲು ದಾಖಲಿಸಿದರು. ಪೊನ್ನಂಪೇಟೆ ಕ್ರೀಡಾ ಶಾಲೆಯ ಗ್ರೀಷ್ಮ ಒಂದು ಗೋಲು ದಾಖಲಿಸಿದರು.