ಮಡಿಕೇರಿ, ಅ. ೧೬: ಕೊಡವ ಜನಾಂಗದಲ್ಲಿನ ಪ್ರತಿಷ್ಠಿತ ಸಂಸ್ಥೆಯಾಗಿರುವ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಸ್ಥಾನ ಭವಿಷ್ಯದ ದಿನಗಳಲ್ಲೂ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವವನ್ನು ಹುಟ್ಟುಹಾಕಿದ ಪಾಂಡAಡ ಕುಟುಂಬದಲ್ಲೇ ಮುಂದುವರಿಸುವುದರೊAದಿಗೆ ಹಾಲಿ ಅಧ್ಯಕ್ಷರಾಗಿರುವ ಕುಟ್ಟಪ್ಪ ಅವರ ಪುತ್ರ ಪಾಂಡAಡ ಕೆ. ಬೋಪಣ್ಣ ಅವರೇ ಖಾಯಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ ಮಹತ್ವದ ನಿರ್ಣಯವನ್ನು ಅಂಗೀಕರಿಸಲಾಗಿದೆ.

ವೀರಾಜಪೇಟೆ ಕೊಡವ ಸಮಾಜದಲ್ಲಿ ಅಧ್ಯಕ್ಷ ಪಾಂಡAಡ ಬೋಪಣ್ಣ ಅಧ್ಯಕ್ಷತೆಯಲ್ಲಿ ಇಂದು ನಡೆದ ಹಾಕಿ ಅಕಾಡೆಮಿಯ ಮಹಾಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಈ ನಿರ್ಧಾರಕ್ಕೆ ಬರಲಾಯಿತು.

ಆಡಳಿತ ಮಂಡಳಿಯ ಅವಧಿ ಮೂರು ವರ್ಷಗಳ ಕಾಲ ಇರುವಂತೆ ಹಾಗೂ ಕಾರ್ಯಾಧ್ಯಕ್ಷ ಸ್ಥಾನ ಸೇರಿದಂತೆ ಇನ್ನಿತರ ಪದಾಧಿಕಾರಿಗಳ ಸ್ಥಾನಕ್ಕೆ ಮಾತ್ರ ಚುನಾವಣೆ ಮೂಲಕ ಆಯ್ಕೆಗೆ ಅವಕಾಶ ಇರುವಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯ ಕುಟುಂಬಗಳ ಪ್ರತಿನಿಧಿಗಳು ಒಪ್ಪಿಗೆ ನೀಡಿದರು.

ಹಾಕಿ ಅಕಾಡೆಮಿಯ ನೂತನ ಕಚೇರಿ ಕಟ್ಟಡ ನಿರ್ಮಾಣದ ಬಗ್ಗೆ ಚರ್ಚೆ ನಡೆದು ಇದಕ್ಕಾಗಿ ಕಾಕೋಟುಪರಂಬು ಬಳಿ ನಿಗದಿಯಾಗಿರುವ ಸ್ಥಳದಲ್ಲಿ ಹೊಸ ಕಟ್ಟಡವನ್ನು ಸುಮಾರು ರೂ. ೮೦ ಲಕ್ಷದಿಂದ ರೂ. ೧ ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸುವ ಬಗ್ಗೆ ಹಾಗೂ ಇದರ ಯೊಜನೆ ಬಗ್ಗೆ ಅಧ್ಯಕ್ಷ ಬೋಪಣ್ಣ ಹಾಗೂ ಪದಾಧಿಕಾರಿಗಳು ವಿವರವಿತ್ತರು. ಇದಕ್ಕೆ ಅಗತ್ಯವಾದ ಅನುದಾನವನ್ನು ಸಂಗ್ರಹಿಸುವ ಬಗ್ಗೆ ಅನುಮೋದನೆ ಪಡೆದುಕೊಳ್ಳಲಾಯಿತು.

