ಮಡಿಕೇರಿ, ಅ. ೧೮: ಕುಶಾಲನಗರ ರೆಸಾರ್ಟ್ನಲ್ಲಿ ಕೊಡಗು ಜಿಲ್ಲಾ ಮಟ್ಟದ ಇಎಂಇ ಕಾರ್ಪ್ಸ್ ಡೇ ದಿನಾಚರಣೆಯ ಸಂತೋಷಕೂಟ ನಡೆಯಿತು. ಮುಖ್ಯ ಸಂಘಟಕರಾದ ಮಾಜಿ ಸೈನಿಕ ಎಂ. ಎನ್. ಪೆಮ್ಮಯ್ಯ ಅವರು ನೇತೃತ್ವ ವಹಿಸಿ ಮಾಜಿ ಸೈನಿಕರನ್ನು ಒಂದು ಗೂಡಿಸಿ ಸಮಾರಂಭದ ಯಶಸ್ವಿಗೆ ಕಾರಣರಾದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಿರಂತರ ಬೆಂಬಲ ಮತ್ತು ಪ್ರಯತ್ನದೊಂದಿಗೆ ಒಬ್ಬರನೊಬ್ಬರು ಪರಿಚಯಿಸುತ್ತಾ ಸುಮಾರು ೫೩ ಇಎಂಇ ಯೋಧರ ಗುಂಪನ್ನು ರಚಿಸಲು ಸಾಧ್ಯವಾಯಿತು. ಮುಂದೆ ಸೈನಿಕರ ಕುಟುಂಬ ಸಹಿತ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ರೂಪಿಸಲಾಗುವುದು. ಕೊಡಗಿನ ಯುವ ಜನಾಂಗ ಸೇನೆಗೆ ಸೇರುವ ಬಗ್ಗೆ ಆಸಕ್ತಿ ಹೊಂದಬೇಕು ಎಂದು ಹೇಳಿದರು.
ಈ ಸಂದರ್ಭ ಇಎಂಇ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯರಾದ ೮೪ ವರ್ಷದ ಹವಾಲ್ದಾರ್ ಪೂವಯ್ಯ ಹಾಗೂ ೮೦ ವರ್ಷದ ಹವಾಲ್ದಾರ್ ಸೂರಪ್ಪ ಮತ್ತು ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಕ್ರೀಡಾ ಸಾಧನೆಯನ್ನು ಮಾಡಿ ಲಿಮ್ಕಾ ಪುಸ್ತಕದಲ್ಲಿ ದಾಖಲೆ ಬರೆದ ಪದಕ ವಿಜೇತ ಇತ್ತೀಚಿಗೆ ನಿವೃತ್ತರಾದ ಸುಬೇದಾರ್ ಅಬ್ರಹಾಂ ಅವರನ್ನು ಸನ್ಮಾನಿಸಲಾಯಿತು.
ಪ್ರಾಸ್ತಾವಿಕ ಭಾಷಣ ಮಾಡಿದ ಮಾಜಿ ಸೈನಿಕ ಸುಬೇದಾರ್ ಚಿದಾನಂದ ಇಎಂಇ ಕಾರ್ಪ್ಸ್ ಬೆಳೆದು ಬಂದ ಬಗ್ಗೆ ಹಾಗೂ ನಿವೃತ್ತಿಯ ನಂತರವೂ ಸೇನೆ ಮತ್ತು ಸೇವೆ ಯಲ್ಲಿನ ಗೌರವದ ಸವಿ ನೆನಪುಗಳನ್ನು ಈ ಸಂಘಟನೆ ಜೀವಂತವಾಗಿರಿಸುತ್ತದೆ ಎಂದರು. ಸುಬೇದಾರ್ ಲವಕುಮಾರ್ ವಂದಿಸಿದರು. ಪ್ರಮೀಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಔತಣ ಕೂಟವನ್ನು ಏರ್ಪಡಿಸಲಾಗಿತ್ತು.