ಸೋಮವಾರಪೇಟೆ, ಅ. ೨೩: ಇಲ್ಲಿನ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಆಯೋಜಿಸಿದ್ದ ಶರನ್ನವರಾತ್ರಿ ಉತ್ಸವ ಶ್ರದ್ದಾಭಕ್ತಿಯಿಂದ ಸಂಪನ್ನಗೊAಡಿತು. ಒಂಬತ್ತು ದಿನಗಳ ಕಾಲ ಶ್ರೀ ಬಸವೇಶ್ವರ ದೇವಾಲಯದಲ್ಲಿ ದೇವಿಗೆ ಸಮಾಜದ ಮಹಿಳೆಯರಿಂದ ವಿವಿಧ ಬಗೆಯ ಅಲಂಕಾರಗಳನ್ನು ನೆರವೇರಿಸಿ, ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಇದರೊಂದಿಗೆ ವೀರಶೈವ ಮಹಿಳಾ ಭಜನಾ ತಂಡದ ವತಿಯಿಂದ ಪ್ರತಿದಿನ ಭಕ್ತಿಗೀತೆ ಹಾಗೂ ಭಜನಾ ಕಾರ್ಯಕ್ರಮಗಳು ಜರುಗಿದವು. ಆಯುಧ ಪೂಜೆಯ ದಿನದಂದು ದೇವಾಲಯವನ್ನು ವಿಶೇಷವಾಗಿ ದೀಪಗಳಿಂದ ಅಲಂಕರಿಸಿ, ದೇವಿಯನ್ನು ಭಕ್ತಿಭಾವದಿಂದ ಆರಾಧಿಸಲಾಯಿತು.

ಉತ್ಸವದ ಸಂಪನ್ನ ದಿನವಾದ ವಿಜಯದಶಮಿಯಂದು ಹೊಳೆನರಸೀಪುರದ ವೀರಗಾಸೆ ಕಲಾವಿದ ರವಿ ಅವರಿಂದ ವೀರಗಾಸೆ ಪ್ರದರ್ಶನ ನಡೆಯಿತು. ನಂತರ ಸಮಾಜದ ಭಕ್ತವೃಂದದ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಅಂಬು ಬಡೆಯುವ ಹಾಗೂ ಬನ್ನಿ ಕಡಿಯುವ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಬಳಿಕ ದೇವಿಗೆ ಉಯ್ಯಾಲೋತ್ಸವವನ್ನು ಭಕ್ತಿಪೂರ್ವಕವಾಗಿ ಆಚರಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಮಂಗಳ ಹಾಡಲಾಯಿತು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಾಜದ ಯಜಮಾನರಾದ ಬಿ. ಪಿ. ಶಿವಕುಮಾರ್, ಶೆಟ್ರು ಬಿ. ಆರ್. ಮೃತ್ಯುಂಜಯ, ಕಾರ್ಯದರ್ಶಿ ಹೆಚ್. ಎಸ್. ಯುವರಾಜ್, ಆಡಳಿತ ಮಂಡಳಿಯ ಸದಸ್ಯರು ಹಾಗೂ ದೇವಾಲಯದ ಪ್ರಧಾನ ಅರ್ಚಕರಾದ ಶೇಖಯ್ಯ ಶಾಸ್ತಿçಗಳು ಉಪಸ್ಥಿತರಿದ್ದರು.