ಪಾಲಿಬೆಟ್ಟ, ಅ. ೨೩: ಮೈಸೂರು ದಸರಾ ಮಹೋತ್ಸವ-೨೦೨೬ರ ಅಂಗವಾಗಿ ಪಿ. ಕಾಳಿಂಗರಾವ್ ಸಭಾಂಗಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ, ಮೈಸೂರು ಇಲ್ಲಿ ನಡೆದ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆಯಲ್ಲಿ ಪಾಲಿಬೆಟ್ಟದ ಚೆಶೈರ್ ಹೋಮ್ ವಿಶೇಷ ಶಾಲೆಯ ಮುಖ್ಯ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಯೋಗ ಶಿಕ್ಷಕರಾಗಿರುವ ಶಿವರಾಜ್ ಎಸ್.ಸಿ. ಅವರ ತರಬೇತಿಯಲ್ಲಿ ಚೆಶೈರ್ ಹೋಮ್ನ ವಿದ್ಯಾರ್ಥಿ ಸುಮೇಶ್ ಕೆ.ಪಿ. ಭಾಗವಹಿಸಿ ವಿಶೇಷ ಚೇತನರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು, ಬೆಳ್ಳಿಯ ಪದಕ, ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಸ್ವೀಕರಿಸಿರುತ್ತಾರೆ. ಇವರು ಸಿದ್ದಾಪುರ ಗುಹ್ಯ ಗ್ರಾಮದ ನಿವಾಸಿ ಪ್ರೇಮಾನಂದ ಕೆ.ಸಿ. ಮತ್ತು ಮೀನಾಕ್ಷಿಯವರ ಪುತ್ರ.