ಶನಿವಾರಸಂತೆ, ಅ.೧೯: ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಮೈಸೂರು ದಸರಾ ಮಹೋತ್ಸವ ಸಮಿತಿ ಹಾಗೂ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಸಹಯೋಗದಲ್ಲಿ ಮೈಸೂರಿನ ರಾಷ್ಟçಕವಿ ಡಾ.ಜಿ.ಎಸ್. ಶಿವರುದ್ರಪ್ಪ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ವಿವಿಧ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಕೊಡಗಿನ ಸಾಹಿತಿ ಶನಿವಾರಸಂತೆಯ ಲಾವಣ್ಯ ಮೋಹನ್ ಅವರ ೬ ನೇ ಕೃತಿ ಕುಂತಿಪುತ್ರಿ ಕವನ ಸಂಕಲನ ಲೋಕಾರ್ಪಣೆಗೊಂಡಿತು. ಬೆಂಗಳೂರು ದೂರದರ್ಶನ ಹಾಗೂ ಆಕಾಶವಾಣಿ ಕೇಂದ್ರದ ವಿಶ್ರಾಂತ ನಿರ್ದೇಶಕಿ, ಖ್ಯಾತ ಬರಹಗಾರ್ತಿ ಹಾಗೂ ಮಾಧ್ಯಮ ತಜ್ಞೆ ಡಾ. ನಿರ್ಮಲಾ ಸಿ. ಯಲಿಗಾರ ಕಾರ್ಯಕ್ರಮ ಉದ್ಘಾಟಿಸಿ, ಕೃತಿಗಳ ಬಿಡುಗಡೆ ಮಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ. ಮಾನಸ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಲಾವಣ್ಯ ಮೋಹನ್, ರಶ್ಮಿ ಕೆ. ವಿಶ್ವನಾಥ್ ಹಾಗೂ ಕೆ.ಎಲ್. ನಾಗರಾಜ್ ಉಪಸ್ಥಿತರಿದ್ದರು.