ಮಡಿಕೇರಿ, ಅ. ೨೯: ಕೊಡಗು ಜಿಲ್ಲೆ ಪುಣ್ಯಭೂಮಿಯಾಗಿದ್ದು ಇಂತಹ ಜಿಲ್ಲೆಯಲ್ಲಿ ಕೆಲಸ ನಿರ್ವ ಹಿಸುವ ಅವಕಾಶ ದೊರೆತದ್ದು ತಮ್ಮ ಸೌಭಾಗ್ಯವಾಗಿದೆ ಎಂದು ಜಿಲ್ಲೆಯಿಂದ ರಾಮನಗರಕ್ಕೆ ವರ್ಗಾವಣೆಗೊಂಡಿರುವ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಶಕ್ತಿ’ಯೊಂದಿಗೆ ತಮ್ಮ ಸೇವಾ ಅನುಭವ ಹಂಚಿಕೊAಡ ಅವರು ಜಿಲ್ಲೆಯಲ್ಲಿ ಒಂದು ವರ್ಷ, ಮೂರು ತಿಂಗಳ ಅವಧಿಯ ಕೆಲಸ ನಿರ್ವಹಣೆ ಆತ್ಮ ತೃಪ್ತಿ ನೀಡಿದೆ. ಜನತೆಯ ಸಂಪೂರ್ಣ ಸಹಕಾರದೊಂದಿಗೆ, ಅಧಿಕಾರಿ ಸಿಬ್ಬಂದಿ ವರ್ಗ ಸೇರಿದಂತೆ ರಾಜಕೀಯ ಪಕ್ಷಗಳ ಮೂಲಕವೂ ಸಹಕಾರ ದೊರೆತಿದ್ದು ಕೆಲಸ ನಿರ್ವಹಣೆಗೆ ಸಹಕಾರಿಯಾಗಿತ್ತು ಎಂದು ಸ್ಮರಿಸಿದರು.