ಪೊನ್ನಂಪೇಟೆ, ಅ. ೧೫: ಹರಿಯಾಣದ ಸೋನಿ ಪತ್ನಲ್ಲಿ ನಡೆಯಲಿರುವ ೨೦೨೬ನೇ ಸಾಲಿನ ಆಲ್ ಇಂಡಿಯಾ ಬಾಕ್ಸಿಂಗ್ ಕ್ಯಾಂಪ್ಗೆ ಅವಳಿ ಸಹೋದರರಾದ ಮಿನ್ನಂಡ ಲಿಖಿತ್ ಚಿಣ್ಣಪ್ಪ ಹಾಗೂ ಮಿನ್ನಂಡ ಲೇಖಕ್ ಚಂಗಪ್ಪ ಆಯ್ಕೆಯಾಗಿದ್ದಾರೆ.
ಇವರು ಸರ್ವದೈವತಾ ಶಾಲೆಯ ೮ನೇ ತರಗತಿ ವಿದ್ಯಾರ್ಥಿಗಳಾಗಿದ್ದು, ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ಹಾಕಿ ತರಬೇತುದಾರ ಮಿನ್ನಂಡ ಜೋಯಪ್ಪ ಹಾಗೂ ಪ್ರೀತಾ ದಂಪತಿ ಪುತ್ರರು.
ಇವರು ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ನಲ್ಲಿ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು, ತರಬೇತುದಾರರಾದ ಶರತ್ ನಾಯ್ಡು ಮತ್ತು ದೇಯಂಡ ಮೇದಪ್ಪ ತರಬೇತಿ ನೀಡುತ್ತಿದ್ದಾರೆ. ಈ ಅವಳಿ ಸಹೋದರರು ಈ ಹಿಂದೆ ಎರಡು ಬಾರಿ ಸಬ್ ಜೂನಿಯರ್ ವಿಭಾಗದಲ್ಲಿ ರಾಷ್ಟಿçÃಯ ಶಿಬಿರದಲ್ಲಿ ಪಾಲ್ಗೊಂಡಿದ್ದರು.