(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ: ೧೧೭ ದಿನಗಳ ಕಾಲ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯು ಹಲವು ವಿವಾದಗಳ ನಡುವೆ ಕರ್ನಾಟಕದಲ್ಲಿ ಪೂರ್ಣಗೊಂಡಿದೆ.

ಕೊಡಗು ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರ ಸೇರಿ ೪,೧೧,೬೩೨ ಮತದಾರರು ಇದ್ದಾರೆ. ೨,೦೦,೮೮೫ ಪುರುಷ ಹಾಗೂ ೨,೧೦,೭೪೩ ಮಹಿಳೆ ಮತ್ತು ೪ ಇತರೆ ಮತದಾರರು ಜಿಲ್ಲೆಯಲ್ಲಿ ಇದ್ದಾರೆ.

ಚುನಾವಣಾ ಆಯೋಗ ರಾಜ್ಯಾದ್ಯಂತ ಜೂನ್ ೩೦ ರಿಂದ ಆಗಸ್ಟ್ ೧೭ ರವರೆಗೆ ಮತದಾರರಿಗೆ ಎನ್ಯುಮರೇಶನ್ ಫಾರ್ಮ್ ಭರ್ತಿ ಮಾಡಲು ಅವಕಾಶ ನೀಡಿತ್ತು. ಜಿಲ್ಲೆಯಲ್ಲಿ ಜೂನ್ ೧೬ ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ೪,೬೮,೬೫೭ ಮತದಾರರ ಎನ್ಯುಮರೇಶನ್ ಫಾರ್ಮ್ ಮುದ್ರಿಸಲಾಗಿತ್ತು. ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಸೇರಿ ೪,೦೫,೮೦೩ ಮತದಾರರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

ಂSಆಆಔ (ಗೈರು, ಸ್ಥಳಾಂತರ, ಮೃತ, ನಕಲಿ, ಇತರೆ)ಪಟ್ಟಿಯಲ್ಲಿ ೬೨,೮೨೪ ಮತದಾರರನ್ನು ಸೇರಿಸಲಾಗಿತ್ತು. ಎನ್ಯುಮರೇಷನ್ ಫಾರ್ಮ್ ವಿತರಣೆ ಸಂದರ್ಭದಲ್ಲಿ ಇದರಲ್ಲಿ ಗೈರು ಮತದಾರರು ೯,೫೮೩, ಶಾಶ್ವತ ಸ್ಥಳಾಂತರ ೩೩,೫೫೫, ಮರಣ ೧೩,೭೩೧, ಎರಡು ಕಡೆ ಹೆಸರು ನೋಂದಾಯಿಸಿರುವ ಮತದಾರರು ೬,೦೩೯ ಹಾಗೂ ಇತರೆ ೧೧೬ ಮತದಾರರನ್ನು ಸೇರಿ ಶೇಕಡ ೧೩.೪೫ ರಷ್ಟು ಮತದಾರರು ಂSಆಆಔ ಪಟ್ಟಿಯಲ್ಲಿದ್ದರು.

ಜಿಲ್ಲೆಯಲ್ಲಿ ೫,೫೨೯ ಯುವ ಮತದಾರರು

ಅಂತಿಮ ಮತದಾರರ ಪಟ್ಟಿಯಲ್ಲಿ ಕೊಡಗು ಜಿಲ್ಲೆಯಲ್ಲಿ ೫,೫೨೯ ಯುವ ಮತದಾರರು, ಅಂದರೆ, ೧೮-೧೯ ವಯೋಮಾನದ ೫,೫೨೯ ಯುವ ಮತದಾರರಿದ್ದು, ಮಡಿಕೇರಿ ಕ್ಷೇತ್ರದಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಿದೆ. ಮಡಿಕೇರಿ ಕ್ಷೇತ್ರದಲ್ಲಿ ಒಟ್ಟು ೨,೯೯೦ ಯುವ ಮತದಾರರು (೧,೫೨೬ ಪುರುಷರು, ೧,೪೬೪ ಮಹಿಳೆಯರು), ವೀರಾಜಪೇಟೆ ಕ್ಷೇತ್ರದಲ್ಲಿ ಒಟ್ಟು ೨,೫೩೯ ಯುವ ಮತದಾರರು (೧,೨೩೯ ಪುರುಷರು, ೧,೩೦೦ ಮಹಿಳೆಯರು) ಜಿಲ್ಲೆಯಲ್ಲಿ ಒಟ್ಟು ೨,೭೬೫ ಪುರುಷ ಮತ್ತು ೨,೭೬೪ ಮಹಿಳಾ ಯುವ ಮತದಾರರಿದ್ದಾರೆ.

