ಕುಶಾಲನಗರ, ಅ. ೨೮: ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆ ಸಂಬAಧ ರೈತ ಸಹಕಾರ ಭವನದಲ್ಲಿ ನಡೆದ ಮತದಾನದಲ್ಲಿ ಒಟ್ಟು ೧೦ ಸ್ಥಾನಗಳಿಗೆ ೨೦ ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು.

ಸಂಘದ ಹಾಲಿ ಅಧ್ಯಕ್ಷ ಎಂ.ಕೆ. ದಿನೇಶ್ ತಂಡದಿAದ ಸ್ಪರ್ಧಿಸಿದ್ದ ೮ ಅಭ್ಯರ್ಥಿಗಳು ಜಯಗಳಿಸಿದರು. ಎಂ.ಕೆ. ದಿನೇಶ್ (೩೩೮ ಮತ), ಸಿ.ವಿ. ನಾಗೇಶ್ (೩೦೧), ಜಿ.ಬಿ. ಜಗದೀಶ್ (೩೨೪), ಹೇಮಕುಮಾರ್ ಕೆ.ಕೆ (೨೬೧), ನಂಜುAಡ ಎಂ.ಆರ್ (೨೭೯), ರಮ್ಯ ಹೆಚ್.ವಿ (೩೧೩), ವಿ.ಬಿ. ಜೈರಾಜ್ (೩೩೯), ಮಲ್ಲಿಗೆ ಕೆ.ಟಿ (೨೫೯) ಜಯಗಳಿಸಿದ್ದಾರೆ.

ಸಾಮೂಹಿಕ ನಾಯಕತ್ವದ ತಂಡದಿAದ ಸ್ಪರ್ಧಿಸಿದ್ದವರ ಪೈಕಿ ಎಂ.ಎಸ್. ರಾಜೇಶ್ (೨೪೪) ಮತ್ತು ಕೆ.ಕೆ ಚೇತನ್ ಮಾಸ್ಟರ್ (೨೫೦) ಅವರು ಜಯಗಳಿಸಿದರು. ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಚುನಾವಣಾಧಿಕಾರಿಯಾಗಿ ಆಶಾ ಪಿ.ಕಾರ್ಯನಿರ್ವಹಿಸಿದರು. ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.