ಗುಡ್ಡೆ ಹೊಸೂರು, ಅ. ೨೬: ಇಲ್ಲಿನ ಅರೆಭಾಷೆ ಗೌಡ ಸಮಾಜದ ವಾರ್ಷಿಕ ಮಹಾಸಭೆಯು ಸಮಾಜದ ಅಧ್ಯಕ್ಷ ಗುಡ್ಡೆಮನೆ ವಿಶ್ವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಮಾಜದ ನಿವೇಶನದ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಾಂಸ್ಕೃತಿಕ ಮತ್ತು ಕಲಾ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಗೌಡ ಸಮಾಜದ ಅಧ್ಯಕ್ಷ ವಿಂಗ್ ಕಮಾಂಡರ್ ಅಯ್ಯೆಟ್ಟಿ ಮನೋಜ್ ಕುಮಾರ್ ಮಾತನಾಡಿ ಗೌಡ ಜನಾಂಗದ ಸಂಸ್ಕೃತಿ, ಆಚಾರ, ವಿಚಾರವನ್ನು ತಮ್ಮ ಮಕ್ಕಳಿಗೆ ತಿಳುವಳಿಕೆ ನೀಡುವಂತೆ ಪೋಷಕರಿಗೆ ಕಿವಿಮಾತು ಹೇಳಿದರು.
ಜನಾಂಗದ ಯುವಕರು ಭಾರತೀಯ ಸೇನೆಯ ಉನ್ನತ ಹುದ್ದೆಗೆ ಸೇರ್ಪಡೆಗೊಳ್ಳಲು ಪ್ರಯತ್ನಿಸಬೇಕು ಉನ್ನತ ವ್ಯಾಸಂಗ ಮಾಡಿ ರಾಷ್ಟ್ರೀಯ ಮಟ್ಟದ ಹುದ್ದೆಯಲ್ಲಿ ಗುರುತಿಸುವಂತಾಗಬೇಕು. ಗೌಡ ಜನಾಂಗದ ಹೆಚ್ಚಿನವರು ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡುವಂತಾಗಬೇಕು ಎಂದು ತಿಳಿಸಿದರು. ಸೇನೆಗೆ ಸೇರಲು ಅಥವಾ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಂಪರ್ಕಿಸುವAತೆ ತಿಳಿಸಿದರು. ನಮ್ಮ ಸಮಾಜವು ಯಾವುದೇ ಜನಾಂಗದ ವಿರುದ್ಧ ಸಂಘಟನೆ ಅಲ್ಲ ಕೇವಲ ನಮ್ಮ ಜನಾಂಗದ ಬಗ್ಗೆ ಜನಾಂಗದ ಇತಿಹಾಸದ ಬಗ್ಗೆ ಮತ್ತು ಅಸ್ತಿತ್ವದ ಬಗ್ಗೆ, ನಮ್ಮ ಸಂಘಟನೆ ಸೀಮಿತವಾಗಿದೆ ಎಂದು ತಿಳಿಸಿದರು.
ಮತ್ತೊಬ್ಬ ಅತಿಥಿಗಳು ಅರೆಭಾಷೆ ಗೌಡ ಫೆಡರೇಶನ್ ಅಧ್ಯಕ್ಷ ಆನಂದ್ ಕರಂದ್ಲಾಜೆ ಮಾತನಾಡಿ, ಫೆಡರೇಶನ್ ವತಿಯಿಂದ ಜಿಲ್ಲೆಯಲ್ಲಿ ಗೌಡರ ಸಂಸ್ಕೃತಿ ಬಿಂಬಿಸುವ ಸಲುವಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವಾರು ಕಾರ್ಯಕ್ರಮವನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಜನಾಂಗದವರು ಅತಿ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುವಂತೆ ತಿಳಿಸಿದರು. ಕೊಡಗು ಜಿಲ್ಲೆಯ ವಿವಿಧ ಭಾಗಗಳ ಸುಮಾರು ೨೩ ಗೌಡ ಸಮಾಜಗಳು ಫೆಡರೇಶನ್ನ ಅಧೀನಕ್ಕೆ ಒಳಪಟ್ಟಿದ್ದು ಜನಾಂಗದ ವಿವಿಧ ಕಾರ್ಯಕ್ರಮಗಳನ್ನು ಫೆಡರೇಶನ್ ವತಿಯಿಂದ ನಡೆಸಲಾಗುತ್ತಿದೆ ಎಂದು ವಿವರಣೆ ನೀಡಿದರು. ಈ ನೆಲ, ಜಲ, ಜನಾಂಗದ ಅಸ್ತಿತ್ವ, ಭಾಷೆ, ಸಂವಿಧಾನದ ಆರ್ಟಿಕಲ್ ಪ್ರಕಾರ ಈ ಜಿಲ್ಲೆಯ ಸುಮಾರು ೧೮ ಮೂಲ ನಿವಾಸಿಗಳು ನಾವೆಲ್ಲಾ ಒಂದೇ ಎಂಬುದು ನಮ್ಮ ಮೂಲ ಮಂತ್ರವಾಗಬೇಕು ಎಂಬುದಾಗಿ ವಿವರಿಸಿದ್ದರು. ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ, ಕೆದಂಬಾಡಿ ರಾಮಯ್ಯಗೌಡ ಮಾಡಿದ ತ್ಯಾಗ ಬಲಿದಾನದ ಬಗ್ಗೆ ವಿವರಣೆ ನೀಡಿದರು.
