ಮಡಿಕೇರಿ, ಅ. ೨೮: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸರ್ಕಾರಿ ಶುಶ್ರೂಷಾ ಕಾಲೇಜು, ಮಡಿಕೇರಿಯಲ್ಲಿ ಬಿ.ಎಸ್ಸಿ. ನರ್ಸಿಂಗ್ ಪದವಿ ಕೋರ್ಸ್ಗೆ ಬಾಕಿ ಉಳಿದಿರುವ ೫೨ ಸೀಟುಗಳನ್ನು ನೇರ ಪ್ರವೇಶಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರದಿಂದ ಆದೇಶವಾಗಿದೆ.

ಬಿ.ಎಸ್ಸಿ ನರ್ಸಿಂಗ್‌ಗೆ ಸೇರಲು ಬಯಸುವ ಅರ್ಹ ಆಭ್ಯರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಿಯಮಾನುಸಾರ ಪ್ರವೇಶಾತಿಗೆ ತಮ್ಮ ಎಲ್ಲಾ ಮೂಲ ದಾಖಲೆಗಳೊಂದಿಗೆ ತಾ. ೩೦ ರಂದು ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧ ಗಂಟೆಯೊಳಗೆ ಸರ್ಕಾರಿ ಶುಶ್ರೂಷಾ ಕಾಲೇಜು, ಮಡಿಕೇರಿ ಇಲ್ಲಿ ಹಾಜರಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ನೋಂದಣಿಯಾದ ಆಭ್ಯರ್ಥಿಗಳಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಂಜುಳಾ ಎ.ಕೆ ಪ್ರಾಂಶುಪಾಲರು, ಸರ್ಕಾರಿ ಶುಶ್ರೂಷ ಕಾಲೇಜು ಮಡಿಕೇರಿ, ಮೊ ೮೦೮೮೮೩೫೧೫೬, ಗುರುಪಾದ ಕೆ.ಪಿ, ಸಮನ್ವಯ ಅಧಿಕಾರಿಗಳು, ಸರ್ಕಾರಿ ಶುಶ್ರೂಷ ಕಾಲೇಜು ಮಡಿಕೇರಿ ೯೯೬೪೨೪೪೩೦೪ ಇವರುಗಳನ್ನು ಸಂಪರ್ಕಿಸಬಹುದಾಗಿದೆ.