ಕೊಡ್ಲಿಪೇಟೆ, ಅ. ೨೮: ಕಿರಿಕೊಡ್ಲಿ ಗ್ರಾಮದ ದೊಡ್ಡಕುಂದ-ನೀರುಗುAದ ಕೂಡುರಸ್ತೆಯಲ್ಲಿ ನೂತನ ವಾಗಿ ನಿರ್ಮಾಣವಾಗಿರುವ ಗಣಪತಿ ದೇವಾಲಯದ ಲೋಕಾರ್ಪಣಾ ಸಮಾರಂಭ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಸಮಾರಂಭದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಭಾಗವಹಿಸಿ ಮಾತನಾಡಿ, ದೇವಸ್ಥಾನದ ಧಾರ್ಮಿಕ ಪರಂಪರೆ ಹಾಗೂ ಪಾವಿತ್ರö್ಯವನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ದೇವಸ್ಥಾನ ನಿರ್ವಹಣಾ ಸಮಿತಿಯನ್ನು ರಚಿಸಿ, ದಿನನಿತ್ಯದ ಪೂಜಾ ಕೈಂಕರ್ಯಗಳನ್ನು ಚಾಚೂತಪ್ಪದೆ ನಡೆಸಿಕೊಂಡು ಹೋಗುವ ಮೂಲಕ ಭಕ್ತರಿಗೆ ಉತ್ತಮ ಧಾರ್ಮಿಕ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ತಿಳಿಸಿದರು. ಸ್ಥಳೀಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿಗಳು ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಿ, ಭಕ್ತರಿಗೆ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಅಭಿವೃದ್ಧಿ, ಧಾರ್ಮಿಕ ಚಟುವಟಿಕೆಗಳ ನಿರಂತರ ನಿರ್ವಹಣೆ ಹಾಗೂ ದೇವಸ್ಥಾನದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕುರಿತು ತಿಳಿ ಹೇಳಿದರು. ಸಮಾರಂಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಕೆ.ಸಿ ಪ್ರಸನ್ನ, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಕೆ.ಆರ್.ಚಂದ್ರಶೇಖರ್, ಔರಂಗಜೇಬ್, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಜನಾರ್ದನ್, ಪ್ರಮುಖರಾದ ರಾಮು, ಚನ್ನಕೇಶವ, ವೆಂಕಟೇಶ್, ಮೇದಪ್ಪ, ಪುಟ್ಟರಾಜು, ದೇವಸ್ಥಾನ ಸಮಿತಿಯ ಪ್ರಮುಖರಾದ ಜೆ.ಕೆ. ತೇಜಕುಮಾರ್, ವೇದಕುಮಾರ್, ರುಕ್ಮಿಣಿ ಕೃಷ್ಣಕುಮಾರ್, ಸದಸ್ಯರು ಹಾಗೂ ಭಕ್ತಾದಿಗಳು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.