ವೀರಾಜಪೇಟೆ, ಅ. ೧೩: ಕೇರಳದ ಮೀನಂಗಡಿಯಲ್ಲಿ ಒಕೊನಾವಾ ಶೋರಿನ್ ಮತ್ತು ಬಾಯಾಶಿ ರೀಯೊ ಕರಾಟೆ ಸಂಸ್ಥೆ ಏರ್ಪಡಿಸಿದ್ದ ಕರಾಟೆ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಯೂಚೀರಿಯೊ ಕರಾಟೆ ವಿದ್ಯಾರ್ಥಿಗಳಾದ ಅಲ್ವಿನ್ ಆಂಟನಿ, ಯಶವಂತ, ಮಿನ್ಹಾ ಕದೀಜಾ, ಜಿಯಾ ಫಾತಿಮಾ, ದೀಪ ಅನ್ವಿತಾ, ಫುದೈಲ್ ರಾಮದಾನ್, ಮೊಹಮ್ಮದ್ ಜಿಯಾದ್, ಶಶಾಂಕ್, ಜಯಶ್ರೀ, ಮುಲ್ ಉಸ್ಮಾನ್ ಅವರುಗಳು ಭಾಗವಹಿಸಿ ಚಿನ್ನ, ಬೆಳ್ಳಿ, ಮತ್ತು ಕಂಚಿನ ಪದಕವನ್ನು ಪಡೆದಿದ್ದಾರೆೆ.

ಇವರು ವೀರಾಜಪೇಟೆ ಯೂಚೀರಿಯೊ ಕರಾಟೆ ಮುಖ್ಯ ತರಬೇತಿದಾರ ರಾದ ಕ್ಯೋಶಿ ಹೆಚ್.ಆರ್. ಶಿವಪ್ಪ ಅವರ ವಿದ್ಯಾರ್ಥಿಗಳು.