ಸಿದ್ದಾಪುರ, ಅ. ೨೫: ಕೊಡಗು ಜಿಲ್ಲೆಯಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು ಆಹಾರಗಳನ್ನು ಅರಸಿಕೊಂಡು ಪ್ರಾಣಿಗಳನ್ನು ಬೇಟೆಯಾಡಲು ಹುಲಿಯು ಕಾಡಿನಿಂದ ನಾಡಿಗೆ ಬರುತ್ತಿದೆ. ಅರಣ್ಯ ಪ್ರದೇಶದೊಳಗೆ ಹುಲಿಗಳು ಪರಸ್ಪರ ತಮ್ಮ ಜಾಗಕ್ಕಾಗಿ ಕಾದಾಟ ನಡೆಸಿ ಬಳಿಕ ಕೆಲವು ಹುಲಿಗಳು ಗಾಯಗೊಂಡು ಜಾಗ ಸಿಗದ ಹಿನ್ನೆಲೆಯಲ್ಲಿ ಬೇಟೆಯನ್ನು ಮಾಡಿಕೊಂಡು ನಾಡಿಗೆ ಲಗ್ಗೆ ಇಡುತ್ತಿದೆ . ಅಲ್ಲದೆ ಕೆಲವು ಹುಲಿಗಳು ವಯಸ್ಸಾಗಿ ಕಾಡಿನಲ್ಲಿ ಇರಲು ಸಾಧ್ಯವಿಲ್ಲದೆ ನಾಡಿನತ್ತ ಲಗ್ಗೆ ಇಡುತ್ತಿದೆ.
ಹುಲಿ ಸಂರಕ್ಷಿತ ಪ್ರದೇಶದಿಂದ ದಾಟಿ ಇದೀಗ ಜನವಸತಿ ಪ್ರದೇಶಗಳಲ್ಲಿ ಸಂಚರಿಸಿ ರೈತರು ಸಾಕಿದ ಜಾನುವಾರುಗಳನ್ನು ಹಾಗೂ ಬೆಲೆಬಾಳುವ ಹಸುಗಳನ್ನು ಕೊಂದುಹಾಕಿ ಮಾಂಸವನ್ನು ತಿಂದು ಕಳೆಬರ ಬಿಟ್ಟು ತೆರಳುತ್ತಿರುವ ಹಲವಾರು ಘಟನೆಗಳು ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ದಕ್ಷಿಣ ಕೊಡಗಿನಲ್ಲಿ ಅತ್ಯಧಿಕ ಜಾನುವಾರುಗಳು ಹುಲಿಯ ದಾಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆಗಳು ನಡೆದಿರುತ್ತದೆ. ಇದಲ್ಲದೆ ಇದೀಗ ಟೈಗರ್ ಜೋನ್ ವ್ಯಾಪ್ತಿಗೆ ಒಳಪಡುವ ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಬಿಟ್ಟಂಗಾಲ, ಕೊಳತ್ತೋಡು ಬೈಗೋಡು, ಮೈತಾಡಿ, ಹಾಗೂ ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಬಾಡಗ -ಬಾಣಂಗಾಲ ಗ್ರಾಮದಲ್ಲಿ ಕೂಡ ಹಲವಾರು ಗ್ರಾಮಗಳಲ್ಲಿ ಹುಲಿ ದಾಳಿಗೆ ಸಿಲುಕಿ ರೈತರು ಸಾಕಿದ ಜಾನುವಾರುಗಳು ಸಾವನ್ನಪ್ಪಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ಹಸುಗಳನ್ನು ಸಾಕಿ ಜೀವನ ಉಪಯೋಗಕ್ಕೆ ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರ ಹಸುಗಳನ್ನು ಹುಲಿ ಕೊಂದು ಹಾಕಿದ ಹಿನ್ನೆಲೆಯಲ್ಲಿ ಅದೆಷ್ಟೋ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಘಟನೆಗಳು ನಡೆದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಉತ್ತಮ ತಳಿಯ ಹಸುಗಳು ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಅರಣ್ಯ ಇಲಾಖೆ ಕೇವಲ ರೂ.೩೫೦೦೦ ಪರಿಹಾರ ನೀಡುತ್ತಿದ್ದು ಇದು ಸಾಲದು ಎಂದು ರೈತರು ಸಾಕಷ್ಟು ಬಾರಿ ಹೋರಾಟ ಮಾಡಿದರು ಕೂಡ ಸರ್ಕಾರ ಅಧಿಕ ಮೊತ್ತದ ಪರಿಹಾರವನ್ನು ನೀಡದೆ ಸರ್ಕಾರವು ನಿರ್ಲಕ್ಷ ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.
