ಕಣಿವೆ, ಅ. ೨೩: ಕುಶಾಲನಗರ ತಾಲೂಕಿನ ಹುಲುಸೆ ಗ್ರಾಮದ ಗ್ರಾಮ ದೇವತೆ ಬನದೊಳಗಿನ ದೊಡ್ಡಮ್ಮ ಹಾಗೂ ಚಿಕ್ಕಮ್ಮ ದೇವತೆ ಸನ್ನಿಧಿಯಲ್ಲಿ ನವರಾತ್ರಿ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಗ್ರಾಮದ ಮೂಕಾಂಬಿಕಾ, ಪ್ರಕೃತಿ, ಜ್ಞಾನಜ್ಯೋತಿ, ನೇತ್ರಾವತಿ, ಕಾವೇರಿ ಸ್ತಿçà ಶಕ್ತಿ ಸಂಘಗಳ ವತಿಯಿಂದ ಮಹಿಳಾ ಭಕ್ತರು ಸೇರಿ ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬೆಳಿಗ್ಗೆ ದೇವಾಲಯದ ಸನ್ನಿಧಿಯಲ್ಲಿ ದೇವತಾ ಮೂರ್ತಿಗಳಿಗೆ ವಿವಿಧ ಅಭಿಷೇಕಗಳನ್ನು ನಡೆಸಲಾಯಿತು.

ನಂತರ ಬಗೆ ಬಗೆಯ ಪುಷ್ಪಗಳು ಹಾಗೂ ವಸ್ತಾçಭರಣಗಳಿಂದ ದೇವತಾ ಮೂರ್ತಿಯನ್ನು ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಸುಮಂಗಲಿಯರಿಗೆ ಅರಿಶಿಣ - ಕುಂಕುಮ, ಬಳೆಗಳನ್ನು ನೀಡಿ ಸತ್ಕರಿಸಲಾಯಿತು. ಚಿತ್ರಕುಮಾರ್ ಹಾಗೂ ಮಂಜುನಾಥ್ ಪೂಜಾ ವಿಧಿ ನಡೆಸಿಕೊಟ್ಟರು. ಸ್ತಿçà ಶಕ್ತಿ ಸಂಘಗಳ ಪದಾಧಿಕಾರಿಗಳಾದ ಅಶ್ವಿನಿ, ಶುಭ, ದಾಕ್ಷಾಯಿಣಿ, ರತ್ನ, ರೇಣುಕಾ, ಪ್ರೇಮ, ಯಶೋಧ, ಮಲ್ಲಿಗೆ, ತೇಜಾಂಭಿಕೆ, ಶಾಂತಿ, ರೇಶ್ಮಾ, ಗ್ರಾಮದ ದೇವತಾ ಸಮಿತಿ ಅಧ್ಯಕ್ಷ ಶಿವನಂಜಪ್ಪ ಮೊದಲಾದವರಿದ್ದರು. ಬಳಿಕ ನೆರೆದ ಭಕ್ತರಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಿಸಲಾಯಿತು.