ವೀರಾಜಪೇಟೆ, ಅ. ೧೯: ತಾಯಿ ಕಾವೇರಿಯ ಪವಿತ್ರ ತೀರ್ಥೋದ್ಭವ ಹಿನ್ನೆಲೆ ವಿರಾಜಪೇಟೆಯಿಂದ ತಲಕಾವೇರಿವರೆಗೆ ಸುಮಾರು ೫೮ ಕಿ.ಮೀ. ದೂರವನ್ನು ೧೫ ಮಂದಿ ಭಕ್ತರು ಪಾದಯಾತ್ರೆ ಮೂಲಕ ಕ್ರಮಿಸಿ, ಆರನೇ ವರ್ಷದ ಯಾತ್ರೆಯನ್ನು ನೆರವೇರಿಸಿದರು.

ಶುಕ್ರವಾರ ಮುಂಜಾನೆ ವೀರಾಜಪೇಟೆಯಿಂದ ಆರಂಭಗೊAಡ ಪಾದಯಾತ್ರೆ ಕದನೂರು, ಕಡಂಗ, ನಾಪೋಕ್ಲು, ನೆಲಜಿ, ಬಲ್ಲಮಾವಟಿ ಹಾಗೂ ಅಯ್ಯಂಗೇರಿ ಮಾರ್ಗವಾಗಿ ಸಾಗಿ ಸಂಜೆ ೬.೩೫ಕ್ಕೆ ಭಾಗಮಂಡಲ ತಲುಪಿತು. ಯಾತ್ರಾರ್ಥಿಗಳಿಗೆ ಬೆಳಗಿನ ಉಪಾಹಾರವನ್ನು ಕೋಚಮಂಡ ವಿಜಯ ಶೀಲ ಹಾಗೂ ಕುಟುಂಬದವರು, ಮಧ್ಯಾಹ್ನದ ಉಪಾಹಾರವನ್ನು ಕೇಟೋಳಿರ ಡಾಲಿ ಹಾಗೂ ಕುಟುಂಬದವರು ಮತ್ತು ಸಂಜೆಯ ಫಲಾಹಾರವನ್ನು ಪುಲಿಕೋಟ್ ಮುಕ್ಕಾಟಿರ ಕುಟುಂಬದವರು ಒದಗಿಸಿ ಸಹಕರಿಸಿದರು.

ಶನಿವಾರ ಭಾಗಮಂಡಲದಿAದ ವಿವಿಧ ಸಂಘಟನೆ ಗಳೊಂದಿಗೆ ಕಾವೇರಿ ಭಜನೆ ಮಾಡುತ್ತಾ ಪಾದಯಾತ್ರೆ ಮುಂದುವರಿಸಿದ ಭಕ್ತರು, ತೀರ್ಥೋದ್ಭವಕ್ಕೂ ಮುನ್ನ ತಲಕಾವೇರಿ ತಲುಪಿದರು. ಬಳಿಕ ತಾಯಿ ಕಾವೇರಿಯ ಪವಿತ್ರ ತೀರ್ಥವನ್ನು ಸ್ವೀಕರಿಸಿ, ವಿವಿಧೆಡೆ ಭಕ್ತರಿಗೆ ತೀರ್ಥಪ್ರಸಾದ ವಿತರಿಸಿದರು. ತಾಯಿ ಕಾವೇರಿಯ ಮೇಲಿನ ಅಪಾರ ಭಕ್ತಿ ಹಾಗೂ ಧಾರ್ಮಿಕ ನಂಬಿಕೆಯಿAದ ಪ್ರತಿವರ್ಷ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿಯೂ ೧೫ ಮಂದಿ ಭಕ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪಾದಯಾತ್ರೆಯಲ್ಲಿ ಚೆಟ್ಟೋಳಿರ ಶರತ್ ಸೋಮಣ್ಣ, ಮುರುವಂಡ ಸಾವನ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ, ಚೈಯ್ಯಂಡ ಕೀರ್ತನ್ ಅಯ್ಯಪ್ಪ, ನೆಲ್ಲಚಂಡ ಪ್ರಕಾಶ್ ನಾಣಯ್ಯ, ನಿಖಿಲ್ ಮಂಡೇಪAಡ, ಚಂಬAಡ ಭವನ್ ಪೊನ್ನಣ್ಣ, ಚೋಕಂಡ ಕರಿಯಪ್ಪ, ಪೊನ್ನೋಲತಂಡ ಶರಣು ತಮ್ಮಯ್ಯ, ನಂಬಿಯಪAಡ ಸೋಮೇಶ್, ಮಂಡೇಪAಡ ಆಯುಷ್ ಮಂದಣ್ಣ, ಪಳಂಗAಡ ರಯಾನ್ ತಮ್ಮಯ್ಯ ಸೇರಿದಂತೆ ಮೂವರು ಯುವತಿಯರಾದ ಮುರುವಂಡ ಸ್ಪೂರ್ತಿ ಸೀತಮ್ಮ, ಮುರುವಂಡ ಮುತ್ತಮ್ಮ ಕುಟ್ಟಪ್ಪ ಹಾಗೂ ಮುರುವಂಡ ನಿಹಾರಿಕಾ ಅಣ್ಣಯ್ಯ ಭಾಗವಹಿಸಿದ್ದರು. ಮುದ್ದಿಯಡ ಕರಣ್ ಕಾವೇರಪ್ಪ ಸ್ವಯಂಸೇವಕರಾಗಿ ಸಹಕರಿಸಿದರು.