ಮಡಿಕೇರಿ, ಅ. ೧೪: ಹಾಕಿ ಇಂಡಿಯಾ ವತಿಯಿಂದ ಉತ್ತರಪ್ರದೇಶದ ಝಾನ್ಸಿಯಲ್ಲಿ ಆರಂಭಗೊAಡಿರುವ ೧೬ನೇ ಹಾಕಿ ಇಂಡಿಯಾ ಸೀನಿಯರ್ ಮೆನ್ ರಾಷ್ಟಿçÃಯ ಚಾಂಪಿಯನ್‌ಶಿಪ್-೨೦೨೬ ರಲ್ಲಿ ಪಾಲ್ಗೊಂಡಿರುವ ಹಾಕಿ ಕರ್ನಾಟಕ ತಂಡದ ಒಟ್ಟು ೧೮ ಆಟಗಾರರ ಪೈಕಿ ಕೊಡಗು ಮೂಲದ ೧೨ ಮಂದಿ ಪಾಲ್ಗೊಂಡಿದ್ದಾರೆ.

ಕೊಡಗಿನವರೇ ಆದ ಆಭರಣ್ ಸುದೇವ್ ತಂಡದ ನಾಯಕರಾಗಿದ್ದು, ಇನ್ನಿತರ ಆಟಗಾರರಾಗಿ ಸುಬ್ರಮಣಿ ಎ.ಸಿ., ಶಾನ್ ಮೊಣ್ಣಪ್ಪ ಎಂ.ಎ., ಯಶವಂತ್ ಕೆ.ಎಂ., ಲಿವಿನ್ ಸಿ.ಪಿ., ಬಿಪಿನ್ ಬಿ.ಆರ್., ವಚನ್ ಅಯ್ಯಪ್ಪ ಎಂ.ಎA., ಸೋಮಯ್ಯ ಕೆ.ಪಿ. ವಚನ್ ಹೆಚ್.ಎ., ದೇಶ್ ಪೂವಯ್ಯ ಎ.ಎ., ಶಮಂತ್ ಸಿ.ಎಸ್., ಆರ್ಯನ್ ಉತ್ತಪ್ಪ ಎಂ.ಡಿ. ತಂಡದಲ್ಲಿ ಇದ್ದಾರೆ. ಉಸ್ತುವಾರಿಗಳಾಗಿಯೂ ಕೊಡಗಿನವರೇ ಆದ ಕೆ.ಕೆ. ಪೂಣಚ್ಚ ಮತ್ತು ಕೆ.ಸಿ. ರಿಕ್ಕಿ ಗಣಪತಿ ತಂಡದಲ್ಲಿದ್ದಾರೆ.