೪,೦೪೪ ಹಿರಿಯ ಮತದಾರರು

ಜಿಲ್ಲೆಯಲ್ಲಿ ೮೫ ವರ್ಷ ಮೇಲ್ಪಟ್ಟ ೪,೦೪೪ ಹಿರಿಯ ಮತದಾರರಿದ್ದು, ಇದರಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಮಡಿಕೇರಿ ಕ್ಷೇತ್ರದಲ್ಲಿ ಒಟ್ಟು ೨,೦೧೫ ಮತದಾರರು (೭೨೯ ಪುರುಷರು, ೧,೨೮೬ ಮಹಿಳೆಯರು), ವೀರಾಜಪೇಟೆ ಕ್ಷೇತ್ರದಲ್ಲಿ ಒಟ್ಟು ೨,೦೨೯ ಮತದಾರರು (೮೮೧ ಪುರುಷರು, ೧,೧೪೮ ಮಹಿಳೆಯರು) ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು ೧,೬೧೦ ಪುರುಷ ಮತ್ತು ೨,೪೩೪ ಮಹಿಳಾ ಹಿರಿಯ ಮತದಾರರಿದ್ದಾರೆ.

೧೬ ಎನ್‌ಆರ್‌ಐ ಮತದಾರರು

ಜಿಲ್ಲೆಯಲ್ಲಿ ಒಟ್ಟು ೧೬ ಎನ್‌ಆರ್‌ಐ / ಸಾಗರೋತ್ತರ ಮತದಾರರಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಒಟ್ಟು ೧೨ ಮಂದಿ (೬ ಪುರುಷರು, ೬ ಮಹಿಳೆಯರು), ವೀರಾಜಪೇಟೆ ಕ್ಷೇತ್ರದಲ್ಲಿ ಒಟ್ಟು ೪ ಮಂದಿ (೨ ಪುರುಷರು, ೨ ಮಹಿಳೆಯರು). ಜಿಲ್ಲೆಯಲ್ಲಿ ಒಟ್ಟು ೮ ಪುರುಷ ಮತ್ತು ೮ ಮಹಿಳಾ ಎನ್‌ಆರ್‌ಐ ಮತದಾರರಿದ್ದಾರೆ.

ಮತಗಟ್ಟೆಗಳ ವಿವರ

ಜಿಲ್ಲೆಯಲ್ಲಿ ಒಟ್ಟು ೫೬೭ ಮತಗಟ್ಟೆಗಳಿದ್ದು, ಅದರಲ್ಲಿ ೭೪ ನಗರ ಮತ್ತು ೪೯೩ ಮತಗಟ್ಟೆಗಳು ಗ್ರಾಮೀಣ ಭಾಗದಲ್ಲಿ ಇವೆ. ಮಡಿಕೇರಿ ಕ್ಷೇತ್ರದಲ್ಲಿ ೨೮೫ ಮತಗಟ್ಟೆಗಳಿವೆ. (೫೮ ನಗರ, ೨೨೭ ಗ್ರಾಮೀಣ) ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ೨೮೨ ಮತಗಟ್ಟೆಗಳಿವೆ. (೧೬ ನಗರ, ೨೬೬ ಗ್ರಾಮೀಣ).

ಜಿಲ್ಲೆಯಲ್ಲಿ ಎಸ್.ಐ.ಆರ್ ಕರಡು ಮತದಾರರ ಪಟ್ಟಿ ಪ್ರಕಟಗೊಂಡ ನಂತರ ಲಾಜಿಕಲ್ ಡಿಸ್ಕಿçಪೆನ್ಸಿ ಹಾಗೂ ನೋ-ಮ್ಯಾಪಿಂಗ್ ಎಂದು ಒಟ್ಟು ೫೮,೮೮೩ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದ್ದು, ೫೬೫ ಮಂದಿಯನ್ನು ಅನರ್ಹ ಎಂದು ಗುರುತಿಸಲಾಗಿತ್ತು. ಮಡಿಕೇರಿ ೧೧೨, ವೀರಾಜಪೇಟೆ ಕ್ಷೇತ್ರದಲ್ಲಿ ೪೫೩ ಅನರ್ಹ ಮತದಾರರನ್ನು ಗುರುತಿಸಲಾಗಿದೆ. ನೋಟೀಸ್ ವಿಚಾರಣೆ ಸಂದರ್ಭದಲ್ಲಿ ದಾಖಲೆಗಳನ್ನು ನೀಡಲು ಸಾಧ್ಯವಾಗದ ೫೬೫ ಮತದಾರರು ಅಂತಿಮ ಪಟ್ಟಿಯಿಂದ ಡಿಲೀಟ್ ಆಗಿದ್ದಾರೆ.

