ಮಡಿಕೇರಿ, ಅ. ೨೦: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣ ಗೋಣಿಕೊಪ್ಪಲುವಿನಲ್ಲಿ ನಾಡಹಬ್ಬ ದಸರಾ ಉತ್ಸವವನ್ನು ವಿಜೃಂಭಣೆಯಿAದ ಆಚರಿಸುವ ನಿಟ್ಟಿನಲ್ಲಿ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.
ತಾ. ೨೧ ರಂದು (ಇಂದು) ವಿಜಯದಶಮಿಯ ಸಂಭ್ರಮಾಚರಣೆ ನಡೆಯಲಿದೆ. ಎರಡೂ ಕಡೆಗಳಲ್ಲಿ ವಿಶೇಷವಾಗಿ ನಡೆಯುವ ದಶಮಂಟಪಗಳ ಶೋಭಾಯಾತ್ರೆ ರಾತ್ರಿಯಿಡೀ ಕಂಗೊಳಿಸಲಿದ್ದು, ಈ ಶೋಭಾಯಾತ್ರೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಮಡಿಕೇರಿ ಹಾಗೂ ಗೋಣಿಕೊಪ್ಪಲು ನವವಧುವಿನಂತೆ ಶೃಂಗಾರಗೊAಡಿದೆ. ವಿದ್ಯುತ್ ಅಲಂಕಾರಗಳು ಗಮನ ಸೆಳೆಯುತ್ತಿದ್ದು, ಸ್ಥಳೀಯರಲ್ಲದೆ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎರಡೂ ಕಡೆಗಳಲ್ಲಿ ಶಾಂತಿಯುತ ದಸರಾ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದೆ. ವಿಜಯದಶಮಿಯ ಮುನ್ನಾದಿನದ ಆಯುಧ ಪೂಜೋತ್ಸವದ ಸಡಗರೊಂದಿಗೆ ಮಂಗಳವಾರದಿAದಲೇ ಹಬ್ಬದ ಕಳೆ ರಂಗೇರುತ್ತಿದೆ. ಹಬ್ಬದ ಸಡಗರಕ್ಕೆ ವರುಣನ ಆತಂಕವಿರುವುದು ಮಾತ್ರ ಒಂದಷ್ಟು ಸಮಸ್ಯೆಯಾಗುತ್ತಿದೆ.
ಮಡಿಕೇರಿ
ಮಡಿಕೇರಿ ದಸರಾ ಸಮಿತಿ, ನಗರಸಭೆ, ದಶಮಂಟಪ ಸಮಿತಿ, ಆಯಾ ಮಂಟಪ ಸಮಿತಿಯವರು ಯಶಸ್ವಿ ಉತ್ಸವ ಆಚರಣೆಗೆ ಅಗತ್ಯ ತಯಾರಿ ಮಾಡಿಕೊಳ್ಳುತ್ತಿವೆ. ಹತ್ತು ದೇವಾಲಯಗಳ ಚಲನವಲನ ಪೌರಾಣಿಕ ಕಥಾ ಹಿನ್ನೆಲೆಯುಳ್ಳ ದೃಶ್ಯಗಳನ್ನು ಪ್ರತಿಬಿಂಬಿಸುವ ಶೋಭಾಯಾತ್ರೆ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಹೊಂದಲಾಗಿದೆ. ಬುಧವಾರ ಸಂಜೆ ೪ ರಿಂದಲೇ ನಗರಕ್ಕೆ ವಾಹನ ಸಂಚಾರ ನಿಷೇಧಿಸಲಾಗಿದ್ದು ನಗರದೊಳಗೂ ವಾಹನ ಸಂಚಾರ-ನಿಲುಗಡೆಯನ್ನು ನಿರ್ಬಂಧಿಸಲಾಗಿದೆ. ವಾಹನ ನಿಲುಗಡೆಗೆ ಪೊಲೀಸ್ ಇಲಾಖೆ ಒಂದಷ್ಟು ನಿರ್ದಿಷ್ಟ ಸ್ಥಳಗಳನ್ನು ಗುರುತು ಮಾಡಿದೆ. ಮಡಿಕೇರಿ ನಗರದಲ್ಲಿ ದಸರಾ ಕಾರ್ಯನಿರ್ವಹಣೆಗೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸೇರಿ ೧೪೫೧ ಮಂದಿಯನ್ನು ನಿಯೋಜಿಸಲಾಗಿದೆ. ಸಿಸಿ ಕ್ಯಾಮರಾಗಳು, ಹೆಲ್ಪ್ ಡೆಸ್ಕ್, ಇನ್ನಿತರ ಅಗತ್ಯ ವ್ಯವಸ್ಥೆಗಳನ್ನು ಇಲಾಖೆ ಕಲ್ಪಿಸುತ್ತಿದೆ. ದಶಮಂಟಪಗಳ ತಯಾರಿ ಪ್ರಕ್ರಿಯೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಗೋಣಿಕೊಪ್ಪಲು
ಗೋಣಿಕೊಪ್ಪಲು ಪಟ್ಟಣವೂ ಆಯುಧ ಪೂಜೆಯ ಸಂಭ್ರಮದೊAದಿಗೆ ವಿಜಯದಶಮಿ ಹಾಗೂ ಶೋಭಾಯಾತ್ರೆಗೆ ಸಜ್ಜುಗೊಂಡಿದೆ. ಇಲ್ಲಿನ ದಸರಾ ಸಮಿತಿ, ದಶಮಂಟಪ ಸಮಿತಿಗಳು ವ್ಯವಸ್ಥಿತ ಉತ್ಸವ ಆಚರಣೆಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಗೋಣಿಕೊಪ್ಪಲುವಿನಲ್ಲಿ ತಾ. ೨೧ರ ಅಪರಾಹ್ನ ನಡೆಯುವ ಸ್ತಬ್ದಚಿತ್ರ ಪ್ರದರ್ಶನವೂ ವಿಶೇಷ ಗಮನ ಸೆಳೆಯಲಿದೆ. ಗೋಣಿಕೊಪ್ಪಲು ಬಂದೋಬಸ್ತ್ಗಾಗಿ ೬೧೦ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಧ್ವನಿವರ್ಧಕ
ನ್ಯಾಯಾಲಯದ ಆದೇಶದಂತೆ ರಾತ್ರಿ ೧೦ ಗಂಟೆಯವರೆಗೆ ಮಾತ್ರ ಧ್ವನಿವರ್ಧಕಗಳ ಬಳಕೆಗೆ ಅವಕಾಶವಿದೆ. ಇದನ್ನು ಉಲ್ಲಂಘಿಸುವ ಮಂಟಪ ಸಮಿತಿಗಳ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಸ್ಪಿ ಬಿಂದುಮಣಿ ಅವರು ಈಗಾಗಲೇ ಮಾಹಿತಿ ನೀಡಿದ್ದಾರೆ.