ವೀರಾಜಪೇಟೆ, ಅ. ೨೨: ಇತ್ತೀಚೆಗೆ ವೀರಾಜಪೇಟೆ ಗಣೇಶೋತ್ಸವ ಆಚರಣೆ ಸಂದರ್ಭ ವಿದ್ಯುತ್ ಅವಘಡದಿಂದ ನಿಧನ ಹೊಂದಿದ ದುರ್ದೈವಿ, ಬಸವರಾಜ ಗಂಗಾಧರ ಹಂಚಿಮನಿ ಅವರ ಕುಟುಂಬದವರಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ವೈಯಕ್ತಿಕವಾಗಿ ರೂ. ೩ ಲಕ್ಷಗಳ ಧನಸಹಾಯ ಮಾಡಿದರು.
ಈ ಸಂದರ್ಭ ರಾಕೇಶ್, ಸಚಿನ್ ಸಾಗರ್, ಚಂದ್ರ, ವಿಠಲ, ಶ್ರೀನಿವಾಸ ಮೂರ್ತಿ, ವರುಣ್, ಮೂರ್ತಿ, ನರೇಂದ್ರ ಕಾಮತ್ ಅವರು ಉಪಸ್ಥಿತರಿದ್ದರು.