ಮಡಿಕೇರಿ, ಅ. ೧೭: ಮಡಿಕೇರಿ ದಸರಾ ಉತ್ಸವ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ತಾ. ೧೮ ರಂದು (ಇಂದು) ಯುವ ದಸರಾ ಏರ್ಪಡಿಸಲಾಗಿದೆ. ಸಂಜೆ ೭ ಗಂಟೆಯಿAದ ಕಲಾ ಸಂಭ್ರಮ ವೇದಿಕೆಯಲ್ಲಿ ಭಾರತೀಯ ಸಾಂಪ್ರದಾಯಿಕ ಉಡುಗೆಯ ಸೌಂದರ್ಯ ನಡಿಗೆ ಕಾರ್ಯಕ್ರಮ ನಡೆಯಲಿದ್ದು, ೩೫ ಮಂದಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ. ೧೦ ತಂಡಗಳು ಭಾಗವಹಿಸಲಿದ್ದು, ೬ ಕೊಡಗು ಜಿಲ್ಲೆಯ ತಂಡಗಳಾಗಿವೆ.

ಇದರೊಂದಿಗೆ ಕಲಾವಿದ ಚೇತನ್ ನಾಯಕ್ ನೇತೃತ್ವದ ಸಕ್ಕರೆ ಮಿಠಾಯಿ ತಂಡದವರಿAದ ಹಾಡುಗಾರಿಕೆ ಹಾಗೂ ಕೇರಳದ ಡ್ರಮ್ಯಾನೋ ಪರ್ಕ್ಯೂಷನ್ ಎಂಬ ವಿಶೇಷ ತಂಡದಿAದ ಲೈವ್ ಡ್ರಂ ಮ್ಯೂಸಿಕ್ ಕಾರ್ಯಕ್ರಮ ನಡೆಯಲಿದೆ.