ಶ್ರೀಮಂಗಲ, ಅ. ೧೯: ಕೋರ್ಟ್ನಲ್ಲಿ ತೀರ್ಮಾನವಾಗದ ಹಲವು ವ್ಯಾಜ್ಯಗಳಿಗೆ ನ್ಯಾಯ ಒದಗಿಸುವ ಮೂಲಕ ಹೆಸರಾಗಿದ್ದ ನಮ್ಮ ಕೊಡವ ಸಮಾಜ ಇದೀಗ ಚಂಗ್ರಾAದಿ ಪತ್ತಲೋದಿಯ ಸಾಂಸ್ಕೃತಿಕ ಕಾರ್ಯಕ್ರಮದಿಂದ ಪ್ರಪಂಚ ವ್ಯಾಪಿ ಖ್ಯಾತಿ ಪಡೆದಿದೆ ಎಂದು ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಮಾಹಿತಿ ನೀಡಿದರು.
ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ನಡೆಯುತ್ತಿರುವ ಚಂಗ್ರಾAದಿ ಪತ್ತಲೋದಿ ಪೈತಾಂಡ್ ನಮ್ಮೆಯ ಪ್ರಥಮ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, ಕೊಡಗಿನ ೮ ನ್ಯಾಯಪೀಠಗಳ ಪೈಕಿ ಪ್ರಥಮ ಸ್ಥಾನದಲ್ಲಿದ್ದ ಪೆರುಮಾಳ್ ಪಟ್ಟಿಗೆ ೪೦೦ಕ್ಕೂ ಹೆಚ್ಚು ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಿದ ಖ್ಯಾತಿಯಿದೆ. ೧೯೭೯ರಲ್ಲಿ ನಮ್ಮ ಸಮಾಜದಲ್ಲಿ ಈ ನ್ಯಾಯಪೀಠ ಸ್ಥಾಪನೆಯಾದ ಮೇಲೆ ೯೦ರ ದಶಕದವರೆಗೆ ಅತ್ಯುತ್ತಮವಾಗಿ ನಡೆಯುತ್ತಿತ್ತು. ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಿ ಹೆಸರು ಗಳಿಸಿದ್ದ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಕಳೆದ ಹತ್ತು ವರ್ಷಗಳಿಂದ ಕಾವೇರಿ ಸಂಕ್ರಮಣದ ಸಂದರ್ಭ ಹತ್ತು ದಿನಗಳವರೆಗೆ ಜನೋತ್ಸವದ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಖ್ಯಾತಿ ಪಡೆಯುವುದರೊಂದಿಗೆ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಯಶಸ್ಸು ಕಾಣುತ್ತಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ಎಲ್ಲರ ಸಹಕಾರ ಬೇಕೆಂದು ಕೋರಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಫಿ ಬೆಳೆಗಾರರು ಹಾಗೂ ದಾನಿಗಳಾದ ಅಜ್ಜಮಡ ಮನು ಮುತ್ತಪ್ಪ ಮಾತನಾಡಿ, ಕೊಡವ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಹೀಗೆ ಮುಂದುವರೆಯಬೇಕೆAದು ಆಶಿಸಿದರು.
ಮೂಂದ್ ನಾಡ್ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್ ಮಾತನಾಡಿ, ಅತ್ಯಂತ ಶ್ರೀಮಂತವಾದ ಕೊಡವ ಸಂಸ್ಕೃತಿಯನ್ನು ವಿಶ್ವಮಟ್ಟಕ್ಕೆ ತಿಳಿಸಬೇಕು ಎಂಬ ಉದ್ದೇಶದಿಂದ ದಸರ, ಗೌರಿ ಗಣೇಶ ಉತ್ಸವದಂತೆ ಕಾವೇರಿ ಸಂಕ್ರಮಣದ ಸಂದರ್ಭ ಕಾವೇರಿ ತೀರ್ಥ ವಿತರಣೆಯೊಂದಿಗೆ ಜನೋತ್ಸವದ ರೀತಿಯಲ್ಲಿ ನಡೆದುಕೊಂಡು ಬರುತ್ತಿರುವ ಚಂಗ್ರಾAದಿ ಪತ್ತಲೋದಿ ಆಚರಣೆ ಇದೀಗ ಹತ್ತನೆ ವರ್ಷಕ್ಕೆ ತಲುಪಿದ್ದು, ಅದ್ಬುತ ಯಶಸ್ಸು ಕಂಡಿದೆ ಎಂದರು.
