ಕುಶಾಲನಗರ, ಅ. ೧೮: ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು (ಹೆಚ್) ಕ್ರೀಡಾಕೂಟ-೨೦೨೬ರ ಸಮಾರೋಪ ಸಮಾರಂಭ ನಡೆಯಿತು. ೨೦೦೭ರ ಅಕ್ಟೋಬರ್ ೧೮ರಂದು ಸ್ಥಾಪನೆಗೊಂಡ ಕೊಡಗು ಸೈನಿಕ ಶಾಲೆ ತನ್ನ ಸ್ಪೂರ್ತಿದಾಯಕ ಪಯಣವನ್ನು ಮುಂದುವರೆಸುತ್ತಾ ತನ್ನ ೧೯ನೇ ಸಂಸ್ಥಾಪನಾ ದಿನಾಚರಣೆಯನ್ನು ಇದೇ ಸಂದರ್ಭ ಆಚರಿಸಿಕೊಂಡಿತು.

ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸ್ಪರ್ಧಿಗಳ ಆಕರ್ಷಕ ಪಥಸಂಚಲನದೊAದಿಗೆ ಪ್ರಾರಂಭಗೊAಡು ಮುಖ್ಯ ಅತಿಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ, ಪದಕ ಹಾಗೂ ಪಾರಿತೋಷಕವನ್ನು ವಿತರಿಸಿದರು.

ಕಠಿಣ ಪರಿಶ್ರಮ, ಶಿಸ್ತುಬದ್ಧ ತರಬೇತಿ ಮತ್ತು ತಂಡದ ಮನೋಭಾವದಿಂದ ಮಾತ್ರ ಸಾಧನೆ ಸಾಧ್ಯ ಎಂದರು. ರಾಷ್ಟಿçÃಯ ಕ್ರೀಡಾಕೂಟವು ಯಶಸ್ವಿಯಾಗಿ ಪೂರ್ಣಗೊಳ್ಳಲು ಶ್ರಮಿಸಿದ ಶಾಲೆಯ ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಆಡಳಿತಾಧಿಕಾರಿ ಸ್ಕಾ÷್ವಡ್ರನ್ ಲೀಡರ್ ದೀಪಕ್ ನಾಯಕ್, ಕ್ರೀಡಾ ಉಸ್ತುವಾರಿ ವೈ.ವಿ. ರಮಣ, ವಿವಿಧ ವಿಭಾಗಗಳಲ್ಲಿ ಶ್ರಮಿಸಿದ ಶಿಕ್ಷಕರು, ಸಂಘಟನಾ ಸಮಿತಿಯ ಸದಸ್ಯರು, ಎಪಿಸಿಟಿ, ಎನ್‌ಸಿಸಿ, ಪಿಐ (ಸಿಬ್ಬಂದಿ, ತರಬೇತುದಾರರು, ತಂಡದ ವ್ಯವಸ್ಥಾಪಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಕ್ರೀಡಾಕೂಟದಲ್ಲಿ ಕೊಡಗು ಸೈನಿಕ ಶಾಲೆ ಕೆಡೆಟ್ ಹೇಮಂತ್ ರೆಡ್ಡಿ ಜೂನಿಯರ್ ಬಾಸ್ಕೆಟ್‌ಬಾಲ್ ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು, ದಿ ವಿಕಾಸ ಶಾಲೆಯ ಕೆಡೆಟ್ ಕನಿಷ್ಕಾ ಪಟೇಲ್ ಬಾಸ್ಕೆಟ್‌ಬಾಲ್ ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಪಡೆದರು.

ಸೈನಿಕ ಶಾಲೆ ಅಮರಾವತಿ ನಗರದ ಕೆಡೆಟ್ ಹರೀಶ್ ಜಿ ವಾಲಿಬಾಲ್ (ಬಾಲಕರ) ವಿಭಾಗದಲ್ಲಿ, ಕೆಡೆಟ್ ಕವಿಯಾ ಸೆಲ್ವನ್ ಕಿರಿಯ ಹುಡುಗರ (ಅಥ್ಲೆಟಿಕ್ಸ್) ವಿಭಾಗದಲ್ಲಿ, ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ನ ಕೆಡೆಟ್ ಚಿತ್ರ ಶ್ರೀ ಕಿರಿಯ ಬಾಲಕಿಯರ ವಿಭಾಗದಲ್ಲಿ, ಸೈನಿಕ ಶಾಲೆ ಅಮರಾವತಿ ನಗರದ ಕೆಡೆಟ್ ಸುದೀಪ್ ಉಪ ಕಿರಿಯ ಹುಡುಗರ (ಅಥ್ಲೆಟಿಕ್ಸ್) ವಿಭಾಗದಲ್ಲಿ ಮತ್ತು ವೇದವ್ಯಾಸ ಶಾಲೆಯ ಕೆಡೆಟ್ ಆರುಷಿ ಉಪ ಕಿರಿಯ ಹುಡುಗಿಯರ (ಅಥ್ಲೆಟಿಕ್ಸ್) ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗಳನ್ನು ಪಡೆದರು.

ಚರ್ಚಾ ಸ್ಪರ್ಧೆಯಲ್ಲಿ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ನ ಕೆಡೆಟ್ ಉತ್ಸವ್ ವಿಷಯದ ಪರವಾಗಿ ಅತ್ಯುತ್ತಮ ಮಾತುಗಾರ ಪ್ರಶಸ್ತಿಯನ್ನು ಹಾಗೂ ಸೈನಿಕ ಶಾಲೆ ಕೊಡಗು ಕೆಡೆಟ್ ಗಗನ್‌ದೀಪ್ ವಿಷಯದ ವಿರುದ್ಧವಾಗಿ ಅತ್ಯುತ್ತಮ ಮಾತುಗಾರ ಪ್ರಶಸ್ತಿಯನ್ನು ಪಡೆದರು.

ಭಾಗವಹಿಸಿದ್ದ ಹನ್ನೊಂದು ಶಾಲೆಗಳಲ್ಲಿ ಅತಿಥೇಯ ಸೈನಿಕ ಶಾಲೆ ಕೊಡಗು ಪ್ರಥಮ ಸ್ಥಾನವನ್ನು, ಸೈನಿಕ ಶಾಲೆ ಅಮರಾವತಿ ನಗರ ದ್ವಿತೀಯ ಸ್ಥಾನವನ್ನು, ವೇದವ್ಯಾಸ ವಿದ್ಯಾಲಯಂ ತೃತೀಯ ಸ್ಥಾನವನ್ನು ಪಡೆಯುವುದರೊಂದಿಗೆ ಸೈನಿಕ ಶಾಲೆ ಕೊಡಗು ಒಟ್ಟಾರೆ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಥಮ ಮಹಿಳೆ ಶ್ರೀಮತಿ ದಿವ್ಯಾ ಸಿಂಗ್ ಮತ್ತಿತರರು ಇದ್ದರು.