ಭಾಗಮಂಡಲ, ಅ. ೧೮: ಕಾವೇರಿ ತೀರ್ಥೋದ್ಭವದ ಮರುದಿನವೂ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಸ್ಥಳೀಯ ಭಕ್ತರು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ತಲಕಾವೇರಿ ಕ್ಷೇತ್ರಕ್ಕೆ ತೆರಳುವ ಮುನ್ನ ಭಾಗಮಂಡಲದಲ್ಲಿ ಭಕ್ತರು ತೀರ್ಥಸ್ನಾನ ಮಾಡುವುದು ವಾಡಿಕೆ. ಭಾನುವಾರವು ಬೆಳಗ್ಗಿನಿಂದಲೇ ಕ್ಷೇತ್ರಕ್ಕೆ ಬಂದ ಸ್ಥಳೀಯ ಭಕ್ತರು ತಮ್ಮ ಪೂರ್ವಜರಿಗೆ ಪಿಂಡ ಪ್ರದಾನ ಮಾಡಿ ಕೇಶ ಮುಂಡನ ಮಾಡಿಸಿಕೊಳ್ಳುತ್ತಿದ್ದುದು ಕಂಡುಬAತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಭಕ್ತರಿಗೆ ಕ್ಷೇತ್ರಗಳಲ್ಲಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ವಿವಿಧ ಸಂಘ-ಸAಸ್ಥೆಗಳಿAದ ತೀರ್ಥ ವಿತರಣೆ ಕಾರ್ಯ ನಡೆಯಿತು. ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ಭಾಗಮಂಡಲದಿAದ ನಾಪೋಕ್ಲುವರೆಗೆ ವಿವಿಧ ಗ್ರಾಮಗಳ ಭಕ್ತರಿಗೆ ರಥಯಾತ್ರೆಯ ಮೂಲಕ ತೀರ್ಥ ವಿತರಣೆ ಮಾಡಲಾಯಿತು.
ಸ್ಥಳೀಯ ಗಜಾನನ ಯುವಕ ಸಂಘದ ಸದಸ್ಯರು ಭಕ್ತರಿಗೆ ತೀರ್ಥವನ್ನು ವಿತರಿಸಿದರು.ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾನಂಡ ಪ್ರಥ್ಯು, ಸದಸ್ಯರಾದ ಚೋಡುಮಾಡ ಎ. ಅಯ್ಯಣ್ಣ, ಕೆ.ಎ. ತಿಮ್ಮಯ್ಯ ಉಪಸ್ಥಿತರಿದ್ದರು. - ಸುನಿಲ್