ಸೋಮವಾರಪೇಟೆ, ಅ. ೨೦: ಪ್ರವಾಸೋದ್ಯಮ ಇಲಾಖೆಯ ೨೦೨೪-೨೫ನೇ ಸಾಲಿನ ಎಸ್.ಸಿ.ಎಸ್.ಪಿ. ಯೋಜನೆಯಡಿ ಆಯ್ಕೆಯಾದ ಫಲಾನುಭವಿಗೆ ಶಾಸಕ ಡಾ. ಮಂತರ್ ಗೌಡ ಅವರು ಮೊಬೈಲ್ ಕ್ಯಾಂಟೀನ್ ಹಸ್ತಾಂತರಿಸಿದರು.
ಪ್ರವಾಸೋದ್ಯಮ ಇಲಾಖೆಯ ಮೂಲಕ ಪರಿಶಿಷ್ಟ ಜಾತಿಯ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸುವ ಉದ್ದೇಶದಿಂದ, ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದ ಹೆಬ್ಬಾಲೆಯ ಹೆಚ್. ಎಸ್. ರಾಕೇಶ್ ಅವರಿಗೆ, ಪ್ರವಾಸಿತಾಣದಲ್ಲಿ ಉದ್ಯಮ ಚಟುವಟಿಕೆ ಕೈಗೊಳ್ಳಲು ಇಲಾಖೆಯಿಂದ ರೂ. ೫ ಲಕ್ಷಗಳ ಸಹಾಯಧನದೊಂದಿಗೆ ಒದಗಿಸಲಾದ ಮೊಬೈಲ್ ಕ್ಯಾಂಟೀನ್ ವಾಹನವನ್ನು ಸೋಮವಾರಪೇಟೆಯ ಶಾಸಕರ ಕಚೇರಿ ಮುಂಭಾಗ, ಶಾಸಕ ಡಾ. ಮಂತರ್ ಗೌಡ ಅವರು ಹಸ್ತಾಂತರಿಸಿದರು.
ಈ ಸಂದರ್ಭ ಪ್ರವಾಸೋದ್ಯಮ ಇಲಾಖೆಯ ಶಶಿಧರ್, ಪ್ರಮುಖರಾದ ಎಚ್. ಎನ್. ರಾಜಶೇಖರ್, ಬಿ.ಬಿ. ಸತೀಶ್, ಜನಾಧÀðನ್ ಸೇರಿದಂತೆ ಇತರರು ಇದ್ದರು.