ಚೆಟ್ಟಳ್ಳಿ, ಅ. ೧೮: ರೈತರಿಗೆ ವೈಜ್ಞಾನಿಕ ನರ್ಸರಿ ನಿರ್ವಹಣೆಯ ಜ್ಞಾನ ನೀಡುವುದರೊಂದಿಗೆ, ಸಸಿಗಳ ಉತ್ಪಾದನೆಯನ್ನು ಸ್ವಾವಲಂಬಿ ಉದ್ಯಮವನ್ನಾಗಿ ರೂಪಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಚೆಟ್ಟಳ್ಳಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೇಂದ್ರದ ಮುಖ್ಯಸ್ಥ ಡಾ. ಮುರುಳೀದರ್ ಬಿ. ಎಂ. ತಿಳಿಸಿದ್ದಾರೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್) ಕೇಂದ್ರ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವಾದ ಚೆಟ್ಟಳ್ಳಿಯಲ್ಲಿ ತಾ. ೨೮ ರಿಂದ ನವೆಂಬರ್ ೩ ರವರೆಗೆ ತೋಟಗಾರಿಕೆ ಸಸಿಗಳ ಪ್ರದರ್ಶನ ಮತ್ತು ಮಾರಾಟದೊಂದಿಗೆ ವೈಜ್ಞಾನಿಕ ನರ್ಸರಿ ನಿರ್ವಹಣೆ ಹಾಗೂ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ತೋಟಗಾರಿಕಾ ಸಸಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಸಿಗಳ ಉತ್ಪಾದನೆ, ವೈಜ್ಞಾನಿಕ ನರ್ಸರಿ ನಿರ್ವಹಣಾ ವಿಧಾನಗಳು ಹಾಗೂ ನರ್ಸರಿ ಉದ್ಯಮದ ಮೂಲಕ ಸ್ವಯಂ ಉದ್ಯೋಗ ರೂಪಿಸಿಕೊಳ್ಳುವ ಕುರಿತು ಮಾಹಿತಿ ಪಡೆಯಬಹುದು. ರೈತರು, ಕೃಷಿ ಆಸಕ್ತರು ಮತ್ತು ನರ್ಸರಿ ಉದ್ಯಮ ಆರಂಭಿಸಲು ಬಯಸುವವರಿಗೆ ಈ ಕಾರ್ಯಕ್ರಮ ಉಪಯುಕ್ತವಾಗಲಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಂ-ಆರ್‌ಕೆವಿವೈ) ಹಾಗೂ ಕರ್ನಾಟಕ ಸರ್ಕಾರದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ೭೮೯೨೮೮೨೩೫೧, ಇ-ಮೇಲ್: ಛಿhesಛಿheಣಣಚಿಟಟi@gmಚಿiಟ.ಛಿom, ನೋಂದಣಿ: hಣಣಠಿs://ಜಿoಡಿms.gಟe/ಘಿv೮೨ಓ೩ಙಊSಛಿ೧೩ಜಿಓಃಅ೭