ಗೌಡ ಸಮಾಜದ ಅಧ್ಯಕ್ಷ ಗುಡ್ಡೆಮನೆ ವಿಶ್ವಕುಮಾರ್ ಮಾತನಾಡಿ, ಸಮಾಜದ ಸರ್ವ ಸದಸ್ಯರ ವತಿಯಿಂದ ದೇಣಿಗೆಯನ್ನು ಪಡೆದು ಸುಮಾರು ಮೂರು ಲಕ್ಷ ವೆಚ್ಚದಲ್ಲಿ ನೂತನವಾದ ವೇದಿಕೆ ನಿರ್ಮಾಣ ಮಾಡಲಾಗಿದೆ. ಈ ಕಾರ್ಯದಲ್ಲಿ ಕೈಜೋಡಿಸಿದ ಸಮಾಜದ ಸರ್ವ ಸದಸ್ಯರಿಗೂ ಹಾಗೂ ಸಹಕಾರ ನೀಡಿದ ಸಮಾಜದ ಸರ್ವ ಆಡಳಿತ ಮಂಡಳಿಯವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಜನಾಂಗದ ವಿವಿಧ ಭಾಗಗಳಲ್ಲಿ ಮದುವೆ ಸಮಾರಂಭಗಳಲ್ಲಿ ಒಂದೊAದು ರೀತಿಯ ಆಚಾರ ಪದ್ಧತಿ ನಡೆಯುತ್ತಿದ್ದು. ಒಂದೊAದು ತಾಲೂಕಿನಲ್ಲಿ ಒಂದೊAದು ರೀತಿಯ ಪದ್ಧತಿ ನಡೆಯುತ್ತಿದ್ದು. ಇದು ಒಟ್ಟಾರೆ ಒಂದೇ ರೀತಿಯಲ್ಲಿ ನಡೆಯಲು ಸಮಾಜದ ಒಕ್ಕೂಟ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಹಿತಿ ನೀಡಿದರು.
ಮಹಾಸಭೆ ಮುಗಿದ ನಂತರ ವೇದಿಕೆಯಲ್ಲಿ ಸದಸ್ಯರು ಮತ್ತು ಅವರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದ್ವಿತೀಯ ಪಿಯುಸಿ. ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಬೊಮ್ಮೇಗೌಡನ ಭುವನೇಶ್ವರಿ, ಅಚ್ಚಾಂಡಿರ ತಾರಾ ಹೇಮರಾಜ್, ಖಜಾಂಚಿ ಕೊಡೆಕಲ್ಲು ರೂಪಾ ನಿತ್ಯಾನಂದ, ನಿರ್ದೇಶಕರಾದ, ಕೊಡೆಕಲ್ಲು ಗಣೇಶ್, ಚಂಡಿರ ಮಂಜುನಾಥ್, ಕನ್ನಯ್ಯನ ಬಾಲಕೃಷ್ಣ, ಮಂದೋಡಿ ಜಗನ್ನಾಥ್ ಶಶಿ, ಗುಡ್ಡೆಮನೆ ಜಯ ವಿಶ್ವಕುಮಾರ್, ಕಳಂಜನ ದಾದಪ್ಪ, ಹಾಗೂ ಸಲಹಾ ಸಮಿತಿಯ ಸದಸ್ಯರಾದ ಅಚ್ಚಾಂಡಿರ ಹೇಮರಾಜ್, ಮಂದೋಡಿ ಹೇಮಚಂದ್ರ, ಚೆರಿಯಮನೆ ಭರತ್, ಬೊಟ್ಟುಮನೆ ಸತ್ಯ ಹಾಜರಿದ್ದರು. ಉಪಾಧ್ಯಕ್ಷರಾದ ಭುವನೇಶ್ವರಿ ಪ್ರಾರ್ಥನೆ ಮಾಡಿದರು. ತಾರಾ ಹೇಮರಾಜ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕೊಡೆಕಲ್ ಗಣೇಶ್ ನಿರೂಪಿಸಿದರು. ಚಂಡಿರ ಮಂಜುನಾಥ್ ವಂದಿಸಿದರು.