ಅಜ್ಜಮಡ ಬಿಪಿನ್ ಮುತ್ತಪ್ಪ ಮಾತನಾಡಿದರು. ಈ ಸಂದರ್ಭ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಹಾಗೂ ಸಂಭ್ರಮ ಪೊಮ್ಮಕ್ಕಡ ಕೂಟದ ವತಿಯಿಂದ ಕಳ್ಳಿಚಂಡ ದೀನ ಉತ್ತಪ್ಪ ಅವರ ನಿರ್ದೇಶನದಲ್ಲಿ ನಡೆದ ‘ಸ್ವಾತಂತ್ರö್ಯ ಮಾಪಡೆಲ್ ಕೊಡವ ಮೂಪಂಗ’ ಎಂಬ ಕೊಡವ ಸ್ವಾತಂತ್ರ್ಯ ಹೋರಾಟಗಾರರ ನೃತ್ಯರೂಪಕ ನೆರೆದಿದ್ದವರನ್ನು ಮಂತ್ರಮುಗ್ದರನ್ನಾಗಿಸಿತ್ತು.
ಈ ಸಂದರ್ಭ ಕೊಡವ ಸಮಾಜಕ್ಕೆ ರೂ. ೧.೫೦ ಲಕ್ಷ ದೇಣಿಗೆ ನೀಡಿದ ದಾನಿಗಳಾದ ಅಜ್ಜಮಡ ಮನು ಮುತ್ತಪ್ಪ, ಬಿಪಿನ್ ಮುತ್ತಪ್ಪ ಹಾಗೂ ಚರಿತ್ರ ಬಿಪಿನ್ ಅವರನ್ನು ಸನ್ಮಾನಿಸಲಾಯಿತು.
ಆರಂಭದಲ್ಲಿ ಸಂಭ್ರಮ ಪೊಮ್ಮಕ್ಕಡ ಕೂಟದ ಸದಸ್ಯೆಯರಾದ ಅಜ್ಜಮಡ ಪ್ರಮೀಳ ಕರುಂಬಯ್ಯ ಹಾಗೂ ಚೊಟ್ಟೆಯಾಂಡಮಾಡ ಜಯಶ್ರಿ ಅಪ್ಪಣ್ಣ ಪ್ರಾರ್ಥಿಸಿ, ಕೊಡವ ಸಮಾಜದ ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ ಸ್ವಾಗತಿಸಿ, ಕೊಡವ ಸಮಾಜದ ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ಕೊಡವ ಸಮಾಜದ ಸಹ ಕಾರ್ಯದರ್ಶಿ ಬಾದುಮಂಡ ವಿಷ್ಣು ಕಾರ್ಯಪ್ಪ ವಂದಿಸಿದರು.
ಅತಿಥಿಗಳಾದ ಅಜ್ಜಮಡ ಚರಿತ್ರ ಬಿಪಿನ್, ಕೊಡವ ಸಮಾಜದ ಉಪಾಧ್ಯಕ್ಷ ಮಚ್ಚಮಡ ಸುಮಂತ್, ಖಜಾಂಚಿ ಚಂಗುಲAಡ ಸತೀಶ್, ಕ್ರೀಡಾ ಕಾರ್ಯದರ್ಶಿ ತಡಿಯಂಗಡ ಶಮ್ಮಿ ಸುಬ್ಬಯ್ಯ, ನಿರ್ದೇಶಕರಾದ ಚಂಗುಲAಡ ಅಶ್ವಿನಿ ಸತೀಶ್, ಮುಕ್ಕಾಟಿರ ಸಂದೀಪ್,ತೀತೀರ ಅನಿತ ಸುಬ್ಬಯ್ಯ, ಮಾಣೀರ ದೀಪಕ್, ಸಂಭ್ರಮ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಡ ರೇಶ್ಮ ಕಾರ್ಯಪ್ಪ ಉಪಸ್ಥಿತರಿದ್ದರು.