ವೀರಾಜಪೇಟೆ, ಅ. ೧೫: ಚೆಂಬು ಗ್ರಾಮದ ಕುದುರೆಪಾಯ ಭಾಗದ ೯ ಪರಿಶಿಷ್ಟ ಪಂಗಡದ ನಿವಾಸಿಗಳಿಗೆ ಸರಕಾರದ ವತಿಯಿಂದ ಉಚಿತ ಕೊಳವೆ ಬಾವಿ ಕೊರೆಸಿಕೊಟ್ಟು ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಟ್ಟ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಗೆ ಫಲಾನುಭವಿಗಳು ಸನ್ಮಾನಿಸಿದರು.

ಈ ಸಂದರ್ಭ ಇವರಿಗೆ ಸಹಕರಿಸಿದ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಹಾಗೂ ಶಾಸಕರ ವಿಶೇಷ ಅಧಿಕಾರಿ ಬಟ್ಟಕಾಳಂಡ ಮುತ್ತಣ್ಣ ಅವರಿಗೆ ಸಹ ಸನ್ಮಾನಿಸಲಾಯಿತು.

ಈ ಸಂದರ್ಭ ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ವಲಯ ಕಾಂಗ್ರೆಸ್ ಸಮಿತಿಯವರು, ಫಲಾನುಭವಿಗಳಾದ ಕೆ.ಡಿ. ಚನಿಯಪ್ಪ ನಾಯ್ಕ, ವೇಣುಗೋಪಾಲ, ಕೆ.ಕೆ. ಪುರುಷೋತ್ತಮ, ಕೆ.ಐ. ಹೊನ್ನಪ್ಪ, ಕೆ.ಕೆ. ಸದಾಶಿವ, ಈಶ್ವರ ನಾಯ್ಕ (ನೆಲ್ಲಿಕೊಚ್ಚಿ) ಕೆ. ಹರೀಶ್, ರೇವತಿ ರೆಂಗಿಲ್‌ಮೊಟ್ಟೆ ಉಪಸ್ಥಿತರಿದ್ದರು.