(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಅ. ೧೮: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ಅನ್ ಮ್ಯಾಪಿಂಗ್ ಎಂದು ಕೊಡಗು ಜಿಲ್ಲೆಯಲ್ಲಿ ೫೮,೮೮೩ ಮತದಾರರಿಗೆ ನೋಟಿಸ್ ಜನರೇಟ್ ಮಾಡಲಾಗಿತ್ತು.

ಆಗಸ್ಟ್ ೨೪ ರಿಂದ ಅ.೧೨ರವರೆಗೆ ನೋಟೀಸ್ ಪಡೆದ ಮತದಾರರ ವಿಚಾರಣೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಇದೀಗ ಕೊಡಗು ಜಿಲ್ಲೆಯಲ್ಲಿ ೫೮,೮೮೩ ಮತದಾರರ ವಿಚಾರಣೆ ಪೂರ್ಣಗೊಂಡಿದೆ.

ಮಡಿಕೇರಿ ಕ್ಷೇತ್ರದಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಡಿಯಲ್ಲಿ ೯,೨೫೨ ಹಾಗೂ ಅನ್ ಮ್ಯಾಪಿಂಗ್ ೯,೫೩೩ ಮತದಾರರು ಸೇರಿ ೧೮,೭೮೫ ಮತದಾರರಿಗೆ ನೋಟಿಸ್ ನೀಡಲಾಗಿತ್ತು.

ವೀರಾಜಪೇಟೆ ಕ್ಷೇತ್ರದಲ್ಲಿ ೨೬,೫೫೮ ಮತದಾರರು ಲಾಜಿಕಲ್ ಡಿಸ್ಕಿçಪೆನ್ಸಿ ಹಾಗೂ ೧೩,೫೫೦ ಮತದಾರರು ಅನ್ ಮ್ಯಾಪಿಂಗ್ ಮತದಾರರು ಸೇರಿ ೪೦,೧೦೮ ಮಂದಿಗೆ ನೋಟೀಸ್ ನೀಡಲಾಗಿತ್ತು. ಅ ೧೨ರವರೆಗೆ ನೋಟೀಸ್ ಪಡೆದ ಮತದಾರರ ವಿಚಾರಣೆ ಪೂರ್ಣಗೊಂಡಿದೆ.

ಎಷ್ಟು ಮಂದಿಯ ದಾಖಲೆ ಅಂಗೀಕಾರ?

ಜಿಲ್ಲೆಯಲ್ಲಿ ಲಾಜಿಕಲ್ ಡಿಸ್ಕಿçಪೆನ್ಸಿ ಅಡಿಯಲ್ಲಿ ೩೫,೮೧೦ ಹಾಗೂ ಅನ್ ಮ್ಯಾಪಿಂಗ್ ೨೩,೦೮೩ ಮತದಾರರು ಸೇರಿ ೫೮,೮೯೩ ೪ಐದನೇ ಪುಟಕ್ಕೆ

೪ಐದನೇ ಪುಟಕ್ಕೆ ಮತದಾರರಿಗೆ ನೋಟೀಸ್ ನೀಡಲು ಗುರುತಿಸಲಾಗಿತ್ತು. ಇದರಲ್ಲಿ ೫೮,೮೮೩ ಮತದಾರರಿಗೆ ನೋಟೀಸ್ ಜನರೇಟ್ ಆಗಿತ್ತು. ನೋಟೀಸ್ ಪಡೆದ ಮತದಾರರೆಲ್ಲರೂ ಕರಡು ಪಟ್ಟಿಯಲ್ಲಿರುವ ಮತದಾರರಾಗಿದ್ದಾರೆ.

೫೮,೮೮೩ ಮತದಾರರ ಪೈಕಿ ಎಷ್ಟು ಮಂದಿ ಮತದಾರರು ದಾಖಲೆಗಳನ್ನು ಸರಿಯಾಗಿ ಸಲ್ಲಿಸಿದ್ದಾರೆ? ಎಷ್ಟು ಮಂದಿ ಮತದಾರರ ದಾಖಲೆಗಳನ್ನು ಅಂಗೀಕರಿಸಲಾಗಿದೆ ಎಂಬುದರ ಬಗ್ಗೆ ಇದುವರೆಗೆ ಚುನಾವಣಾ ಆಯೋಗ ತಿಳಿಸಿಲ್ಲ. ದಾಖಲೆಗಳು ಹೊಂದಾಣಿಕೆಯಾಗದ ಮತದಾರರು ವಿವರವನ್ನು ಇದುವರೆಗೆ ಆಯೋಗ ಪ್ರಕಟಿಸಿಲ್ಲ. ಇದೇ ತಿಂಗಳು ೨೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಆ ದಿನ ನೋಟೀಸ್ ಪಡೆದ ಎಷ್ಟು ಮಂದಿ ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ಉಳಿಯಲಿದ್ದಾರೆ ಎಂಬುದು ತಿಳಿಯಲಿದೆ.

೨೯,೩೮೦ ಅರ್ಜಿ ಸಲ್ಲಿಕೆ

ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ, ಹೆಸರು ತೆಗೆಯುವಿಕೆ,ತಿದ್ದುಪಡಿ ಸೇರಿ ಜೂನ್ ೧೬ರಿಂದ ಅ.೧೫ರವರೆಗೆ ಒಟ್ಟು ೨೯,೩೮೦ ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆ.೨೩ರವರೆಗೆ ಅವಕಾಶ ನೀಡಲಾಗಿತ್ತು. ಸೆ ೨೪ ರಿಂದ ಅ. ೨೨ ವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ನಡೆಯಲಿದೆ.ಜಿಲ್ಲೆಯಲ್ಲಿ ಈoಡಿm-೬ (ಹೊಸ ಸೇರ್ಪಡೆ) ೬,೯೫೦, ಈoಡಿm-೬ಂ - ೨೨, ಈoಡಿm-೭ (ಹೆಸರು ತೆಗೆಯುವಿಕೆ) ೧,೮೮೪, ಈoಡಿm-೮ (ತಿದ್ದುಪಡಿ) ೨೦,೫೨೪ ಅರ್ಜಿಗಳು ಸಲ್ಲಿಕೆಯಾಗಿದೆ. ಅ.೧೫ರವರೆಗೆ ಜಿಲ್ಲೆಯಲ್ಲಿ ಪುರುಷರು ೨,೦೧,೦೩೫ ಹಾಗೂ ೨,೧೦,೮೭೭ ಮಹಿಳಾ ಮತದಾರರು ಸೇರಿ ಒಟ್ಟು ೪,೧೧,೯೧೬ ಮಂದಿ ಮತದಾರರು ಇದ್ದಾರೆ.