ವೀರಾಜಪೇಟೆ, ಅ. ೨೮ : ಬಾಳುಗೋಡುವಿನ ಕೊಡವ ಸಾಂಸ್ಕೃತಿಕ ಕೇಂದ್ರದ ಕೊಡವ ಸಮಾಜಗಳ ಒಕ್ಕೂಟದ ಅಡಿಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಾಂಸ್ಕೃತಿಕ ಕೇಂದ್ರ ಹಾಗೂ ಜನರಲ್ ತಿಮ್ಮಯ್ಯ ಕ್ರೀಡಾ ಕೇಂದ್ರದಲ್ಲಿ ನವೆಂಬರ್ ೨೨ ರಂದು ಪೂರ್ವಹ್ನ ೯.೩೦ ಗಂಟೆಗೆ ರಾಷ್ಟçಮಟ್ಟದ ಕೊಡವ ನಮ್ಮೆಯ ಸಾಂಸ್ಕೃತಿಕ ಸ್ಪರ್ಧೆಯನ್ನು ನಡೆಸಲಾಗುವುದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಾಳಿಮಾಡ ಮೋಟಯ್ಯ ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕೋಲಾಟ್, ಬಾಳೋಪಾಟ್, ಕತ್ತಿಯಾಟ್, ಬೊಳಕಾಟ್, ಉಮ್ಮತಾಟ್, ಪರಿಯಕಳಿ, ಸಂಬAಧ ಅಡಕುವೋ, ತಾಲಿಪಾಟ್ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗಳು ಅಂತರ ಕೊಡವ ಸಮಾಜಗಳ ನಡುವೆ ನಡೆಯಲಿರುವುದರಿಂದ ಪ್ರತಿ ಸ್ಪರ್ಧೆಗೆ ಕೊಡವ ಸಮಾಜದಿಂದ ಒಂದೊAದು ತಂಡ ಮಾತ್ರ ಭಾಗವಹಿಸಬಹುದಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಕೊಡವ ಸಮಾಜಗಳು ತಮ್ಮ ತಂಡದ ವಿವರಗಳನ್ನು ನವೆಂಬರ್ ೧೨ ರ ಒಳಗೆ ಪೊನ್ನಂಪೇಟೆ ಕೊಡವ ಸಮಾಜದ ಕಚೇರಿಗೆ ಕಳುಹಿಸಬೇಕು. ತಪ್ಪಿದಲ್ಲಿ ಅವರಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
ಹೆಚ್ಚಿನ ವಿವರಗಳಿಗೆ ೯೮೪೫೩೦೮೨೨೮, ೯೪೮೩೮೩೬೧೧೫ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಿದರು. ಗೋಷ್ಠಿಯಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕ ಹಂಚೇಟ್ಟಿರ ಮನು ಮುದ್ದಪ್ಪ, ಸದಸ್ಯರುಗಳಾದ ಬಾಚಿರ ಜಗದೀಶ್, ಪಟ್ರಪಂಡ ಬೋಪಯ್ಯ, ನೆರಪಂಡ ಜಿಮ್ಮಿ ಚಂಗಪ್ಪ ಉಪಸ್ಥಿತರಿದ್ದರು.