ನಾಪೋಕ್ಲು, ಅ. ೧೩: ಕೊಡಗು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾದ ರಾಜ್ಯ ಹೆದ್ದಾರಿಯ ಅರಂತೋಡು ಸಮೀಪ ಕೊಂಡಕೇರಿ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.
ಮಡಿಕೇರಿ ನಿವಾಸಿ ರೇಖಾ ಗಾಯಗೊಂಡ ಮಹಿಳೆ. ಅಪಘಾತ ಸಂಭವಿಸಿದ ವೇಳೆ ಕಾರಿನಲ್ಲಿದ್ದ ಅವರ ಪತಿ ಸಿದ್ಧಪ್ಪ ಹಾಗೂ ಮಗಳು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಕಾರು ಮಡಿಕೇರಿಯಿಂದ ಸುಳ್ಯ ಕಡೆಗೆ ತೆರಳುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ರೇಖಾ ಅವರನ್ನು ಅರಂತೋಡು ಸಮೃದ್ಧಿ ಆಂಬ್ಯುಲೆನ್ಸ್ ಚಾಲಕ ಶರತ್ ಅಡ್ಯಡ್ಕ ಅವರು ತಕ್ಷಣವೇ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.