ಕುಶಾಲನಗರ, ಅ. ೨೯: ನೌಕರರು ಸರ್ಕಾರಿ ಅಥವಾ ಅರೆ ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಮೇಲೆ ಸಹಜವಾಗಿ ಬರುವ ಆರೋಗ್ಯ ಸಮಸ್ಯೆಗಳು, ಮತ್ತು ಕೌಟುಂಬಿಕ ಸಮಸ್ಯೆಗಳು ಅವರ ಮನಸ್ಸನ್ನು ಹಾಳು ಮಾಡುತ್ತವೆ. ಅಂತಹ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘ ನೌಕರರ ಆಸರೆಗೆ ಬರಬೇಕಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಪ್ರಾಧಿಕಾರದ ಉಪ ಆಧೀಕ್ಷಕರಾದ ದಿನಕರ್ ಶೆಟ್ಟಿ ಹೇಳಿದರು.
ಕುಶಾಲನಗರದ ತಾಲೂಕು ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಮಹಾಸಭೆಯ ಅಧಿವೇಶನದಲ್ಲಿ ಮಂಗಳವಾರ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡುತ್ತಾ ನೌಕರರು ಸೇವೆಯಿಂದ ನಿವೃತ್ತರಾದ ನಂತರ ಸಹಜವಾಗಿ ಪರಸ್ಪರ ಅಪರಿಚಿತರಂತೆ ಇರುತ್ತಾರೆ. ನಿವೃತ್ತಿಯ ಅವಧಿಯಲ್ಲಿ ತಮ್ಮ ಮಾನಸಿಕ ನೋವುಗಳನ್ನು ಹಂಚಿಕೊಳ್ಳಲು ಒಬ್ಬರಿಗೆ ಮತ್ತೊಬ್ಬರು ಸಹಕಾರಿಯಾಗಲು ಸಂಘಟನೆಗಳ ಅವಶ್ಯಕತೆ ಇರುತ್ತವೆ.
ನಿವೃತ್ತಿಯ ನಂತರ ಅನೇಕ ನೌಕರರು ತಮ್ಮ ವೈಯಕ್ತಿಕ ಜೀವನದಲ್ಲಿ ಕುಟುಂಬದ ಸದಸ್ಯರಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿರುವ ನಿದರ್ಶನಗಳು ಸೃಷ್ಟಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕುಟುಂಬ ಸದಸ್ಯರು ನಿರ್ಲಕ್ಷ್ಯ ಮಾಡುವ, ಆರೋಗ್ಯ ಸಮಸ್ಯೆಗಳು ಬಂದಾಗ ಅವುಗಳನ್ನು ಪರಿಹರಿಸಿಕೊಳ್ಳಲು ಉತ್ತಮವಾದ ಆರೈಕೆಯನ್ನು ಮಾಡದೆ ಬೀದಿಗೆ ತಳ್ಳಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿವೆ. ಅಂತಹ ನೋವಿಗೆ ಒಳಗಾದ ನಿವೃತ್ತರು, ಸಂಬAಧಪಟ್ಟ ಇಲಾಖೆಗಳ ನೆರವಿನೊಂದಿಗೆ ತಮಗೆ ಆಸರೆಯನ್ನು ಪಡೆಯಲು ಕಾನೂನಿನಲ್ಲಿ ಅವಕಾಶ ಇರುತ್ತದೆ ಎಂದರು. ಸರ್ಕಾರಿ ನಿವೃತ್ತ ನೌಕರರ ಸಂಘ ತಮ್ಮ ಸದಸ್ಯರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದನೆ ಮಾಡಬೇಕಾಗಿದೆ ಎಂದರು.
ಸಭೆಯಲ್ಲಿ ಕೊಡಗು ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ಬಿ. ಮಾದಮಯ್ಯ ಅವರು ಸರ್ಕಾರ ನಿವೃತ್ತ ನೌಕರರಿಗೆ ಕೊಡಮಾಡುವ ಸೌಲಭ್ಯಗಳು ಮತ್ತು ಪಿಂಚಣಿಯಲ್ಲಿ ಆಗುವ ವ್ಯತ್ಯಾಸಗಳನ್ನು ಪಡೆದುಕೊಳ್ಳುವ ಬಗೆ ಮತ್ತಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಸ್ಥಾಪಕ ಸದಸ್ಯರು ಹಾಗೂ ಸಲಹೆಗಾರರಾದ ನಿವೃತ್ತ ಮುಖ್ಯ ಶಿಕ್ಷಕರಾದ ಎಂ. ಹೆಚ್. ನಜೀರ್ ಅಹ್ಮದ್ ನೆರವೇರಿಸಿ ಶುಭ ಕೋರಿದರು.