ದಕ್ಷಿಣ ಕೊಡಗಿನ ವಿವಿಧ ಗ್ರಾಮಗಳಲ್ಲಿ ಹುಲಿಯು ಹಾಡಹಗಲೇ ಸಾಕಿದ ಹಸುಗಳ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ ಘಟನೆಗಳು ನಡೆದಿತ್ತು. ದಕ್ಷಿಣ ಕೊಡಗಿನ ಬೆಳ್ಳೂರು ಎಂಬ ಒಂದೇ ಗ್ರಾಮದಲ್ಲಿ ಸುಮಾರು ೫೦ಕ್ಕೂ ಅಧಿಕ ಜಾನುವಾರುಗಳನ್ನು ಹುಲಿಯು ಸಾಯಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಒಂದೇ ರೈತರಿಗೆ ಸೇರಿದ ೧೩ ಹಸುಗಳನ್ನು ಕೊಂದ ಘಟನೆಯು ಕೂಡ ನಡೆದಿತ್ತು. ಇದಲ್ಲದೆ ತಿತಿಮತಿ ಹುಣಸೂರು ವನ್ಯಜೀವಿ ವಿಭಾಗದ ಮರಪಾಲ , ಚಿಣ್ಣಿಹಡ್ಲು ಮುಂತಾದ ಹಾಡಿಗಳಲ್ಲಿ ಹುಲಿಯು ದಾಳಿ ನಡೆಸಿ ಸುಮಾರು ೩೦ಕ್ಕೂ ಅಧಿಕ ಜಾನುವಾರುಗಳನ್ನು ಕೋಣಗಳನ್ನು ಕೊಂದು ಸಾಯಿಸಿದ ಘಟನೆಗಳು ಕೂಡ ನಡೆದು ಹಾಡಿಯ ನಿವಾಸಿಗಳು ಆತಂಕದಿAದಲೇ ಜೀವನ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ. ಆನೆಚೌಕೂರು ವನ್ಯಜೀವಿ ಭಾಗದ ಪ್ರದೇಶಗಳಲ್ಲಿ ಕೂಡ ಹುಲಿಯ ಉಪಟಳ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸೋಮವಾರಪೇಟೆ, ಕುಶಾಲನಗರ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ಕೂಡ ಹುಲಿಯ ಉಪಟಳದಿಂದಾಗಿ ಶಾಲೆಯ ಮಕ್ಕಳು ತೋಟದ ಮಾರ್ಗವಾಗಿ ಶಾಲೆಗಳಿಗೆ ಕಾಲೇಜುಗಳಿಗೆ ತೆರಳಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಮುಗಿದ ವನ್ಯಜೀವಿ ಗಣತಿ ಅನ್ವಯ ಹುಲಿಯ ಸಂತತಿ ೧೫೦ಕ್ಕೂ ಅಧಿಕವಿದೆಂದು ರಾಷ್ಟಿçÃಯ ಉದ್ಯಾನದ ವಲಯ ಅರಣ್ಯ ಅಧಿಕಾರಿ ನವೀನ್ ರಾವತ್ ನಾಗರಹೊಳೆಯಲ್ಲಿ ನಡೆದ ವನ್ಯಜೀವಿ ಅಧ್ಯಯನ ಶಿಬಿರದಲ್ಲಿ ಮಾಹಿತಿ ನೀಡಿದ್ದರು. ಇದಲ್ಲದೆ ಹುಲಿ ಅಭಯಾರಣ್ಯದ ಸರಹದ್ದಿನಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಗ್ರಾಮಗಳಿಗೆ ನುಸುಳಿದ ಸಂದರ್ಭ ಅದರ ಸ್ಪಷ್ಟ ಮಾಹಿತಿಯನ್ನು ನೀಡಲು ಕ್ಯಾಮೆರಾದ ಮೂಲಕ ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ರಾಜ್ಯದ ಅರಣ್ಯ ಪ್ರದೇಶದ ಒಳಗೆ ಮಾಂಸಹಾರಿ ಪ್ರಾಣಿಯಾಗಿರುವ ಹುಲಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಲು ಸರಕಾರವು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆಯನ್ನು ರೂಪಿಸುವ ಮೂಲಕ ಅವುಗಳಿಗೆ ಬೇಕಾದಂತ ಆಹಾರವನ್ನು ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಆದರೂ ಕೂಡ ಇತ್ತೀಚಿನ ದಿನಗಳಲ್ಲಿ ಹುಲಿಯು ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಂಡು ಸಾಕುವ ಜಾನುವಾರುಗಳ ಮೇಲೆ ದಾಳಿ ನಡೆಸಿ ಸಾಯಿಸುತ್ತಿರುವ ಘಟನೆಯಿಂದಾಗಿ ರೈತರಿಗೆ ಹಾಗೂ ಹೈನುಗಾರಿಕೆ ಮಾಡುವ ಗ್ರಾಮಸ್ಥರಿಗೆ ಆತಂಕ ಸೃಷ್ಟಿಸಿದೆ.ಹುಲಿಯು ಕಾಡಿನಲ್ಲಿ ಸಂಚರಿಸುತ್ತಿದ್ದರೆ ಕಾಡು ಸುರಕ್ಷಿತವಾಗಿ ಇರುತ್ತದೆ ಅರಣ್ಯವನ್ನು ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಹಾಗೂ ಸಾರ್ವಜನಿಕರು ಭಯದಿಂದ ಯಾರು ಕೂಡ ಅರಣ್ಯ ಪ್ರದೇಶದೊಳಗೆ ಪ್ರವೇಶಿಸಲು ಅಷ್ಟು ಸುಲಭ ಸಾಧ್ಯವಾಗುತ್ತಿಲ್ಲ.
ಹುಲಿ ಕಾಡಿನಲ್ಲಿದ್ದರೆ ಬೇರೆ ವನ್ಯ ಪ್ರಾಣಿಗಳಿಗೆ ರಕ್ಷಣೆ ಇದ್ದಂತೆ ಈ ನಿಟ್ಟಿನಲ್ಲಿ ಹುಲಿಯ ಸಂರಕ್ಷಣೆ ಬಗ್ಗೆ ಸರ್ಕಾರ ಅರಣ್ಯ ಇಲಾಖೆ ಅಧಿಕಾರಿಗಳು,ಹೆಚ್ಚಿನ ಆಸಕ್ತಿ ವಹಿಸುತ್ತಿದೆ ಹುಲಿಯ ಸಂಖೆಯು ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯ ಸಂತತಿ ಹೆಚ್ಚಾಗುತ್ತಿದ್ದು ಈ ಭಾಗದಲ್ಲಿ ಹುಲಿಗೆ ಆಹಾರವಾಗಿ ಅರಣ್ಯದೊಳಗೆ ಪ್ರಾಣಿಗಳು ಸುಲಭವಾಗಿ ಲಭಿಸುತ್ತಿದೆ ಒಟ್ಟಿನಲ್ಲಿ ಕಾಡಿನಲ್ಲಿ ಸಂಚರಿಸಬೇಕಾದ ಹುಲಿಯು ನಾಡಿಗೆ ಲಗ್ಗೆ ಇಟ್ಟು ರೈತರಿಗೆ ಹಾಗೂ ಗ್ರಾಮಸ್ಥರಿಗೆ ಆತಂಕ ಮೂಡಿಸುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಈ ಬಗ್ಗೆ ಸರಕಾರವು ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಾಸು .ಎ.ಎನ್.