ಕುಶಾಲನಗರ, ಅ. ೨೮: ಸ್ವಚ್ಛ ಕಾವೇರಿಗಾಗಿ ನಡೆಯುತ್ತಿರುವ ತಲಕಾವೇರಿ ಪೂಂಪ್‌ಹಾರ್ ಕಾವೇರಿ ಜಾಗೃತಿ ರಥಯಾತ್ರೆಯ ಅಖಿಲ ಭಾರತ ಸಾಧು ಸಂತರ ತಂಡ ಕುಶಾಲನಗರದಲ್ಲಿ ಹುಣ್ಣಿಮೆಯ ಅಂಗವಾಗಿ ನಡೆದ ೧೯೧ನೇಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಆಶಯದಲ್ಲಿ ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಉದ್ಯಾನವನದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಾಂಸ್ಕೃತಿಕ ಮತ್ತು ಬೆಳದಿಂಗಳ ಊಟ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯದಲ್ಲಿ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ ಮಹಾ ಆರತಿ ಕಾರ್ಯಕ್ರಮದಲ್ಲಿ ಕಾವೇರಿ ಮಾತೆಗೆ ಅಭಿಷೇಕ ಅರ್ಚನೆ ಮತ್ತು ಕುಶಾಲನಗರ ಸಮಸ್ತ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನೆ ಹಾಗೂ ಲಲಿತಾ ಸಹಸ್ರನಾಮ ಕಾರ್ಯಕ್ರಮಗಳು ಭಕ್ತಿ ಭಾವಗಳೊಂದಿಗೆ ಜರುಗಿದವು.

ಕಾವೇರಿ ನದಿ ಜಾಗೃತಿ ರಥದಲ್ಲಿ ಪವಿತ್ರ ತೀರ್ಥ ಕಳಶಗಳೊಂದಿಗೆ ತಲಕಾವೇರಿ ಕ್ಷೇತ್ರದಿಂದ ಆಗಮಿಸಿದ ಮಾತೆ ಕಾವೇರಿ ಪ್ರತಿಮೆಗೆ ಅಷ್ಟಾಭಿಷೇಕ ನಂತರ ಕಾವೇರಿ ನದಿಗೆ ಮಹಾ ಆರತಿ ಬೆಳಗಾಯಿತು.

ಈ ಸಂದರ್ಭ ಮಾತನಾಡಿದ ಶ್ರೀ ಸದಾಶಿವ ಸ್ವಾಮೀಜಿ, ಪ್ರತಿಯೊಬ್ಬರೂ ನದಿ ಜಲಮೂಲ, ಪ್ರಕೃತಿಯ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಪ್ರಕೃತಿ ನದಿ ಜಲಮೂಲಗಳನ್ನು ಸಂರಕ್ಷಣೆ ಮಾಡಲು ಸಾಧ್ಯ ಎಂದು ಕರೆ ನೀಡಿದರು. ನೀರು ಮಾನವನ ಜೀವನದ ಅಂಗವಾಗಿದ್ದು ನೀರಿಲ್ಲದೆ ಬದುಕು ಅಸಾಧ್ಯ ಎಂದ ಶ್ರೀಗಳು ನದಿ ಮೂಲಗಳು ಬರಡಾಗದಂತೆ ಎಚ್ಚರವಹಿಸಬೇಕು ಯಾವುದೇ ಸಂದರ್ಭ ಕಲುಷಿತಗೊಳ್ಳದಂತೆ ಜಾಗೃತರಾಗಬೇಕಾಗಿದೆ ಎಂದರು.

ಕಾವೇರಿ ನದಿಗೆ ಕಳೆದ ೧೬ ವರ್ಷಗಳಿಂದ ಪ್ರತಿ ಹುಣ್ಣಿಮೆಯಂದು ಮಹಾ ಆರತಿ ಬೆಳಗುವ ಕಾರ್ಯಕ್ರಮಗಳ ಮೂಲಕ ಕಾವೇರಿ ಮಹಾ ಆರತಿ ಬಳಗ ಶ್ರೇಷ್ಠ ಕಾಯಕ ಮಾಡುತ್ತಿದೆ; ಪ್ರತಿಯೊಬ್ಬರೂ ನದಿ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಬೇಕಾಗಿದೆ ಎಂದರು.

ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ಅಭಿಷೇಕ ಅಷ್ಟೋತ್ತರ ನಂತರ ಆರತಿ ಕಾರ್ಯಕ್ರಮ ನಡೆಯಿತು. ಭಜನಾ ಮಂಡಳಿಯ ಮಹಿಳೆಯರಿಂದ ನದಿ ತಟದಲ್ಲಿ ಭಜನಾ ಕಾರ್ಯಕ್ರಮ, ಲಲಿತ ಸಹಸ್ರನಾಮ ಕಾರ್ಯಕ್ರಮಗಳು ನಡೆದವು. ಕಾವೇರಿ ಮಹಾ ಆರತಿ ಬಳಗದ ಸಂಚಾಲಕರಾದ ವನಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಹರಿದ್ವಾರ ಅಖಂಡ ಪರಂಧಾA ಕ್ಷೇತ್ರದ ಸ್ವಾಮಿ ಅನಂತಾನAದ ಗಿರಿ. ಜಿ, ಅಖಿಲ ಭಾರತ ಸನ್ಯಾಸಿಗಳ ಸಂಘದ ಕಾರ್ಯಕ್ರಮ ಸಂಯೋಜಕರಾದ ಸ್ವಾಮಿ ಬಾಲ ರಘುನಾಥನಂದ, ಪ್ರಮುಖರಾದ ಶಿವರಾಮಾನಂದ ಸ್ವಾಮೀಜಿ, ಪಾರಂಪರಿಕ ವೈದ್ಯರು ಹಾಗೂ ನಮಾಮಿ ಕಾವೇರಿ ಗೌರವ ಸಲಹೆಗಾರರಾದ ಸುಮನಾ ಮಳಲಗದ್ದೆ, ಹಾಸನ ಜಿಲ್ಲೆಯ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಕುಮಾರಸ್ವಾಮಿ, ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಡೆಪAಡ ಬೋಸ್ ಮೊಣ್ಣಪ್ಪ, ಚೈತನ್ಯ, ಧರಣಿ, ರಾಮನಾಥಪುರ ಆರತಿ ಬಳಗದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಜಿಲ್ಲಾ ಅಧ್ಯಕ್ಷ ಕೊಡಗನ ಹರ್ಷ, ಬಿ.ಜೆ. ಅಣ್ಣಯ್ಯ, ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರು ಹಾಗೂ ನಮಾಮಿ ಕಾವೇರಿ ಜಿಲ್ಲಾ ಸಂಚಾಲಕರಾದ ವಿಠಲ ಸಾಲಿಯಾನ್, ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಮೇಲ್ವಿಚಾರಕರಾದ ಸುಧೀರ್, ಆರತಿ ಬಳಗದ ಪ್ರಮುಖರಾದ ಮೋಹನ್ ಪ್ರಸಾದ್, ಶೋಭಾ ಮೋಹನ್ ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳು ಟ್ರಸ್ಟ್ ಹಾಗೂ ಸದಸ್ಯರು ಮಹಾ ಆರತಿ ಬಳಗದ ಹಾಗೂ ನಮಾಮಿ ಕಾವೇರಿ ಸದಸ್ಯರು, ಕುಶಾಲನಗರ ಸಮಸ್ತ ಮಹಿಳಾ ಭಜನಾ ಮಂಡಳಿಯ ಸದಸ್ಯರುಗಳು, ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರು ಇದ್ದರು.

ಹುಣ್ಣಿಮೆ ಅಂಗವಾಗಿ ಕುಶಾಲನಗರ ಗಡಿಭಾಗದ ಕೊಪ್ಪ ಕಾವೇರಿ ಪ್ರತಿಮೆಗೆ ಭಾರವಿ ಕನ್ನಡ ಸಂಘದ ಆಶ್ರಯದಲ್ಲಿ ಅಭಿಷೇಕ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್ ವಿಜಯೇಂದ್ರ ಪ್ರಸಾದ್ ರವೀಂದ್ರ ಪ್ರಸಾದ್ ಮತ್ತು ಇತರರು ಇದ್ದರು.