ಮಡಿಕೇರಿ, ಅ. ೨೯: ಕಾಫಿ ಮಂಡಳಿ ವತಿಯಿಂದ ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳ ಯೋಜನೆಯಡಿಯಲ್ಲಿ ಕಾಫಿ ತೋಟಗಳಲ್ಲಿ ಹಾಗೂ ಕಾಫಿ ಕ್ಯೂರಿಂಗಳಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪದವಿ ಮತ್ತು ನಂತರದ ಅರ್ಹ ವಿದ್ಯಾರ್ಥಿಗಳಿಂದ ೨೦೨೬-೨೭ನೇ ಸಾಲಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಬಂಧನೆಗಳು

ಹಿAದಿನ ವರ್ಷಗಳಲ್ಲಿ ತೇರ್ಗಡೆ ಹೊಂದಿ ೨೦೨೬-೨೭ನೇ ಸಾಲಿನಲ್ಲಿ ಪದವಿ/ತಾಂತ್ರಿಕ ಪದವಿ/ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಛೇರಿ ಸಮಯದಲ್ಲಿ ಅರ್ಜಿಗಳನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅನುದಾನದ ಲಭ್ಯತೆಗಾನುಗುಣವಾಗಿ ಹಾಗೂ ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು. ದಾಖಲಾತಿಗಳ ವಿವರ (ಸ್ವಂತ ದೃಢೀಕರಿಸಿದ ಜೆರಾಕ್ಸ್ ಪ್ರತಿಗಳು), ಆಧಾರ್, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಜಾತಿ ಪ್ರಮಾಣ ಪತ್ರ (ಎಸ್ಸಿ-ಎಸ್ಟಿ), ಹಿಂದಿನ ವರ್ಷ ತೇರ್ಗಡೆ ಹೊಂದಿದ ಅಂಕಪಟ್ಟಿ, ತೋಟದ ಮಾಲೀಕರ ಪಹಣಿ, ವಿದ್ಯಾರ್ಥಿಯ ಫೋಟೋ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೩೦.೧೧.೨೦೨೬ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು/ ಸಂಪರ್ಕಾಧಿಕಾರಿಗಳು, ಕಾಫಿ ಮಂಡಳಿ, ಮಡಿಕೇರಿ - ಸೋಮವಾರಪೇಟೆ, ಇವರನ್ನು ಸಂಪರ್ಕಿಸಬಹುದಾಗಿದೆ.