ಸುAಟಿಕೊಪ್ಪ, ಅ. ೨೩: ಸುಂಟಿಕೊಪ್ಪ ವಾಹನಚಾಲಕರ ಸಂಘದ ೫೬ನೇ ವಾರ್ಷಿಕೋತ್ಸವದ ಆಯುಧಪೂಜಾ ಸಮಾರಂಭದ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಅಯೋಜಿಸಲಾಗಿದ್ದು ಮಕ್ಕಳ ಮಂಟಪಗಳು ಮಂಜಿನನಗರಿ ದಸರಾ ಸಮಾರಂಭ ವನ್ನೇ ನೆನಪಿಸುತ್ತಿತ್ತು. ತೀವ್ರ ಪೈಪೋಟಿಯಿಂದ ಕೂಡಿದ ಸ್ಪರ್ಧೆಯು ಕೊನೆಯಲ್ಲಿ ಟೀಮ್ ವಾರಿರ್ಸ್ ತಂಡವು ಪ್ರಥಮ ಬಹುಮಾನವನ್ನು ಪಡೆದುಕೊಂಡಿತು. ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಗಳು ಅನಾವರಣಗೊಂಡಿತ್ತಲ್ಲದೆ ನೆರೆದಿದ್ದ ಸಾರ್ವಜನಿಕರ ಮನಸೂರೆಗೊಳಿಸಿತು.
೫೬ನೇ ವಾರ್ಷಿಕೋತ್ಸವದ ಆಯುಧಪೂಜಾ ಸಮಾರಂಭದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಅದರಂತೆ ಈ ಬಾರೀ ೪ ಮಕ್ಕಳ ಮಂಟಪಗಳು ವಿವಿಧ ಮಾದರಿಗಳಿಂದ ಕೂಡಿದ್ದು ಮಡಿಕೇರಿ ದಸರಾದಂತೆ ದೇವಾನು ದೇವತೆಗಳ ನರ್ತನ ಹಾಗೂ ಅಸುರರ ವದನದ ಕಥಾ ಸಂಕಲನವು ಮೂಡಿಬಂದು ನೆರೆದಿದ್ದ ಸಾರ್ವಜನಿಕರಿಗೆ ಮುದ ನೀಡಿದ್ದಲ್ಲದೆ ಪ್ರತಿಭೆಗಳನ್ನು ಅನಾವರಣಗೊಳಿಸಿದರು.
ಮಕ್ಕಳ ಮಂಟಪದ ಪ್ರಥಮ ಬಹುಮಾನ ಟೀಮ್ ವಾರಿರ್ಸ್ ತಂಡದವರು ಪಡೆದರೆ, ದ್ವಿತೀಯ ಬಹುಮಾನವನ್ನು ಟೀಮ್ ಅಗ್ನಿ ಜ್ವಾಲೆ ಸುಂಟಿಕೊಪ್ಪ ಹಾಗೂ ಟೀಮ್ ದೇವಿ ರೋರ್ಕ್ಸ್ಟ್ ತಂಡಗಳು ಪಡೆದರೆ ತೃತೀಯ ಬಹುಮಾನವನ್ನು ಟೀಮ್ ಟಿಸಿಎಲ್ ಸುಂಟಿಕೊಪ್ಪ ತಂಡದವರು ಪಡೆದುಕೊಂಡರು. ಕಚೇರಿ ಮತ್ತು ಸಂಘ ಸಂಸ್ಥೆ ಅಲಂಕಾರ ಸ್ಪರ್ಧೆಯಲ್ಲಿ ಸುಂಟಿಕೊಪ್ಪ ಪೊಲೀಸ್ಠಾಣೆ ಪ್ರಥಮ, ದ್ವಿತೀಯ ಸ್ಥಾನವನ್ನು ಚೆಸ್ಕಾಂ ಇಲಾಖೆ, ತೃತೀಯ ಸ್ಥಾನವನ್ನು ಸುಂಟಿಕೊಪ್ಪ ಗ್ರಾ.ಪಂ. ಪಡೆದುಕೊಂಡಿತು.
