ಮಡಿಕೇರಿ, ಅ. ೧೩: ಮಡಿಕೇರಿ ನಗರ ಹಾಗೂ ಗೋಣಿಕೊಪ್ಪ ಸೇರಿದಂತೆ ಸುಂಟಿಕೊಪ್ಪದಲ್ಲಿ ನಡೆಯಲಿರುವ ಆಯುಧ ಪೂಜೆ ಉತ್ಸವ ಅಂಗವಾಗಿ ದಸರಾ ಹಬ್ಬದ ಪ್ರಯುಕ್ತ ಸಾರ್ವಜನಿಕ ಹಿತಾಸಕ್ತಿಯಿಂದ ಅಬಕಾರಿ ಕಾಯ್ದೆ ೧೯೬೫ರ ಕಲಂ ೨೧ ರಲ್ಲಿ ಜಿಲ್ಲೆಯ ಕೆಲವೆಡೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ಸ್ಥಳಗಳ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೊಟೇಲ್, ಮತ್ತು ಕ್ಲಬ್ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಲಾಗಿದೆ.
ಸುಂಟಿಕೊಪ್ಪದಲ್ಲಿ ನಡೆಯಲಿರುವ ಆಯುಧ ಪೂಜೋತ್ಸವ ಅಂಗವಾಗಿ ತಾ.೨೦ ರಂದು ಬೆಳಗ್ಗೆ ೬ ಗಂಟೆಯಿAದ ಮಧ್ಯರಾತ್ರಿ ೧೨ ಗಂಟೆಯವರೆಗೆ ಸುಂಟಿಕೊಪ್ಪ, ೭ನೇ ಹೊಸಕೋಟೆ, ಕಂಬಿಬಾಣೆ ಮತ್ತು ಕೊಡಗರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವರೆಗೆ ಮದ್ಯ ಮಾರಾಟ ನಿಷೇಧ.
ತಾ. ೨೧ ಬೆಳಿಗ್ಗೆ ೬ ಗಂಟೆಯಿAದ ತಾ.೨೨ರ ಸಂಜೆ ೬ ಗಂಟೆಯವರೆಗೆ ಮಡಿಕೇರಿ ನಗರ ಠಾಣಾ ಸರಹದ್ದಿನ ಸುತ್ತಮುತ್ತ ೫ ಕಿ.ಮೀ ವ್ಯಾಪ್ತಿಯಲ್ಲಿ ಹಾಗೂ ಸುಂಟಿಕೊಪ್ಪ, ಕುಶಾಲನಗರ ಹಾಗೂ ಬೆಟ್ಟಗೇರಿ, ಮೂರ್ನಾಡು ನಗರ ವ್ಯಾಪ್ತಿಯವರೆಗೆ
ತಾ. ೨೧ರ ಬೆಳಿಗ್ಗೆ ೬ ಗಂಟೆಯಿAದ ತಾ.೨೨ ಬೆಳಿಗ್ಗೆ ೧೦ ಗಂಟೆಯವರೆಗೆ ಗೋಣಿಕೊಪ್ಪ ನಗರ ಹಾಗೂ ಅದರ ಸುತ್ತಮುತ್ತಲಿನ ೧೦ ಕಿ.ಮೀ ವ್ಯಾಪ್ತಿಯಲ್ಲಿ ಹಾಗೂ ಪೊನ್ನಂಪೇಟೆ ತಾಲೋಕಿನಾದ್ಯಂತ ಮತ್ತು ವೀರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿ, ಬಿಟ್ಟಂಗಾಲ, ಸಿದ್ದಾಪುರ ರಾಣಾ ವ್ಯಾಪ್ತಿ, ಪಾಲಿಬೆಟ್ಟ ವ್ಯಾಪ್ತಿಯ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.