ಮಡಿಕೇರಿ, ಅ. ೨೪: ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ೨೦೨೬ ರ ಡಿಸೆಂಬರ್ ೨೩ ರಿಂದ ೨೫ ರಂದು ಉದ್ಯಾನಗಿರಿಯ ಮುಖ್ಯ ಆವರಣದಲ್ಲಿ “ಹವಾಮಾನ ವೈಪರಿತ್ಯದಲ್ಲಿ ಸುಸ್ಥಿರ ತೋಟಗಾರಿಕೆ” ಎಂಬ ಧ್ಯೇಯದೊಂದಿಗೆ ‘ತೋಟಗಾರಿಕೆ ಮೇಳ-೨೦೨೬’ವನ್ನು ಹಮ್ಮಿಕೊಳ್ಳಲಾಗಿದೆ.
ಈ ತೋಟಗಾರಿಕೆ ಮೇಳದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ ೨೫ ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಗೆ ಒಬ್ಬ ಶ್ರೇಷ್ಠ ತೋಟಗಾರಿಕೆ ರೈತ/ರೈತ ಮಹಿಳೆ ಆಯ್ಕೆ ಮಾಡಿ ಸೂಕ್ತ ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಬಯಸುವ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ತೋಟಗಾರಿಕೆ ರೈತ/ರೈತ ಮಹಿಳೆಯರು ಅರ್ಜಿ ನಮೂನೆಯನ್ನು ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಯಲಚಹಳ್ಳಿ, ಇಲವಾಲ, ಮೈಸೂರು ೫೭೧೧೩೦ ಮೂಲಕ ಇಲಾಖೆಯಿಂದ ಅಥವಾ ತೋ.ವಿ.ವಿ.ಯ ವೆಬ್ಸೈಟ್: ತಿತಿತಿ.uhsbಚಿgಚಿಟಞoಣ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ ೯ರ ಸಂಜೆ ೫ ಗಂಟೆಯೊಳಗೆ ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಯಲಚಹಳ್ಳಿ, ಇಲವಾಲ, ಮೈಸೂರು ೫೭೧೧೩೦, ಇವರಿಗೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ೮೧೪೭೯೫೯೨೨೬ / ೯೩೪೧೯೯೭೨೯೭ಅನ್ನು ಸಂಪರ್ಕಿಸಬಹುದು.