ನಾಪೋಕ್ಲು, ಅ. ೧೪: ಇಲ್ಲಿಯ ಹಳೆ ತಾಲೂಕಿನ ಭಗವತಿ ಮಹಿಳಾ ಸಮಾಜದ ೨೦೨೫ -೨೬ರ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಉತ್ತಮ ಅಂಗನವಾಡಿ ಶಿಕ್ಷಕಿ ಗೌರವಕ್ಕೆ ಪಾತ್ರರಾಗಿದ ಪೊರ್ಕೊಂಡ ಭಾಗ್ಯವತಿ (ಕಾಂತಿ) ಅವರನ್ನು ಮಹಿಳಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಭಗವತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸ ಲಾಗಿದ್ದ ಮಹಾಸಭೆಯಲ್ಲಿ ಭಗವತಿ ಮಹಿಳಾ ಸಮಾಜದ ಅಧ್ಯಕ್ಷೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಾಪೋಕ್ಲು ಮಹಿಳಾ ಸಮಾಜದ ಅಧ್ಯಕ್ಷ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಭಗವತಿ ಮಹಿಳಾ ಸಮಾಜದ ಉಪಾಧ್ಯಕ್ಷೆ
ನಾಟೋಳಂಡ ಕಸ್ತೂರಿ, ಕಾರ್ಯ ದರ್ಶಿ ಬೊಪ್ಪಂಡ ಸ್ವಾತಿ ವಿರನ್, ಸಹಕಾರ್ಯದರ್ಶಿ ಶಿವಚಾಳಿಯಂಡ ರೋಹಿಣಿ, ನಿರ್ದೇಶಕರಾದ ಶಿವಚಾಳಿಯಂಡ ಪಾರ್ವತಿ ಬೆಳ್ಳಿಯಪ್ಪ, ಶಿವಚಾಳಿಯಂಡ ದೇವಕಿ, ಶಿವಚಾಳಿಯಂಡ ಭೋಜಮ್ಮ ರಾಣಿ, ಚೀಯಕಪೂವಂಡ ಮುತ್ತುರಾಣಿ, ಬೊಪ್ಪಂಡ ಯಶೋಧ, ಭಾಗ್ಯವತಿ (ಕಾಂತಿ), ಅರೆಯಡ ಸರಸು, ನೂರಂಬಾಡ ಗಾಯತ್ರಿ, ಕಲ್ಲೇಂಗಡ ಪವಿತ್ರ, ಅಜ್ಜೇಟಿರ ರಾಣಿ ಪಳಂಗಪ್ಪ ಸೇರಿದಂತೆ ಸಮಾಜದ ಸದಸ್ಯರು ಉಪಸ್ಥಿತರಿದ್ದರು.