ಮಡಿಕೇರಿ, ಅ. ೧೯: ನಗರದ ದೇಚೂರು ಶ್ರೀ ರಾಮ ಮಂದಿರ ದೇವಾಲಯ ದಸರಾ ಮಂಟಪ ಸಮಿತಿ ೧೦೮ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎಸ್. ಜಿತೇಂದ್ರ ರೈ ತಿಳಿಸಿದ್ದಾರೆ.

ಎರಡು ಟ್ರಾö್ಯಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ಗಣಪತಿಯಿಂದ ಶತಮಹಿಷಿಯ ಸಂಹಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್‌ನಿAದ ಲೈಟಿಂಗ್ ಬೋರ್ಡ್ ತರಿಸಲಾಗುತ್ತಿದ್ದು, ಕೇರಳದ ಟರ್ಬೋ ಸಂಸ್ಥೆಯವರು ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ ವ್ಯವಸ್ಥೆ ಮಾಡಲಿದ್ದಾರೆ. ಫ್ಲಾಟ್‌ಫಾರಂ ನಿರ್ಮಾಣ, ಟ್ರಾö್ಯಕ್ಟರ್ ಸೆಟ್ಟಿಂಗ್ಸ್, ಸೆಟ್‌ವರ್ಕ್ನ್ನು ಮಡಿಕೇರಿಯ ಡಿ ಕ್ರಿಯೇಷನ್ಸ್ನ ನಿತೀಶ್, ಗಣೇಶ್, ಪ್ರಜ್ವಲ್ ಮತ್ತು ತಂಡದವರು ಮಾಡಲಿದ್ದಾರೆ. ೧೮ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಸಮಿತಿ ಸದಸ್ಯರೆ ಕಲಾಕೃತಿಗಳಿಗೆ ಚಲನವಲನ ವ್ಯವಸ್ಥೆ ಮಾಡಲಿದ್ದಾರೆ. ೨೦ ಲಕ್ಷ ರೂ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಪೂಕೋಡ್‌ನ ವಾದ್ಯಗೋಷ್ಠಿ ಮಂಟಪವನ್ನು ಮುನ್ನಡೆಸಲಿದೆ ಎಂದು ಜಿತೇಂದ್ರ ರೈ ಮಾಹಿತಿ ನೀಡಿದ್ದಾರೆ.

- ಉಜ್ವಲ್ ರಂಜಿತ್