ಜಿಲ್ಲೆಯ ಮತದಾರರ ಅನುಪಾತ-ಶೇ.೬೫.೮೨

ಮತದಾರರ ವಿಶೇಷ ತೀವ್ರ ಪರಿಷ್ಕರಣೆ ೨೦೨೬ರ ಅಂತಿಮ ಮತದಾರರ ಪಟ್ಟಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಮತದಾರರ ಅನುಪಾತ ಶೇ.೬೫.೮೨ರಷ್ಟಿದೆ. ಜಿಲ್ಲೆಯ ಒಟ್ಟು ಅಂದಾಜು ಜನಸಂಖ್ಯೆ ೬,೨೫,೩೮೯ ಇದ್ದು, ಅಂತಿಮ ಪಟ್ಟಿಯಲ್ಲಿ ೪,೧೧,೬೩೨ ಮತದಾರರು ಸೇರ್ಪಡೆಯಾಗಿದ್ದಾರೆ. ಇದರಿಂದ ಜನಸಂಖ್ಯೆಗೆ ಹೋಲಿಸಿದರೆ ಮತದಾರರ ಪ್ರಮಾಣ ಶೇ.೬೫.೮೨ ಆಗಿದೆ.

ರಾಷ್ಟçಮಟ್ಟದಲ್ಲಿ ಗಮನ ಸೆಳೆದಿದ್ದ ಬ್ಯಾಡಗೊಟ್ಟ ಪ್ರಕರಣ

ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಆಗಸ್ಟ್ ೨೪ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಸೆಪ್ಟೆಂಬರ್ ೨೩ ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಬ್ಯಾಡಗೊಟ್ಟ ಮತಗಟ್ಟೆಯಲ್ಲಿ ಬೂತ್ ಏಜೆಂಟ್ ಸೇರಿ ಐವರು ೬೩ ಅರ್ಹ ಮುಸ್ಲಿಂ ಮತದಾರರ ಹೆಸರು ಪಟ್ಟಿಯಲ್ಲಿರುವುದನ್ನು ಪ್ರಶ್ನಿಸಿ ಆಕ್ಷೇಪಣೆಗೆ ಫಾರ್ಮ್ ೭ ಸಲ್ಲಿಸಿದ್ದರು. ಈ ಪ್ರಕರಣ ರಾಷ್ಟç ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಐವರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು.

ಹೆಚ್ಚಿನ ವಿವರ

ಈoಡಿm-೬ (ಹೊಸ ಸೇರ್ಪಡೆ) ೭,೧೨೨ ಅರ್ಜಿಗಳು, ಈoಡಿm-೬ಂ (ಎನ್‌ಆರ್‌ಐ ಮತದಾರರು) ೨೨, ಈoಡಿm-೭ (ಹೆಸರು ತೆಗೆಯಲು ಆಕ್ಷೇಪಣೆ) ೨,೫೩೧ ಅರ್ಜಿಗಳು, ಈoಡಿm-೮ (ವಿಳಾಸ ಬದಲಾವಣೆ / ತಿದ್ದುಪಡಿ) ೨೦,೮೮೭ ಅರ್ಜಿಗಳು, ಒಟ್ಟು ೩೦,೫೬೨ ಅರ್ಜಿಗಳಲ್ಲಿ ಶೇ.೬೮ರಷ್ಟು ಅರ್ಜಿಗಳು ಈoಡಿm-೮ಗೆ ಸಂಬAಧಿಸಿದ್ದಾಗಿವೆ. ಹೊಸ ಮತದಾರರ ನೋಂದಣಿಗಿAತ ತಿದ್ದುಪಡಿ ಮಾಡಿಸಿಕೊಂಡವರೇ ಹೆಚ್ಚು.