ಐಗೂರು, ಅ. ೨೩: ಕಿರಗಂದೂರು ಗ್ರಾಮದ ಟಾಟಾ ಕಾಫಿಯ ವನ ದುರ್ಗಾದೇವಿ ದೇವಾಲಯದಲ್ಲಿ ನವರಾತ್ರಿ ಪೂಜೆ ಸಂಪನ್ನಗೊAಡಿತು.
ಹತ್ತು ದಿನಗಳ ಕಾಲ ದೇವಾಲಯದಲ್ಲಿ ಅರ್ಚಕರಾದ ಬಾಲುಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ರಾತ್ರಿ ವೇಳೆ ಆಕಾಶವಾಣಿ ಕಲಾವಿದ ಶಾಂತಳ್ಳಿ ಗಣೇಶ್ ಅವರಿಂದ ಭಕ್ತಿಯ ಗೀತೆಗಾಯನ ನಡೆದವು, ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ನಡೆಯಿತು.