ಅಕಾಡೆಮಿಯ ಬೈಲಾ ತಿದ್ದುಪಡಿ ಕುರಿತು ಚರ್ಚೆ ನಡೆದು ನಿರ್ಣಯ ಅಂಗೀಕರಿಸಲಾಯಿತು. ೨೦೨೭ ರಲ್ಲಿ ಹಾಕಿ ಉತ್ಸವ ಆಯೋಜಿಸಲಿರುವ ಅಜ್ಜಿಕುಟ್ಟಿರ ಕುಟುಂಬದ ಪರವಾಗಿ ಜಂಟಿ ಕಾರ್ಯದರ್ಶಿ ಗಿರೀಶ್ ವಿವರವಿತ್ತರು. ಬೆಂಗಳೂರಿನಲ್ಲಿ ನವೆಂಬರ್ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮೊದಲ ವಾರದಲ್ಲಿ ಲೋಗೋ ಬಿಡುಗಡೆ, ಪೊನ್ನಂಪೇಟೆಯಲ್ಲಿ ಉದ್ಘಾಟನೆ ಹಾಗೂ ಫೈನಲ್ ಪಂದ್ಯವನ್ನು ಹೊನಲು ಬೆಳಕಿನಲ್ಲಿ ಆಯೋಜಿಸುವ ಚಿಂತನೆಯಿದೆ. ಕೊನೆಯ ಹಂತದ ಪಂದ್ಯಗಳನ್ನು ಟರ್ಫ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಟರ್ಫ್ನಲ್ಲಿ ಪಂದ್ಯಾಟ ನಡೆಸಲು ಹಲವರಿಂದ ಆಕ್ಷೇಪಣೆಯೂ ವ್ಯಕ್ತಗೊಂಡಿತು. ಅಕಾಡೆಮಿಯಿಂದ ನಡೆಸಲಾಗಿರುವ ಹಾಗೂ ಮುಂದಿನ ಕಾರ್ಯ ಯೋಜನೆಗಳ ಕುರಿತು ಸಭೆಗೆ ಬೋಪಣ್ಣ ಅವರು ಮಾಹಿತಿ ನೀಡಿದರು.

ಕಳೆದ ಸಾಲಿನ ಮಹಾಸಭೆಯ ವರದಿ ಕುರಿತು ಚರ್ಚೆ, ಲೆಕ್ಕಪತ್ರಗಳ ಮಂಡನೆಯೊAದಿಗೆ ಇನ್ನಿತರ ಆಗು-ಹೋಗುಗಳ ಬಗ್ಗೆ ಚರ್ಚೆ ನಡೆಯಿತು. ಈತನಕದ ಹಾಕಿ ಉತ್ಸವ ನಡೆದುಬಂದ ಬಗ್ಗೆ ಆಯಾ ಉತ್ಸವದಲ್ಲಿ ನಡೆದ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಬೋಪಣ್ಣ ಅವರು ತಿಳಿಸಿದರು.

ಅಕಾಡೆಮಿ ನಿರ್ದೇಶಕ ಮುದ್ದಂಡ ರಶಿನ್ ಸುಬ್ಬಯ್ಯ ಬೈಲಾ ತಿದ್ದುಪಡಿ ಕುರಿತು ವಿಚಾರ ಮಂಡಿಸಿದರು. ಈ ಸಂದರ್ಭ ೨೦೨೫ ರಲ್ಲಿ ಉತ್ಸವ ಆಯೋಜಿಸಿದ ಮುದ್ದಂಡ ಕುಟುಂಬದ ಪ್ರಮುಖರಾದ ಎಂ.ಬಿ. ದೇವಯ್ಯ, ೨೦೨೬ ರ ಸಾಲಿನಲ್ಲಿ ಪಂದ್ಯಾವಳಿ ಆಯೋಜಿಸಿದ ಚೇನಂಡ ಕುಟುಂಬದ ಪರವಾಗಿ ಕಂಬಣಿ ಕರುಂಬಯ್ಯ ಅವರನ್ನು ಸನ್ಮಾನಿಸಲಾಯಿತು.

ಮುಂದಿನ ಉತ್ಸವಗಳ ಸಂದರ್ಭ ವೀಡಿಯೋ ರೆಫರಲ್, ಮಹಿಳಾ ಹಾಕಿ ಪಂದ್ಯಾಟ, ಲೈವ್ ಮಾಹಿತಿ ಇತ್ಯಾದಿಗಳನ್ನು ಅಕಾಡೆಮಿಯ ಜವಾಬ್ದಾರಿಯಲ್ಲಿ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಯಿತು.

ಅಕಾಡೆಮಿ ಕಾರ್ಯಾಧ್ಯಕ್ಷ ಚೆಪ್ಪುಡಿರ ಎಸ್. ಪೂಣಚ್ಚ, ಕಾರ್ಯದರ್ಶಿ ಕುಲ್ಲೇಟಿರ ಅರುಣ್ ಬೇಬ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು. ಅರುಣ್ ಬೇಬ ಸ್ವಾಗತಿಸಿ, ಕುಂಡ್ಯೋಳAಡ ರಮೇಶ್ ಮುದ್ದಯ್ಯ ವಂದಿಸಿದರು.