ಮಡಿಕೇರಿ, ಅ. ೧೫: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ನಗರ ದಸರಾ ಸಮಿತಿ, ಹಾಗೂ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ತಾ.೧೩ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾ ಪ್ರೇಕ್ಷಕರ ಮನ ಸೆಳೆದವು.
ಮಡಿಕೇರಿಯ ಕಲಾ ಕಾವ್ಯ ನಾಟ್ಯ ಶಾಲೆಯ ಕಲವಿದರಿಂದ ಭರತನಾಟ್ಯ, ಮಡಂತ್ಯಾರುವಿನ ನಿಯತಿ ನೃತ್ಯನಿಕೇತನ ತಂಡದವರಿAದ ನೃತ್ಯ ವೈವಿಧ್ಯ, ಹುಬ್ಬಳ್ಳಿಯ ಕುಂದಗೋಡುವಿನ ಭೂಮಿಕ-ದೀಪಿಕಾ ತಂಡದವರಿAದ ಹಾಡುಗಾರಿಕೆ, ಮಕ್ಕಂದೂರಿನ ಸ್ವಪ್ರಯತ್ನ ತಂಡದಿAದ ಜಾನಪದ ನೃತ್ಯ, ನಾಪೋಕ್ಲುವಿನ ಮಾನವೀಯತೆ ಸ್ನೇಹಿತರ ಒಕ್ಕೂಟದಿಂದ ಹಾಡುಕಾರಿಕೆ, ಮಡಿಕೇರಿಯ ಸ್ವಪ್ನ ಶೇಠ್ ತಂಡದಿAದ ಹಾಡುಕಾರಿಕೆ ಕಾರ್ಯಕ್ರಮಗಳು ಜನ ಮನ ಸೂರೆಗೊಂಡವು.