ಚೆಟ್ಟಳ್ಳಿ, ಅ. ೨೦: ಚೆಟ್ಟಳ್ಳಿ ಪೊಲೀಸ್ ಉಪಠಾಣೆಯಲ್ಲಿ ಆಯುಧ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭ ಠಾಣೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅರ್ಚಕರು ಆಯುಧ ಪೂಜೆ, ವಾಹನ ಪೂಜೆ ಹಾಗೂ ಲಕ್ಷಿö್ಮÃ ಪೂಜೆಯನ್ನು ನೆರವೇರಿಸಿದರು. ಮಹಾಮಂಗಳಾರತಿ ಬಳಿಕ ಪ್ರಸಾದ ವಿತರಣೆ ಮಾಡಲಾಯಿತು.
ಠಾಣಾಧಿಕಾರಿ ಎಎಸ್ಐ ಮೊಣ್ಣಪ್ಪ ಪಟ್ರಪಂಡ ಮಾತನಾಡಿ, ಎಲ್ಲ ಜಾತಿ ಹಾಗೂ ಜನಾಂಗದವರು ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಸೌಹಾರ್ದದಿಂದ ಬದುಕಬೇಕು ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗಳಾದ ವಿಠಲ್ ಒಡೆಯರ್, ಬಾಳಗೌಡ ಪಾಟೀಲ್, ಚೆಟ್ಟಳ್ಳಿಯ ವರ್ತಕರು, ವಾಹನ ಹಾಗೂ ಆಟೋ ಚಾಲಕರು ಸೇರಿದಂತೆ ಸ್ಥಳೀಯರು ಪಾಲ್ಗೊಂಡಿದ್ದರು.