ಸಂಘದ ೨೦೨೫-೨೬ ಮೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಕುಶಾಲನಗರ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ಮೊಣ್ಣಪ್ಪ, ವಹಿಸಿ ಮಾತನಾಡಿ ಸಂಘದ ಒಳತಿಗೆ, ಬೆಳವಣಿಗೆಗೆ ಪೂರಕವಾಗಿ ಪದಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು ಯಾವುದೇ ಸಮಸ್ಯೆಗಳನ್ನು ಸಂಘದ ಸದಸ್ಯರು ಹೊಂದಿದ್ದಲ್ಲಿ ಸಂಘದ ಗಮನಕ್ಕೆ ತಂದರೆ ಆ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು. ಸಂಘದ ಸಲಹೆಗಾರರಾದ ಅಬ್ರಹಾಂ ದಿವಾಕರ್ ಸಂಘದ ಅನೇಕ ಸದಸ್ಯರ ನಿವೃತ್ತಿ ವೇತನಕ್ಕೆ ಸಂಬAಧಪಟ್ಟ ಸಮಸ್ಯೆಗಳ ವಿಚಾರವನ್ನು ಸಂಬAಧಪಟ್ಟ ಇಲಾಖೆಗಳಿಗೆ ಸಂಪರ್ಕ ಮಾಡಿ ಸಹಕಾರ ನೀಡುತ್ತಿರುವುದರ ಬಗ್ಗೆ, ಕೆಲ ಸದಸ್ಯರ ಅಹವಾಲುಗಳನ್ನು ಪರಿಹರಿಸಿರುವುದಾಗಿ, ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶಿವಾನಂದ, ಎಚ್. ಕೆ. ಪುಟ್ಟರಾಜು, ಲೋಕೇಶ್, ಕೆ.ಎನ್. ರಾಜಪ್ಪ ಮತ್ತು ವಿ.ಆರ್. ಹೆಗಡೆ ಅವರುಗಳು ಸುಮಾರು ೫೧ ನೂತನ ಸದಸ್ಯರು ಸಂಘಕ್ಕೆ ಸೇರ್ಪಡೆ ವಿಚಾರ, ಸುಮಾರು ೩೦ಕ್ಕೂ ಹೆಚ್ಚು ಸದಸ್ಯರು ೩೦೦೦ ಕ್ಕಿಂತ ಅಧಿಕ ಮೊತ್ತ ಕಟ್ಟಡ ನಿಧಿಗೆ ವಂತಿಗೆ ನೀಡಿರುವ ಮಾಹಿತಿ, ಮತ್ತು ಸಂಘದ ೨೦೨೫-೨೬ ನೇ ಸಾಲಿನ ಲೆಕ್ಕಪತ್ರ ಮಂಡನೆ ಮತ್ತು ಲೆಕ್ಕ ಪರಿಶೋಧನಾ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಿದರು.
ಈ ಅವಧಿಯಲ್ಲಿ ಮೃತಪಟ್ಟ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸುಮಾರು ೨೧ ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಹಿರಿಯ ಸದಸ್ಯರಾದ ಬಾಚರಣೆಯಂಡ ಅಪ್ಪಣ್ಣ, ನಿರ್ದೇಶಕರಾದ ಎಂ. ಎಚ್. ಫಝುಲುಲ್ಲಾ, ಬಿ. ಕೆ. ಕಾಳಯ್ಯ, ಎಂ. ಎಸ್. ಗಣೇಶ್, ಶಬ್ಬೀರ್ ಬಾಷಾ ಮತ್ತಿತರರು ಇದ್ದರು. ಕಾರ್ಯಕ್ರಮ ನಿರ್ವಹಣೆಯನ್ನು ನಿವೃತ್ತಪ್ರಾಧ್ಯಾಪಕರಾದ ಡಾ. ಶಾಂತ ಲಕ್ಷಿö್ಮ, ಸಂಘದ ಖಜಾಂಜಿ ವಿ. ಆರ್. ಹೆಗಡೆ ಮತ್ತು ನಿರ್ದೇಶಕರಾದ ಎಂ. ಎಸ್. ಗಣೇಶ್ ನಿರ್ವಹಿಸಿದರು.