ಕುಶಾಲನಗರ, ಅ. ೨೫: ಕ್ರೀಡೆ ಮೂಲಕ ಉತ್ತಮ ಆರೋಗ್ಯ ಗಳಿಸಲು ಸಾಧ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಕೊಡಗು ಸೆಸ್ಟೋಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಆರಂಭಗೊAಡ ಕರ್ನಾಟಕ ತಂಡದ ಆಟಗಾರರ ಅಭ್ಯಾಸ ಶಿಬಿರ ಉದ್ಘಾಟನೆ ಹಾಗೂ ಸಮವಸ್ತç ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಉತ್ತಮ ತರಬೇತಿ ಪಡೆದು ಗೆಲುವಿನ ಗುರಿ ಹೊಂದಲು ಅವರು ಕಿವಿಮಾತು ಹೇಳಿದರು.

ನ್ಯಾಷನಲ್ ಜೂನಿಯರ್ ಮತ್ತು ಸೀನಿಯರ್ ಸೆಸ್ಟೋಬಾಲ್ ಫೆಡರೇಶನ್ ಕಪ್ ೨೦೨೬ ನವಂಬರ್ ೧ ರಿಂದ ೩ ರ ತನಕ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯಲಿದ್ದು ಈ ಸಂಬAಧ ಕುಶಾಲನಗರ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು, ಮೈದಾನದಲ್ಲಿ ತರಬೇತಿ ರಾಜ್ಯ ತಂಡದ ಕೊಡಗು ಜಿಲ್ಲೆಯ ಸದಸ್ಯರು ಪಡೆಯುತ್ತಿದ್ದಾರೆ.

ತರಬೇತುದಾರರಾದ ಜಾನ್ಸನ್ ಮತ್ತು ಮಂಜು ತರಬೇತಿ ನೀಡಲಿದ್ದಾರೆ.

ಕಾಲೇಜು ಪ್ರಾಂಶುಪಾಲರಾದ ಡಾ. ನಾಗೇಂದ್ರ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಶಾಲನಗರ ಬೀದಿಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾದ ಎಸ್. ಆದಂ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನಗರ ಅಧ್ಯಕ್ಷರಾದ ಎಂ. ಜೆ. ಇರ್ಫಾನ್ ಕಾಂಗ್ರೆಸ್ ಮುಖಂಡರಾದ ಪಿ. ಎಂ. ಅಜೀಜ್, ಉದ್ಯಮಿ ಎಂ. ಎಸ್. ಭಾಷಾ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಎನ್. ಚಂದ್ರಮೋಹನ್, ಕಾಂಗ್ರೆಸ್ ಮುಖಂಡರಾದ ರುಬಿನ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸುನಿತಾ ಮತ್ತಿತರರು ಇದ್ದರು.