ಕುಶಾಲನಗರ, ಅ. ೧೯: ಕುಶಾಲನಗರ ಗೌಡ ಸಮಾಜ ವತಿಯಿಂದ ಹಿರಿಯ ಪತ್ರಿಕಾ ವಿತರಕರಾದ ವಿ.ಪಿ ಪ್ರಕಾಶ್ ಕ್ರೀಡಾಪಟು ಪಾಂಡನ ಶೈಲಜಾ ಮೊಣ್ಣಪ್ಪ ಮತ್ತು ಸಾಧಕರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಗೌಡ ಸಮಾಜ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ಪ್ರಣವ್ ಜಾಗೃತಿ ಕರುಂಬಯ್ಯ ಬ್ರಿಜೇಶ್ ಅವರುಗಳನ್ನು ಸನ್ಮಾನಿಸಲಾಯಿತು.
ಸಮಾಜದ ಉಪಾಧ್ಯಕ್ಷರಾದ ಕೊಡಗನ ಹರ್ಷ, ಕುಲ್ಲಚೆಟ್ಟಿ ಕಾಶಿ ಪೂವಯ್ಯ, ಕಾರ್ಯದರ್ಶಿ ಕುಲ್ಲಚನ ಹೇಮಂತ್, ಖಜಾಂಚಿ ಬಳ್ಳಡ್ಕ ವಿಜಯ್ಕುಮಾರ್ ಗೌಡ, ಒಕ್ಕೂಟದ ಅಧ್ಯಕ್ಷರಾದ ಆನಂದ್ ಕರಂದ್ಲಾಜೆ ಮತ್ತಿತರರು ಇದ್ದರು.