ದೊಡ್ಡವಾಹನ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹೊಸಕೋಟೆಯ ಕೆಎ ೧೭ ಬಿ ೯೧೦೩ ಲಾರಿ, ದ್ವಿತೀಯ ಬಹುಮಾನ ಹೊಸಕೋಟೆಯ ಕೆಎ ೪೫ಎ ೩೪೮೯, ತೃತೀಯ ಬಹುಮಾನವನ್ನು ಟಿಸಿಎಲ್ ಚೇಂಜರ್ ಸುಂಟಿಕೊಪ್ಪ ವಾಹನವು ಪಡೆದುಕೊಂಡಿತು. ಅಂಗಡಿ ಮಳಿಗೆ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಶ್ರೀಮಾನ್ ಎಂಟರ್ ಪ್ರೆöÊಸಸ್, ದ್ವಿತೀಯ ಬಹುಮಾನ ಸ್ಟುಡೆಂಟ್ ಕಾರ್ನರ್, ಚಿಕ್ಕ ವಾಹನಗಳ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕೆಎ೦೯ ಎಎ೦೯೧೨, ದ್ವಿತೀಯ ಬಹುಮಾನ ಕೆಎ ೩೫ಎಂ ೪೧೨೮, ತೃತೀಯ ಬಹುಮಾನ ಕೆಎ ೫೧ಎಂ ೯೦೯೭, ಆಟೋರಿಕ್ಷಾಗಳ ಅಲಂಕಾರ ಸ್ಪರ್ಧೆಯಲ್ಲಿ ಶಿವಮಣಿ ಪ್ರಥಮ, ವರ್ಕ್ಶಾಪ್ಗಳ ಅಲಂಕಾರ ಸ್ಪರ್ಧೆಯಲ್ಲಿ ಗದೆಹಳ್ಳದ ಪ್ರಭ ವರ್ಕ್ಶಾಪ್ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
ಈ ಸಂದರ್ಭ ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ. ಕಿಟ್ಟಣ್ಣ ರೈ, ಪ್ರಧಾನ ಕಾರ್ಯದರ್ಶಿ ಮುನೀರ್ ಕಂಬಿಬಾಣೆ, ಖಜಾಂಚಿ ಅಸೀಸ್ ಕೊಡಗರಹಳ್ಳಿ ಉಪಾಧ್ಯಕ್ಷ ಅಂಬೆಕಲ್ಚAದ್ರು, ಕೃಷ್ಣಪ್ಪ ಬಿ.ಎ., ಸಹಕಾರ್ಯದರ್ಶಿ ಪಟ್ಟೆಮನೆ. ಸುನಿಲ್ಕುಮಾರ್, ಸಂಘಟನಾ ಕಾರ್ಯದರ್ಶಿ ಅಬ್ದುಲ್ಲ್ಲಕುಟ್ಟಿ, ಸಲಹಾ ಸಮಿತಿ ಸದಸ್ಯರುಗಳಾದ ಎಸ್.ಯು. ಮಮ್ಮದ್, ಜೈನುದ್ದೀನ್, ದೇವಯ್ಯ, ಇಸ್ಮಾಯಿಲ್ (ಕಾಕು) ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿಸಿ. ಎ.ಬಸಪ್ಪÀ, ಸತೀಶ್, ಪಟ್ಟೆಮನೆ ಮಧು, ತನ್ಶೀರ್, ಮೋನು, ರಫೀಕ್, ಶಕ್ತಿವೇಲು, ಜಿ.ಕುಮಾರ, ನಾಸರ್ ಆಜ್ಮಲ್, ಸಚಿನ್, ಪ್ರವಿಣಸಾಜು, ಸಲಾಂ, ಅಸ್ಕರ್, ಪಟ್ಟೆಮನೆ ರಕ್ಷಿತ್ ರಿನು, ಸಲೀಂ, ಅಸೀಸ್ ಹೊಸಕೋಟೆ ಮತ್ತಿತರರು ಇದ್ದರು.