ಮಡಿಕೇರಿ, ಅ. ೧೪: ೨೦೨೬-೨೭ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ ಗ್ರಾಮೀಣ ಕೈಗಾರಿಕಾ ವಿಭಾಗದ ವತಿಯಿಂದ ಗ್ರಾಮೀಣ ಪ್ರದೇಶ/ ಭಾಗದಲ್ಲಿ ಬ್ಯಾಂಕ್ನಿAದ ಸಾಲ ಪಡೆದು ಸ್ಥಾಪಿಸಿರುವ ಕಿರು ಕೈಗಾರಿಕೆಗಳು ಹಾಗೂ ಕುಶಲಕರ್ಮಿಗಳಿಗೆ ‘ಬಡ್ಡಿ ಸಹಾಯಧನ’ ಯೋಜನೆಯು ಚಾಲ್ತಿಯಲ್ಲಿದೆ. ರಾಷ್ಟಿçÃಕೃತ ಹಾಗೂ ಗ್ರಾಮೀಣ ಬ್ಯಾಂಕ್ನಲ್ಲಿ ಗರಿಷ್ಠ ರೂ. ೫ ಲಕ್ಷ ಸಾಲ ಪಡೆದು, ಕ್ರಮಬದ್ಧವಾಗಿ ಮರು ಪಾವತಿಸುತ್ತಿರುವ ಕಿರು ಕೈಗಾರಿಕಾ ಉದ್ದಿಮೆದಾರರು ಮತ್ತು ಕುಶಲಕರ್ಮಿಗಳು ಬಡ್ಡಿ ಸಹಾಯಧನ ಯೋಜನೆಯ ಉಪಯೋಗ ಪಡೆದುಕೊಳ್ಳಲು ಉಪ ನಿರ್ದೇಶಕರು (ಖಾಗ್ರಾ), ಗ್ರಾಮೀಣ ಕೈಗಾರಿಕೆಗಳು, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರು ರಸ್ತೆ ಮಡಿಕೇರಿ ಕಚೇರಿಯಿಂದ ತಾ. ೯ ರಿಂದ ೨೩ ರವರೆಗೆ ಬಡ್ಡಿ ಸಹಾಯಧನ ಪ್ರಸ್ತಾವನೆ ನಮೂನೆ ಅರ್ಜಿಯನ್ನು ಪಡೆದು ನಿಯಮಾನುಸಾರ ತಮ್ಮ ಬ್ಯಾಂಕಿನ ವ್ಯವಸ್ಥಾಪಕರಿಂದ ದೃಢೀಕರಿಸಿ ಕಚೇರಿಗೆ ನೀಡಲು ಕೋರಿದೆ. ಭರ್ತಿ ಮಾಡಿದ ಪಡೆಯಲು ಅರ್ಹರಾಗಿರುತ್ತಾರೆ. ಭರ್ತಿ ಮಾಡಿದ ಬಡ್ಡಿ ಸಹಾಯಧನ ಪ್ರಸ್ತಾವನೆಯನ್ನು ತಾ. ೨೯ ರೊಳಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಉಪ ನಿರ್ದೇಶಕರು, ಗ್ರಾಮೀಣ ಕೈಗಾರಿಕೆ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಹಿನೂರು ರಸ್ತೆ, ಮಡಿಕೇರಿ ಅವರನ್ನು ಖುದ್ದಾಗಿ ಅಥವಾ ೦೮೨೭೨-೨೨೮೧೧೩ ನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿ.ಪಂ. ಗ್ರಾಮೀಣ ಕೈಗಾರಿಕಾ ವಿಭಾಗದ ಉಪ ನಿರ್ದೇಶಕ (ಖಾಗ್ರಾ) ರಘು ತಿಳಿಸಿದ್ದಾರೆ.